Friday, 20th September 2024

ರಾಜಪ್ರಭುತ್ವಕ್ಕೆ ಸವಾಲೆಸೆದು ಕಾಫಿಗೆ ತೃಪ್ತರಾಗೋದೇಕೆ?

ವಿಶ್ಲೇಷಣೆ
ಎಂ.ಜೆ.ಅಕ್ಬರ್ ಪತ್ರಕರ್ತ, ಸಂಸದ

ಸೋಮವಾರದ ಒಂದು ಸುಂದರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ನವಿಲಿಗೆ ಕೈಯಾರೆ ಕಾಳು ತಿನ್ನಿಸು ತ್ತಿರುವ ಹೊತ್ತಿಗೆ ಸರಿಯಾಗಿ ದೆಹಲಿಯ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ನ ಭಿನ್ನಮತೀಯರು ಎಬ್ಬಿಸಿದ ಗದ್ದಲ ಜೋರಾಗಿ ಕೇಳಿಸತೊಡಗಿತು.

ಕೆಲವೊಮ್ಮೆ ಪರಸ್ಪರ ಸಂಬಂಧವೇ ಇಲ್ಲದ ಘಟನೆಗಳೂ ಉತ್ತಮ ಉಪಮೆಯಾಗುವುದುಂಟು. ಈ ಕಾಕತಾಳೀಯ ಘಟನೆಗಳ ಫೋಟೋಗಳು ಭಿನ್ನ ಮನಸ್ಥಿತಿಯನ್ನು ಚೆನ್ನಾಗೇ ಸೆರೆಹಿಡಿದಿದ್ದವು. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದ ಕಾಂಗ್ರೆಸ್ ಪಕ್ಷದ 23 ನಾಯಕರಿಗೆ ತಮ್ಮ ಪಕ್ಷದ ಬಗ್ಗೆ ಆತಂಕಗೊಳ್ಳಲು ಬಲವಾದ ಕಾರಣಗಳೇ ಇದ್ದವು.

ಮುಖ್ಯವಾಗಿ, ಪಕ್ಷದೊಳಗಿರುವ ಭಿನ್ನಮತ, ನಿರ್ಧಾರ ಕೈಗೊಳ್ಳಲಾಗದ ಸ್ಥಿತಿ ಹಾಗೂ ಸರಕಾರದ ವಿರುದ್ಧ ಅಪ್ರಯೋಜಕ ಅಸ್ತ್ರಗಳನ್ನು ಪ್ರಯೋಗಿಸಿ ವಿಫಲ ದಾಳಿ ನಡೆಸುವ ಪ್ರಕಲ್ಪಿತ ಉತ್ತರಾಧಿಕಾರಿ ರಾಹುಲ್ ಗಾಂಧಿಯ ಕೆಲಸಕ್ಕೆ ಬಾರದ ನಡೆಗಳು ಹೀಗೆ ಅವರಲ್ಲಿ ಸಾಕಷ್ಟು ವಿಷಯಗಳಿದ್ದವು. ಅವರು ಪತ್ರ ಬರೆದಿದ್ದುದು ಇವೆಲ್ಲವುಗಳಿಗೆ ಸ್ಪಷ್ಟನೆ ಕೇಳುವುದಕ್ಕಾಗಿಯೇ ಹೊರತು ಸಂಘರ್ಷ ನಡೆಸುವುದಕ್ಕಾಗಿರಲಿಲ್ಲ. ಪಕ್ಷವನ್ನು ಪುನರುತ್ಥಾನ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತೇ ಹೊರತು
ಬಂಡಾಯವಾಗಿರಲಿಲ್ಲ. ಆದರೆ, ಎಂದಿನಂತೆ ಕಾಂಗ್ರೆಸ್ ಪಕ್ಷ ಮೂಲ ಉದ್ದೇಶವನ್ನು ತಿರುಚಿ ಅವರ ಎಚ್ಚರಿಕೆಯನ್ನೇ ಆತಂಕದ ವಿಚಾರವೆಂಬಂತೆ ಬಿಂಬಿಸಿತು.

ಮೂಲ ಮಾದರಿ ಕರಗಿಹೋಗಿದ್ದಾಗ ಸುಧಾರಣೆಯ ಅಗತ್ಯ ಬೀಳುತ್ತದೆ. ವಸ್ತುನಿಷ್ಠವಾಗಿ ನಿಷ್ಕರ್ಷೆ ಮಾಡಿದರೆ ಕಾಂಗ್ರೆಸ್ ಪಕ್ಷದ ಅಸ್ಥಿಪಂಜರದಲ್ಲಿ ಒಂದೊಂದೇ ಮೂಳೆಗಳು ಕಳಚಿಬೀಳತೊಡಗಿದ್ದುದು ಅವರಿಗೇ ಕಾಣಿಸುತ್ತಿತ್ತು. 23 ಹಿರಿಯ ನಾಯಕರು
ನೇರಾನೇರ ತಮ್ಮ ಆತಂಕವನ್ನು ತೋಡಿಕೊಂಡಿದ್ದರು. ತಮ್ಮ ಪಕ್ಷ ಗೊಂದಲದಲ್ಲಿ ಮುಳುಗಿದೆ ಎಂಬ ಬಗ್ಗೆ ಅವರಿಗೆ ಸ್ಪಷ್ಟತೆ ಯಿತ್ತು. ಹೀಗಾಗಿ ನಾಯಕತ್ವದ ಬಗ್ಗೆ  ಸ್ಪಷ್ಟ ಹಾಗೂ ನಿರ್ಣಾಯಕ ನಿಲುವನ್ನು ಅವರು ಬಯಸಿದ್ದರು.

1998ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 140 ಸ್ಥಾನ ಗಳಿಸಿದಾಗ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯನ್ನು ಬದಲಿಸಿ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರು. ಆಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸರಳ ನಿರ್ಧಾರದ ಮೂಲಕ ಸೋನಿಯಾ ರನ್ನು
ನೇಮಿಸಲಾಗಿತ್ತು. ಆದರೆ, ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 1998ರಲ್ಲಿ ಪಡೆದಿದ್ದರ ಅರ್ಧಕ್ಕಿಂತ ಕಡಿಮೆ ಸೀಟುಗಳನ್ನು ಗಳಿಸಿದೆ. ಅದಕ್ಕೆ ಉತ್ತರದಾಯಿತ್ವ ನಿಗದಿಪಡಿಸುವುದಾಗಲೀ, ಪಕ್ಷದ ಕಾರ್ಯವಿಧಾನ ದಲ್ಲಿ ಬದಲಾವಣೆ
ತರುವುದಾಗಲೀ ಆಗಿಯೇ ಇಲ್ಲ. ಈ ಚುನಾವಣೆಗಳ ನಾಯಕತ್ವವನ್ನು ಸೋನಿಯಾ ಗಾಂಧಿ ರಾಹುಲ್‌ಗೆ ನೀಡಿದ್ದರು. ಪತ್ರಕ್ಕೆ ಸಹಿ ಹಾಕಿದ ನಾಯಕರಿಗೆ ತಾವು ಈಗಲೂ ಧ್ವನಿಯೆತ್ತದಿದ್ದರೆ 2024ರಲ್ಲಿ ಮೂರನೇ ಹಿನ್ನಡೆ ಅನುಭವಿಸ ಬೇಕಾಗುತ್ತದೆ ಎಂಬುದು
ನಿಚ್ಚಳವಾಗಿತ್ತು.

ರಾಜಕಾರಣದ ಕಠಿಣ ವ್ಯಾಪಾರದಲ್ಲಿ ನಿಮಗೆ ಬಟ್ಟೆ ಒಗೆದಂತೆ ಏಕಾಏಕಿ ಬದಲಾವಣೆ ತರುವುದು ಸಾಧ್ಯವಿಲ್ಲ. ಒಂದಷ್ಟು ಉಜ್ಜಿದರೆ ಎಲ್ಲವೂ ಸ್ವಚ್ಛ ವಾಗುತ್ತದೆ ಎಂಬ ಸ್ಥಿತಿ ರಾಜಕೀಯದಲ್ಲಿ ಇರುವುದಿಲ್ಲ. ಅದೊಂದು ಸುದೀರ್ಘವಾದ, ಹೀಗೇ ಎಂದು
ಹೇಳಲಾಗದ ಸಂಕೀರ್ಣ ಪ್ರಕ್ರಿಯೆ. ಅದರ ನಡುವಿನ ಅವಧಿಯಲ್ಲಿ ಒಂದಷ್ಟು ಪ್ರಶ್ನೆಗಳು ಎದ್ದೇ ಏಳುತ್ತವೆ. ಅವುಗಳನ್ನು ಪಕ್ಷ ಎದುರಿಸುವುದು ಅನಿವಾರ್ಯ.

ಈಗಿನ ಬಂಡಾಯಕ್ಕೂ ಒಂದಷ್ಟು ಪ್ರಶ್ನೆೆಗಳಿವೆ: ಹೋಗಿ ತಲುಪುವ ಸ್ಥಳವೇ ನಿಮಗೆ ಗೊತ್ತಿಲ್ಲದಿದ್ದರೆ ಪ್ರಯಾಣ ಆರಂಭಿಸುವು ದಾದರೂ ಏಕೆ? ಅಷ್ಟೊಂದು ಅನುಭವ ಹೊಂದಿದ್ದು, ಪಕ್ಷಕ್ಕಾಗಿ ಸಾಕಷ್ಟು ದುಡಿದ ಹಿನ್ನೆೆಲೆಯಿದ್ದರೂ ಮೊದಲ ಅಡ್ಡಿಗೇ ಬದಿಗೆ ಸರಿದು ನಿಲ್ಲುವುದೇಕೆ? ಶಸ್ತ್ರಾಸ್ತ್ರ ಹಿಡಿದು ಯುದ್ಧಕ್ಕೆ ಹೋಗುವುದರ ಬದಲು ಹುಲ್ಲಿನ ಕಡ್ಡಿ ಹಿಡಿದು ಹೋಗುವುದೇಕೆ? ರಾಜಮನೆ ತನವನ್ನು ಎದುರುಹಾಕಿಕೊಂಡು ಕೊನೆಗೆ ಒಂದು ಕಪ್ ಕಾಫಿಗೆ ರಾಜಿಯಾಗುವುದೇಕೆ? ರಾಜಕೀಯವೆಂಬುದು ವಿಚಿತ್ರ ಬಿಸಿನೆಸ್. ಅಲ್ಲಿ ಯಶಸ್ಸಿಗೆ ಸಿಗುವ ಬಹುಮಾನ ನಿಶ್ಚಿತವಾಗಿರುವುದಿಲ್ಲ. ಆದರೆ, ಸೋಲಿಗೆ ತೆರಬೇಕಾದ ಬೆಲೆ ದೊಡ್ಡದಿರುತ್ತದೆ. ಅಫ್‌ಕೋರ್ಸ್, ನೀವು ಗೆಲುವಿಗೆ ಮಾತ್ರ ಕ್ರೆಡಿಟ್ ತೆಗೆದುಕೊಳ್ಳುವ ಮತ್ತು ಸೋಲಿನ ಹೊಣೆಯನ್ನು ಸೇನಾಧಿಪತಿಗಳ ಮೇಲೆ ಹೊರಿಸುವ ರಾಜಮನೆತನ ದವರಾಗಿರದಿದ್ದರೆ ಮಾತ್ರ ಈ ಬೆಲೆ ತೆರಬೇಕಾಗುತ್ತದೆ.

ಜೋರಾಗಿ ಅಬ್ಬರಿಸುವ ದೇವಮಾನವರು ತಮ್ಮದೇ ಟೀವಿ ಚಾನಲ್‌ಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದ ಕಲೇಡಿಸ್ಕೋಪ್‌ ನಲ್ಲಿ ತಾವು ನೀಡಿದ್ದ ಭರವಸೆಯ ದಿನ ಈಗ ಬಂದಿದೆಯೆಂದು ಘೋಷಿಸುತ್ತಾರೆಂದು ಈ ಸಾಂಕ್ರಾಮಿಕ ರೋಗ ಅಬ್ಬರಿಸುತ್ತಿರುವ
ಅಷ್ಟೂ ಕಾಲ ಕಾಯುತ್ತಲೇ ಇದ್ದೇನೆ. ಗಂಡಸರು, ಹೆಂಗಸರೂ ಸೇರಿದಂತೆ ಎಲ್ಲರೂ ಮುಖಪರದೆ ಕಟ್ಟಿಕೊಂಡಿದ್ದಾರೆ. ಇದೇನೂ ಭಯಂಕರವಾದ ಹೆಣದ ಹೊದಿಕೆಯಲ್ಲ. ಹಿಂದೊಂದು ಕಾಲದಲ್ಲಿ ಇಡೀ ಭರತ ಖಂಡದ ಉದ್ದಗಲಕ್ಕೂ ಜನರು ಧರಿಸು ತ್ತಿದ್ದಂತಹ ಕಾಲ್ಬೆರಳ ತುದಿಯಿಂದ ತಲೆಯವರೆಗೆ ಮುಚ್ಚುವ ಬಟ್ಟೆೆಯೂ ಇದಲ್ಲ. ನಮ್ಮ ಮಾಸ್ಕ್ ‌‌ಗಳು ಹಳೆಯ ಕಾಲದ ನಿಕಾಬ್‌ನ ತೆಳುವಾದ ವರ್ಷನ್ ಅಷ್ಟೆ. ಇವು ಕಿವಿ ಎಂದು ಕರೆಸಿಕೊಳ್ಳುವ ಚಮತ್ಕಾರಿ ಹ್ಯಾಂಡಲ್ ‌ಗೆ ಜೋತುಬಿದ್ದು ಕೊಂಡು ಕಣ್ಣಿನ ಕೆಳಗಿನ ಜಾಗದಿಂದ ಕುತ್ತಿಗೆಯವರೆಗಿನ ಜಾಗವನ್ನು ಮುಚ್ಚುತ್ತವೆ.

ಕಿವಿಯನ್ನು ಬಿಟ್ಟು ನಮ್ಮ ದೇಹದ ಇತರ ಎಲ್ಲಾ ಅಂಗಗಳೂ ಅವು ಹೇಗಿವೆಯೋ ಹಾಗೆ ಇರುವುದಕ್ಕೆ ಸರಿಯಾದ ಕಾರಣಗಳಿವೆ.
ಕಿವಿ ಮಾತ್ರ ಹಾಗಿರುವುದಕ್ಕೆ ಯಾವ ಕಾರಣವೂ ಇಲ್ಲ. ಏಕೆಂದರೆ ಕಿವಿ ಇರುವ ಜಾಗದಲ್ಲಿ ಮುಖದಿಂದ ಹೊರಗೆ ಬಂದಿರುವ ಚರ್ಮವಿಲ್ಲದೆ ಕೇವಲ ತೂತು ಮಾತ್ರ ಇದ್ದಿದ್ದರೂ ನಮಗೆ ಶಬ್ದ ಕೇಳಿಸುತ್ತಿತ್ತು. ಏಕೆಂದರೆ ಕಿವಿಯಲ್ಲಿ ನಿಜವಾದ ಶ್ರವಣಾಂಗ
ಶುರುವಾಗುವುದೇ ಅದರ ರಂಧ್ರದಿಂದ. ಹೀಗಾಗಿ ಕಿವಿ ಕೇವಲ ಅಣಬೆಯ ಕೊಡೆಯಿದ್ದಂತೆ. ದೇವರು ಈ ಕೊಡೆ ಕಿತ್ತುಹಾಕಿ ಕೇವಲ ರಂಧ್ರ ಮಾತ್ರ ಇರಿಸಬಹುದಿತ್ತು. ಬೇಕಿದ್ದರೆ ಅರ್ಧ ಇಂಚು ಚರ್ಮ ಇಡಬಹುದಿತ್ತು.

ಕಿವಿಯ ರೆಕ್ಕೆೆಯಿಂದ ಇರುವ ಏಕೈಕ ಪ್ರಾಯೋಗಿಕ ಪ್ರಯೋಜನವೆಂದರೆ ಆಭರಣ ಧರಿಸಲು ಸಾಧ್ಯವಾಗುವುದು. ಇನ್ನೂ ಹೆಚ್ಚೆೆಂದರೆ, ಶಾಲಾ ಮಕ್ಕಳಿಗೆ ಶಿಕ್ಷಕರು ಹಿಂಡುವುದಕ್ಕೆ ಕಿವಿ ಬೇಕು. ಅವರು ಕಿವಿ ತಿರುವುತ್ತಾರೋ ಎಳೆಯುತ್ತಾರೋ ಹೇಳಲಾ ಗದು. ಒಟ್ಟಿನಲ್ಲಿ ಮಕ್ಕಳಿಗೆ ಇದು ಇರುವುದೇ ದೊಡ್ಡ ಸಮಸ್ಯೆ. ಆದರೆ, ದೇವರಿಗೆ ಬಹಳ ಮುಂದಾಲೋಚನೆಯಿದೆ. ಅದೊಂದು ಪವಾಡವೇ ಸರಿ. ಇಲ್ಲದಿದ್ದರೆ ನಮಗೀಗ ಕಿವಿಯಿಲ್ಲದೆ ಮಾಸ್ಕ್ ಧರಿಸುವುದಕ್ಕೇ ಆಗುತ್ತಿರಲಿಲ್ಲ.

ಐಸೋಲೇಶನ್ ಶುರುವಾದ ಮೇಲೆ ಏನೇನೋ ಅದ್ಭುತ ಯೋಚನೆಗಳು ಹುಟ್ಟಿಕೊಳ್ಳುತ್ತಿವೆ. ಒಬ್ಬ ಮನುಷ್ಯನನ್ನು ಗುರುತು ಹಿಡಿಯಲು ಮುಖ ಬೇಕು ಎಂದು ನಾವಂದುಕೊಳ್ಳುತ್ತೇವೆ. ಮಾಸ್‌ಕ್‌ ಧರಿಸಿದರೆ ಕೇವಲ ಕಣ್ಣು ಮತ್ತು ಹಣೆ ಮಾತ್ರ ಕಾಣಿಸುತ್ತದೆ.
ಆದರೂ ಗುರುತು ಹಿಡಿಯುವುದಕ್ಕೆ ನಮಗೇನೂ ಸಮಸ್ಯೆಯಾಗುತ್ತಿಲ್ಲ. ಇದಕ್ಕೆೆ ವ್ಯತಿರಿಕ್ತವಾಗಿ ಕಣ್ಣಿಗೆ ಮಾಸ್ಕ್ ‌ ಧರಿಸಿ ನೋಡಿ; ಕಾಮಿಕ್ಸ್‌ ಪುಸ್ತಕದಲ್ಲಿ ಜೋರೋ ಧರಿಸುತ್ತಾನಲ್ಲ ಹಾಗೆ ಅಥವಾ ಕೌಬಾಯ್ ಸಿನಿಮಾಗಳಲ್ಲಿ ಕುದುರೆ ಮೇಲೆ ಕುಳಿತ ಯುವಕರು
ಧರಿಸುತ್ತಾರಲ್ಲ ಹಾಗೆ. ಆಗ ಯಾರನ್ನೂ ಗುರುತು ಹಿಡಿಯಲು ಸಾಧ್ಯವಿಲ್ಲ. ಇದರ ತಾತ್ಪರ್ಯವೇನು ಎಂಬುದು ಎಲ್ಲರಿಗೂ ಗೊತ್ತು.

ಕೋವಿಡ್-19 ಹೋದಮೇಲೆ ಮಾಸ್ಕ್‌ ಕೂಡ ಹೋಗುತ್ತದೆಯೇ? ದಿಲ್ಲಿಯಂತಹ ನಗರಗಳಲ್ಲಿ ‘ಪ್ಯೂಟ್ರಿಡ್-ಪಿ’ಯದೇ ದೊಡ್ಡ ಸಮಸ್ಯೆೆ. ಇದರಲ್ಲಿ ಎರಡನೇ ಪಿ ಅಂದರೆ ಪೊಲ್ಯೂಷನ್. ಇಲ್ಲಿ ಕನಿಷ್ಠ ಪಕ್ಷ ಚಳಿಗಾಲದಲ್ಲಾದರೂ ಮಾಸ್ಕ್‌ ಕಡ್ಡಾಯಗೊಳಿಸು
ವುದು ಒಳ್ಳೆಯದು. ಪರ್ಯಾಸದ ಮಾಸ್ಕ್‌ ಧರಿಸಿದ ಮನುಷ್ಯನಿಗೆ ಸ್ವಾಗತ!

ನಮ್ಮೆಲ್ಲರಿಗೂ ಅರ್ಥವಾಗಿರುವಂತೆ ಈಗ ಮರೆತುಹೋದ ಪುಸ್ತಕಗಳ ಧೂಳು ಹೊಡೆಯುವ ಅಥವಾ ನಮ್ಮ ದೈನಂದಿನ ಅಸ್ತಿತ್ವವನ್ನು ತುಸು ಓರೆಗಣ್ಣಿನಿಂದ ನೋಡಲು ಅಗತ್ಯವಿರುವ ಮಾಹಿತಿಗಳನ್ನು ಓದುವ ಸಮಯ. ಶಬ್ದಸಾಗರದಲ್ಲಿ ಅಥವಾ ಪುಸ್ತಕಗಳ ರಾಶಿಯಲ್ಲಿ ನೀವು ಬಲೆ ಬೀಸಿದಾಗ ಯಾವ ಕಪ್ಪೆಚಿಪ್ಪು ಎತ್ತಿಕೊಳ್ಳುತ್ತೀರಿ ಎಂಬುದು ನಿಮಗೇ ಗೊತ್ತಿರುವುದಿಲ್ಲ. ಎಲ್ಲಾ ಕಪ್ಪೆಚಿಪ್ಪುಗಳಲ್ಲೂ ಮುತ್ತು ಸಿಗುವುದಿಲ್ಲ. ಆದರೆ ಹೆಚ್ಚಿನವುಗಳಲ್ಲಿ ಸಿಗುತ್ತದೆ. ಕೆಲ ಅತ್ಯುತ್ತಮ ದಂತಕತೆಗಳಿಗೆ ಮೂಲವೇ ಇರುವುದಿಲ್ಲ. ಅವುಗಳನ್ನು ಯಾರು ಬರೆದಿರಬಹುದು? ಅಮೆರಿಕದ ಲೇಖಕರಾದ ಎಫ್ ಸ್ಕಾಟ್ ಫಿಟ್‌ಸ್‌‌ಗೆರಾಲ್‌ಡ್‌ ಮತ್ತು ಅರ್ನೆಸ್ಟ್‌ ಹೆುಂಗ್ವೇ ಮಧ್ಯೆ ನಡೆದಿದ್ದು ಎನ್ನಲಾದ ಈ ಅದ್ಭುತ ಸಂಭಾಷಣೆ ಕೇಳಿ. ಫಿಟ್‌ಸ್‌‌ಗೆರಾಲ್‌ಡ್‌: ಶ್ರೀಮಂತರು ನಿನಗಿಂತ ಹಾಗೂ ನನಗಿಂತ ಭಿನ್ನ ಅಲ್ವಾ.

ಹೆುಂಗ್ವೇ: ಹೌದು. ಅವರ ಹತ್ರ ಹೆಚ್ಚು ಹಣ ಇದೆ. ಈ ಮಾತುಕತೆಯ ದೃಷ್ಟಿಕೋನದಲ್ಲಿ ನಾವೀಗ ಸಣ್ಣದೊಂದು ಬದಲಾವಣೆ ಮಾಡಿಕೊಳ್ಳಬೇಕು. ಬಡವರು ನಿನಗಿಂತ ಹಾಗೂ ನನಗಿಂತ ಭಿನ್ನ; ಏಕೆಂದರೆ ಅವರ ಬಳಿ ಕಡಿಮೆ ಹಣವಿದೆ. ಜಮೀನ್ದಾರಿ ಕಾಲದ ಅಥವಾ ವಸಾಹತು ಅವಧಿಯ ಇತಿಹಾಸ ಓದಿದರೆ ಒಂದು ಅಂಶ ಕಣ್ಣಿಗೆ ಬೀಳುತ್ತದೆ. ಅದೇನು? ಆರ್ಥಿಕ ನೀತಿಗಳ ಲೆಕ್ಕಾಚಾರ
ದಲ್ಲಿ ಬಡವರಿಗೆ ಜಾಗವೇ ಇರಲಿಲ್ಲ. ಅವರನ್ನು ಆದಾಯದ ಮೂಲವನ್ನಾಗಿ ಮಾತ್ರ ನೋಡಲಾಗುತ್ತಿತ್ತು. ಆ ಕಾರಣಕ್ಕಾಗಿಯೇ ಅವರು ಬಡವರಾಗಿಯೇ ಉಳಿದಿದ್ದರು. ಅವರು ದುರ್ಬಲರಾಗಿ ಹುಟ್ಟುತ್ತಿದ್ದರು, ಸಣ್ಣ ಅವಧಿಗೆ ಬದುಕುತ್ತಿದ್ದರು ಮತ್ತು ಬೇಗ
ಸಾಯುತ್ತಿದ್ದರು. ಅವರನ್ನು ಯಾರೂ ಅಷ್ಟಾಗಿ ಗಮನಿಸುತ್ತಿರಲಿಲ್ಲ. ಹುಟ್ಟುವುದಕ್ಕಿಂತ ಮೊದಲೇ ಮಾಡಿದ ಪಾಪದಿಂದಾಗಿ ಅಥವಾ ಇನ್ನಾವುದೋ ಪಾಪದ ಪ್ರಾಯಶ್ಚಿತ್ತಕ್ಕಾಗಿ ಅವರು ಬಡವರಾಗಿ ಹುಟ್ಟಿದ್ದಾರೆ ಎಂಬಂತಹ ತಲೆಬುಡವಿಲ್ಲದ ಸಿದ್ದಾಂತ
ಗಳನ್ನು ಹೇಳಿ ಅವರನ್ನು ಇನ್ನಷ್ಟು ಕುಗ್ಗಿಸಲಾಗುತ್ತಿತ್ತು.

ಇದಕ್ಕೆಲ್ಲ ನ್ಯಾಯ ಕೊಡುವುದಾಗಿ ಸಮಾಜವಾದ ಪ್ರಚಾರ ಮಾಡಿಕೊಂಡಿತು. ಅದಕ್ಕೆ ವ್ಯತಿರಿಕ್ತವಾಗಿ ಬಂಡವಾಳಶಾಹಿ ವ್ಯವಸ್ಥೆ ಜನರಿಗೆ ಮೇಲೆ ಬರಲು ಹೆಚ್ಚು ಅವಕಾಶ ನೀಡಿತು. ಆದರೂ, ಎರಡು ಶತಮಾನಗಳ ಪ್ರಯೋಗದ ನಂತರವೂ, ಸಮಾಜ
ವಾದ ಬಡವರನ್ನು ಮೇಲೆತ್ತಿದ್ದಕ್ಕಿಂತ ಮಾರುಕಟ್ಟೆ ಆರ್ಥಿಕತೆಯು ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಿದೆ. ಇದು ಅತಾರ್ಕಿಕ. ಯಾಕೆ ಹೀಗಾಯಿತು? ಬಹುಶಃ ಮಾರುಕಟ್ಟೆ ಆರ್ಥಿಕತೆಯೆಂಬುದು ಸಮಾಜವಾದಕ್ಕಿಂತ ಚೆನ್ನಾಗಿ ಕೆಲಸ ಮಾಡಿ ದ್ದಕ್ಕೆ ಕಾರಣವೇನೆಂದರೆ ಈ ಮಾರುಕಟ್ಟೆ ಆರ್ಥಿಕತೆ ಎಂಬುದೊಂದು ಸಿದ್ದಾಂತವಲ್ಲ. ಸಿದ್ದಾಂತಗಳು ಸಂಕೀರ್ಣವಾಗಿರುತ್ತವೆ.

ಮನುಷ್ಯನ ಬದುಕಿನಲ್ಲಿ ಎದುರಾಗುವ ಪ್ರಾಯೋಗಿಕ ಸಮಸ್ಯೆಗಳಿಗೆಲ್ಲ ಪರಿಹಾರ ಹುಡುಕುವಷ್ಟು ಅವು ಫ್ಲೆೆಕ್ಸಿಬಲ್ ಆಗಿರುವು ದಿಲ್ಲ. ಬಂಡವಾಳಶಾಹಿತ್ವದ ಬಗ್ಗೆೆ ಈ ಮೂಲಭೂತ ಸತ್ಯವನ್ನು ಕಂಡುಹಿಡಿಯಲು ಸಹಜವಾಗಿಯೇ ಒಬ್ಬ ಬುದ್ಧಿವಂತ ಕಮ್ಯುನಿಸ್ಟ್‌ ಬರಬೇಕಾಯಿತು.

1980ರ ದಶಕದಲ್ಲಿ ಚೀನಾದ ನಾಯಕ ಡೆಂಗ್ ಕ್ಸಿಯಾಪಿಂಗ್ ನಾಲ್ಕು ದಶಕಗಳ ಮಾವೋವಾದಿ ಸಿದ್ದಾಂತಕ್ಕೆ ತಿಲಾಂಜಲಿ ನೀಡಿ ತನ್ನ ದೇಶವನ್ನು ‘ಎಲ್ಲಿಯವರೆಗೆ ಬೆಕ್ಕು ಇಲಿಯನ್ನು ಹಿಡಿಯುತ್ತದೆಯೋ ಅಲ್ಲಿಯವರೆಗೆ ಬೆಕ್ಕಿನ ಬಣ್ಣದ ಬಗ್ಗೆ ತಲೆಕೆಡಿಸಿಕೊಳ್ಳ ಬಾರದು’ ಎಂಬಂತಹ ನೇರವಾದ ದೃಷ್ಟಿಕೋನದಿಂದ ಮುನ್ನಡೆಸತೊಡಗಿದ. ಡೆಂಗ್ ಅಮೆರಿಕದ  ಪ್ರಜೆಯೇನಾದರೂ ಆಗಿದ್ದಿದ್ದರೆ ವಾರನ್ ಬಫೆಟ್‌ನ ಬ್ರಿಜ್ ಮತ್ತು ಐಸ್‌ಕ್ರೀಂ ಪಾರ್ಟ್ನರ್ ಆಗಿರುತ್ತಿದ್ದ. (ಡೆಂಗ್ ಒಳ್ಳೆಯ ಬ್ರಿಜ್ ಆಟಗಾರನಾಗಿದ್ದ. ಬಫೆಟ್ ಕೂಡ ಅತ್ಯುತ್ತಮ ಬ್ರಿಜ್ ಆಟಗಾರ. ಅಗತ್ಯಬಿದ್ದರೆ ಅಮೆರಿಕದ ಈ ಶತಕೋಟ್ಯಧಿಪತಿ ಚೀನಾದ ಸೃಜನಶೀಲ ಚಿಂತಕ
ರಾಜಕಾರಣಿಗೆ ಐಸ್‌ಕ್ರೀಂನ ಮೌಲ್ಯಗಳನ್ನೂ ಕಲಿಸುತ್ತಿದ್ದ ಬಿಡಿ.)

ಮಾರ್ಕ್ಸಿಸಂ ಮತ್ತು ಮಾವೋವಾದಗಳು ದಮನಿತರಿಗೆ ನೀವು ಸಂಕೋಲೆಯನ್ನು ಹೊರತು ಪಡಿಸಿ ಕಳೆದುಕೊಳ್ಳುವುದೇನೂ ಇಲ್ಲ ಎಂದು ಬೋಧಿಸಿದವು. ನಂತರ ಮನುಷ್ಯ, ಮಷೀನು, ಉತ್ಪಾದನೆ ಹಾಗೂ ದರಕ್ಕೆ ಉಕ್ಕಿನ ಬಾಂಡ್‌ಗಳ ಮೂಲಕ ಅಡ್ಡಿ ಪಡಿಸಿ ದವು. ಪರಿಣಾಮ, ಚೀನಾದ ಆರ್ಥಿಕತೆ ಸ್ಫೋಟಗೊಂಡಿತು. ಅದರಿಂದ ಉದ್ಭವ ವಾದ ದುರಾಸೆಯ ಲಾಭಾಂಶದ ಸಮಸ್ಯೆ ಯನ್ನು ರಾಜಕೀಯ ಚಾಣಾಕ್ಷರು ಸಂಪತ್ತನ್ನು ಹೊಸತಾಗಿ ಸೃಷ್ಟಿಯಾದ ಮೇಲ್ವರ್ಗದ ಕಡೆಗೆ ತಿರುಗಿಸುವ ಮೂಲಕ ಬಗೆಹರಿಸಿ ದರು. ಇವರೆಲ್ಲ 1970ರ ದಶಕದ ಸಾಂಸ್ಕೃತಿಕ ಕ್ರಾಂತಿಯ ವೇಳೆ ಕಷ್ಟಕ್ಕೆ ಸಿಲುಕಿದ್ದ ಪಕ್ಷದ ನಾಯಕರ ರಾಜಕುಮಾರ ರಾಗಿದ್ದರು.

ಹ್ಯಾನಾ ಆರೆಂಡ್ ಹೇಳುವ ಪ್ರಕಾರ ಪ್ರತಿಯೊಂದು ಕ್ರಾಂತಿಯೂ ತನ್ನ ಮಕ್ಕಳನ್ನು ಸ್ವಾಹಾ ಮಾಡುತ್ತದೆ. ಈ ಪ್ರಕರಣದಲ್ಲಿ ಮಕ್ಕಳೇ ಕ್ರಾಂತಿಯಯನ್ನು ನುಂಗಿ ಹಾಕಿದರು. ನಂತರ ತಮ್ಮ ಪೋಷಕರನ್ನು ಬಲಿಕೊಟ್ಟರು.

ಈ ಸಾಂಕ್ರಾಮಿಕ ಮಹಾಮಾರಿಯ ಅವಧಿಯಲ್ಲಿ ಆದ ಒಂದು ಒಳ್ಳೆಯ ಬೆಳವಣಿಗೆಯೆಂದರೆ ಎಲ್ಲರ ನೆನಪಿನ ಕೋಶದಲ್ಲಿರುವ ಅಗಣಿತ ಸುಂದರ ಸಂಗತಿಗಳು ಹೊರಬಂದಿರುವುದು. ಅವು ಹುಟ್ಟಿದ್ದೆಲ್ಲಿ ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ ಅವು ವೇಗ ವಾಗಿ ಹರಡುತ್ತವೆ. ಇಂತಹವುಗಳಲ್ಲಿ ಬಹಳಷ್ಟು ಕತೆಗಳು ನಮ್ಮ ಸಿನಿಮಾಗಳಿಂದ ಹುಟ್ಟಿಕೊಂಡಿವೆ. ನಮ್ಮ ದೇಶದ ಜನಪ್ರಿಯ ಪ್ರಕಾರದ ಸಿನಿಮಾಗಳು ಆಧುನಿಕ ಭಾರತದ ಸಾಮಾಜಿಕ ಹಾಗೂ ಕ್ರಿಯಾಶೀಲ ಬುದ್ಧಿಮತ್ತೆಯ, ಬಹು ತಲೆಮಾರುಗಳ ಸಾಧನೆಯ ಪ್ರತೀಕದ್ದಂತೆ.

ಅಂತಹದ್ದೊಂದು ಕತೆ ನನಗೆ ವಾಟ್ಸ್‌‌ಆ್ಯಪ್‌ನಲ್ಲಿ ಬಂದಿತ್ತು. ‘ತೀಸರಿ ಕಸಂ’ ಸಿನಿಮಾ ಹುಟ್ಟಿಕೊಂಡಿದ್ದು ಬಿಮಲ್ ರಾಯ್ ಅವರ ಸೂಪರ್‌ಟ್ ಸಿನಿಮಾ ‘ಮಧುಮತಿ’ ಯ ಶೂಟಿಂಗ್ ಸೆಟ್‌ನಲ್ಲಿ. ಅವರ ಸಹಾಯಕ ನಿರ್ದೇಶಕ ಬಸು ಭಟ್ಟಾಚಾರ್ಯ ಒಂದು ದಿನ
ಯಾವುದೋ ಪುಸ್ತಕದಲ್ಲಿ ತಲ್ಲೀನರಾಗಿದ್ದರು. ಆಗ ಗೀತರಚನೆಕಾರ ಶೈಲೇಂದ್ರ ಕೂಡ ಸೆಟ್‌ನಲ್ಲಿದ್ದರು. ಅವರು ಬಸು ಬಳಿ ಏನು ಓದ್ತಿದ್ದೀಯಾ ಎಂದು ಕೇಳಿದರು. ಅದಕ್ಕೆ ಬಸು, ಇಲ್ಲಿಯವರೆಗೆ ಬಂದಿರುವ ಅತ್ಯುತ್ತಮ ಕತೆ ಓದ್ತಿದ್ದೇನೆ. ಇದರ ಹೆಸರು ‘ಮಾರೆ
ಗಯೆ ಗುಲ್ಪಾಂ.’ ಬಿಹಾರದ ಅದ್ಭುತ ಹಿಂದಿ ಕತೆಗಾರ ಫಣೀಶ್ವರನಾಥ್ ರೇಣು ಬರೆದಿದ್ದು ಎಂದರು.

ಶೈಲೇಂದ್ರ ನಾನೂ ಓದುತ್ತೇನೆ ಎಂದು ಪುಸ್ತಕ ಕೊಂಡೊಯ್ದರು. ಆ ಕತೆ ಶೈಲೇಂದ್ರಗೆ ಬಹಳ ಇಷ್ಟವಾಯಿತು. ಅದನ್ನು
ಸಿನಿಮಾ ಮಾಡಲೇಬೇಕು ಎಂದು ನಿರ್ಧರಿಸಿದರು. ಇಷ್ಟು ಅದ್ಭುತವಾದ ಕತೆ ಸೂಪರ್‌ಸ್ಟಾರ್‌ಗಳಿಂದಾಗಿ ಮಹತ್ವ ಕಳೆದುಕೊಳ್ಳ ಬಾರದು ಎಂದು ಆ ಕಾಲಕ್ಕೆ ಅಷ್ಟೇನೂ ಪ್ರಸಿದ್ಧಿಗೆ ಬಂದಿರದಿದ್ದ ಹಾಸ್ಯಗಾರ ಮೆಹಮೂದ್ ಹಾಗೂ ನೂತನ್‌ರನ್ನು ಸಿನಿಮಾಕ್ಕೆ ಆಯ್ಕೆ ಮಾಡಿದರು. ಆದರೆ, ನೂತನ್ ಗರ್ಭಿಣಿಯಾದ್ದರಿಂದ ಆಕೆಯನ್ನು ಕೈಬಿಡಲಾಯಿತು. ಸಿನಿಮಾದ ಪ್ರಿ-ಪ್ರೊಡಕ್ಷನ್ ವೇಳೆ  ಪ್ರಸಿದ್ಧ ನಟ ರಾಜಕಪೂರ್ ಒಂದು ದಿನ ಶೈಲೇಂದ್ರ ಅವರ ಕಚೇರಿಗೆ ಬಂದರು. ಅವರು ಶೈಲೇಂದ್ರಗೆ ಖಾಸಾ ಸ್ನೇಹಿತರೂ ಹೌದು. ‘ಕರಾಜ್, ನನ್ನನ್ನು ಹಾಕಿಕೊಳ್ಳದೆ ನಿಮ್ಮ ಮೊದಲ ಸಿನಿಮಾ ಹೇಗೆ ಮಾಡ್ತೀರಿ’ ಎಂದು ರಾಜಕಪೂರ್ ಕೇಳಿದರು.

ಹೀಗಾಗಿ ರಾಜಕಪೂರ್ ಮತ್ತು ವಹೀದಾ ರೆಹಮಾನ್ ನಾಯಕ, ನಾಯಕಿ ಆದರು. ಬಸು ಭಟ್ಟಾಚಾರ್ಯ ನಿರ್ದೇಶಕರಾದರು. ಪ್ರಸಿದ್ಧ ನೃತ್ಯಗಾರ ಲಚ್ಚು ಮಹಾರಾಜ್ ನೃತ್ಯ ನಿರ್ದೇಶಕರಾದರು. ಶೈಲೇಂದ್ರ ಮತ್ತು ಹಸ್ರತ್ ಜೈಪುರಿ ಗೀತೆಗಳನ್ನು ಬರೆದರು. ಶಂಕರ್ – ಜೈಕಿಶನ್ ಸಂಗೀತ ನೀಡಿದರು. ಸಿನಿಮಾದ ಒಂದೊಂದು ಭಾಗವೂ ಪರ್ಫೆಕ್ಟ್‌ ಆಗಿತ್ತು. ಆದರೆ ಇಡಿಯಾಗಿ ಸಿನಿಮಾ ಚೆನ್ನಾಗಿ ಮೂಡಿಬರಲಿಲ್ಲ. ಬಹುಶಃ ನಿಷ್ಕರುಣೆಯ ಉದ್ದಿಮೆಗೆ ಶೈಲೇಂದ್ರ ಬಹಳ ಸರಳ ವ್ಯಕ್ತಿಯಾಗಿದ್ದರು. ಮಧ್ಯವರ್ತಿ
ಗಳು ಅವರನ್ನು ಸುಲಿಗೆ ಮಾಡಿಬಿಟ್ಟರು. ಆದರೂ ಎಲ್ಲಾ ಕೆಲಸ ಮುಗಿದ ಮೇಲೆ ಸಿನಿಮಾ ಚೆನ್ನಾಗಿಯೇ ಬರುತ್ತದೆ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಗೆಲುವು ಕಾಣುವುದು ಗ್ಯಾರಂಟಿ ಎಂದು ಶೈಲೇಂದ್ರ ತಮಗೆ ತಾವೇ ಸಮಾಧಾನ ಮಾಡಿಕೊಂಡರು.

ಸಿನಿಮಾ ತೋಪಾಯಿತು. ಶೈಲೇಂದ್ರ ಬೀದಿಪಾಲಾ ದರು. ಅವರ ಕುಟುಂಬ ಕೂಡ ಆರ್ಥಿಕ ಸಂಕಷ್ಟದ ಅಷ್ಟೂ ಹೊಣೆಯನ್ನು ಶೈಲೇಂದ್ರರ ಮೇಲೇ ಎತ್ತಿಹಾಕಿತು. ಆರೋಗ್ಯ ಕ್ಷೀಣಿಸಲಾರಂಭಿಸಿತು. ಬದುಕಿನಲ್ಲಿ ಅವರಿಗೆ ಆಸಕ್ತಿಯೂ ಕಳೆದು ಹೋಯಿತು.
ಕೆಲ ಸ್ನೇಹಿತರು ಸಹಾಯ ಮಾಡಲು ಯತ್ನಿಸಿದರು. ಪ್ರಸಿದ್ಧ ದೇವಾನಂದ್ ಅವರ ನಿರ್ದೇಶಕ – ಸೋದರ ವಿಜಯ್ ಆನಂದ್ ಆ ಸಮಯದಲ್ಲಿ ಜ್ಯುವೆಲ್ ಥೀಫ್ ಸಿನಿಮಾ ಮಾಡುತ್ತಿದ್ದರು. ಅದಕ್ಕೆ ಶೈಲೇಂದ್ರ ಬಳಿ ಸಾಹಿತ್ಯ ಬರೆಸಬೇಕೆಂದು ಬಯಸಿದರು.

ಆದರೆ, ಸಂಕಷ್ಟಗಳು ಶೈಲೇಂದ್ರರ ಸೃಜನಶೀಲತೆಯನ್ನೇ ತಿಂದುಹಾಕಿದ್ದವು. ಕೊನೆಯ ಪಕ್ಷ ಒಂದೇ ಒಂದು ಗೀತೆಯನ್ನಾದರೂ ಬರೆದುಕೊಡು ಎಂದು ವಿಜಯ್ ಆನಂದ್ ಬೇಡಿ ಕೊಂಡರು. ಆ ನೆಪದಲ್ಲಾದರೂ ದೊಡ್ಡ ಮೊತ್ತದ ಹಣವನ್ನು ಶೈಲೇಂದ್ರಗೆ ನೀಡಿ ನೆರವಾಗಬಹುದು ಎಂದು ಯೋಚಿಸಿದ್ದರು. ಹಾಗೆ ಶೈಲೇಂದ್ರ ಬರೆದ ಕೊನೆಯ ಗೀತೆಯದು.
‘ರುಲಾ ಕೇ ಗಯಾ ಸಪ್ನಾ ಮೇರಾ…’

(ನನ್ನ ಕನಸು ನನ್ನನ್ನು ಕಣ್ಣೀರಿನಲ್ಲಿ ಬಿಟ್ಟುಹೋಯಿತು)