ಗುಬ್ಬಿ : ಜನಸಂಘದಿಂದ ನಿರಂತರವಾಗಿ ಬಿಜೆಪಿ ಪಕ್ಷವನ್ನು ಕಟ್ಟಿ ಸಂಘಟನೆಯನ್ನು ಮಾಡಿರುವಂತಹ ನಮ್ಮ ಸಮುದಾಯದ ನಂಜೇಗೌಡ ಸಾಗರನ ಹಳ್ಳಿ ಅವರಿಗೆ ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಶ್ರೀ ಅಗ್ನಿವಂಶ ಕ್ಷತ್ರಿಯ ವಿದ್ಯಾ ಅಭಿವೃದ್ಧಿ ಸಂಘದ ಅಧ್ಯಕ್ಷ ಹುಂಡೆ ರಾಮಣ್ಣ ತಿಳಿಸಿದರು.
ಪಟ್ಟಣದ ಶ್ರೀ ಅಗ್ನಿ ಬನ್ನಿರಾಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಸುಮಾರು 24 ಸಾವಿರ ಮತದಾ ರರು ಇದ್ದು ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಮತ್ತು ಇದೇ 28ರಂದು ಅಗ್ನಿ ಬನ್ನಿ ರಾಯ ಜಯಂತಿಯನ್ನು ಸರ್ಕಾರದ ವತಿಯಿಂದ ಮಾಡಬೇಕು ನಮ್ಮಂತಹ ಸಣ್ಣಪುಟ್ಟ ಸಮುದಾಯಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ನಾವು ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು.
ಹಿಂದುಳಿದ ವರ್ಗ ಆಯೋಗದ ಮಾಜಿ ಸದಸ್ಯ ಯೋಗಾನಂದ ಮಾತನಾಡಿ ನಮ್ಮ ಸಮುದಾಯವನ್ನು ಎಸ್ ಟಿ ಸಮುದಾಯಕಕ್ಕೆ ಸರ್ಕಾರ ಸೇರ್ಪಡೆ ಮಾಡಿಕೊಂಡಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗಾಗಿ ನಮ್ಮ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸಲು ಒತ್ತಾಯಿಸಿ ನಮ್ಮ ಸಮುದಾಯಕ್ಕೆ ಯಾವುದೇ ಪಕ್ಷ ಟಿಕೇಟ್ ನೀಡಿದರು ಅವರಿಗೆ ಆ ಪಕ್ಷಕ್ಕೆ ದುಡಿಯಲು ಸಿದ್ದ ರಿದ್ದು ಇಡೀ ರಾಜ್ಯದಲ್ಲೇ ಆ ಪಕ್ಷಕ್ಕೆ ಕ ನಮ್ಮ ಸಮುದಾಯ ಬೆಂಬಲ ವ್ಯಕ್ತವಾಗುತ್ತದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ ನಮ್ಮ ಸಮುದಾಯದಿಂದ ಯಾವುದೇ ಪಕ್ಷಕ್ಕೆ ಟಿಕೆಟ್ ನೀಡಿದರೂ ಸಹ ಆ ಪಕ್ಷದ ಜೊತೆಯಲ್ಲಿ ನಾವೆಲ್ಲ ಸಮುದಾಯದವರು ನಿಂತು ಕೆಲಸ ಮಾಡಿ ಅವರನ್ನು ಗೆಲ್ಲಿಸಿ ಕೊಂಡು ಬರುತ್ತೇವೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಲೋಕೇಶ್ ಬಾಬು ಮಾತನಾಡಿ ನಮ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿಯನ್ನು ಮಾಡಿ 100 ಕೋಟಿ ಅಷ್ಟು ಹಣವನ್ನು ಇಟ್ಟು ಪ್ರತಿ ಬಜೆಟ್ ಮೂಲಕ ಕಾರ್ಯಾ ಯೋಜನೆ ರೂಪಿಸಬೇಕು ಇದರಿಂದ ನಮ್ಮ ಸಮುದಾಯ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೋಳಿ ಶಿವಣ್ಣ, ಬಲರಾಮಣ್ಣ, ಮಹದೇವಯ್ಯ, ರಾಜಣ್ಣ, ಸೋಮಶೇಖರ್, ಮುನೇಶ್, ಗಂಗಣ್ಣ, ಮಲ್ಲಪ್ಪ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಹಾಜರಿದ್ದರು.
Read E-Paper click here