ವಿಧಾನಸಭೆ ಚುನಾವಣೆಗಾಗಿ ರಾಜ್ಯದ ಪ್ರಮುಖ ಮೂರೂ ಪಕ್ಷಗಳು ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ೨೨೪ ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಧಿಕೃತ ಹುರಿಯಾಳುಗಳನ್ನು ಘೋಷಿಸಲಿದ್ದು, ಈಗಾಗಲೇ ಎಲ್ಲ ಪಕ್ಷಗಳೂ ಅಭ್ಯರ್ಥಿಗಳಿಂದ ಅರ್ಜಿ ಪಡೆದಿವೆ. ಆದರೆ ಈ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕರು ಈಗಾಗಲೇ ಒಂದು-ಎರಡು ಬಾರಿ ಶಾಸಕರಾದವರೇ ಇದ್ದಾರೆ. ಈ ಪಟ್ಟಿ ಯನ್ನು ನೋಡಿದರೆ ಹೊಸಬರಿಗೆ ಈ ಬಾರಿಯೂ ಅವಕಾಶ ಸಿಗುವ ಸಾಧ್ಯತೆ ಬಹಳ ಕಡಿಮೆಯೇ ಎನ್ನಬಹುದು.
ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ೧೫ರಿಂದ ೨೯ ವಯೋಮಾನದವರು ಶೇ.೩೦ರಷ್ಟಿದ್ದಾರೆ. ಕೆಲವು ಅಂದಾಜುಗಳ ಪ್ರಕಾರ ೧೮ರಿಂದ ೪೦ರ ವಯೋಮಾನದವರು ಶೇ.೫೦ರಷ್ಟಿದ್ದಾರೆ. ಹೀಗಾಗಿ ರಾಜ್ಯ ರಾಜಕಾ ರಣದ ಮೇಲೆ ಪ್ರಭಾವ ಬೀರುವ ಮಹತ್ತರ ಅಂಶಗಳಲ್ಲಿ ಯುವ ಸಮುದಾಯವೂ ಒಂದು. ಆದರೆ ರಾಜಕೀಯ ಕ್ಷೇತ್ರದಲ್ಲಿ ಯುವ ಸಮುದಾಯದ ಪಾಲುಗಾರಿಕೆ ಬಹಳ ಕಡಿಮೆ ಇದೆ. ಬಹಳಷ್ಟು ಯುವಕರು ಪಕ್ಷದ ಸದಸ್ಯತ್ವ ಪಡೆದಿದ್ದರೂ ಪಕ್ಷದ ನಂತರದ ವಿವಿಧ ಹಂತಗಳ ಹುzಗಳಿಗೆ ಅವರ ನೇಮಕ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.
ಚುನಾವಣೆಗೆ ಸ್ಪರ್ಧಿಸುವ ಅವಕಾಶವಂತೂ ಬಹಳ ಕಡಿಮೆ. ಹೀಗಾಗಿ ಯುವ ಜನರಲ್ಲಿ ರಾಜಕೀಯ ಹುರುಪು ಕುಂಠಿತಗೊಳ್ಳುತ್ತದೆ. ಕೆಲವರು ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕಾಗಿ ಪಕ್ಷದ ಟಿಕೆಟ್ ಗಾಗಿ ನಿರಂತರ ಪ್ರಯತ್ನ ನಡೆಸುತ್ತಾರೆ. ಆದರೆ ಪಕ್ಷಗಳು ಪರಿಗಣಿಸುವ ಹಿರಿತನ, ಹಣಬಲಗಳ ಮುಂದೆ ಯುವಜನರ ಶ್ರಮವು ವಿಫಲವಾಗುತ್ತಿದೆ. ಮತ ಹಾಕಲು, ಅಭ್ಯರ್ಥಿಗಳ ಪರ ಪೋಸ್ಟರ್ ಅಂಟಿಸಿ, ಪ್ರಚಾರ ಮಾಡಲು ಯುವಕರನ್ನು ಬಳಸಿ ಕೊಳ್ಳುತ್ತಿರುವ ಹಿರಿಯ ರಾಜಕಾರಣಿಗಳು ಯುವಕರಿಗೂ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಬಯಸದೇ ಇರುವುದು ದುರಂತ. ಆದ್ದರಿಂದ ಯುವಜನರಿಗೆ ವಿವಿಧ ಹಂತಗಳಲ್ಲಿ ರಾಜಕೀಯ ಸ್ಥಾನ, ಚುನಾವಣಾ ರಾಜಕಾರಣದಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು ಪಕ್ಷಗಳು ಮತ್ತು ಅವುಗಳ ಯುವ ಘಟಕಗಳ ಹೊಣೆಗಾರಿಕೆಯಾಗಿದೆ.
ಈ ಹೊಣೆಗಾರಿಕೆ ಯಶಸ್ವಿಯಾಗಿ ನಿರ್ವಹಣೆಯಾದರೆ, ಯುವ ಸಮುದಾಯದ ರಾಜಕೀಯ ಅನುಭವವು ಪರಿಪಕ್ವಗೊಳ್ಳಲು ನೆರವಾಗುತ್ತದೆ. ಅವರಲ್ಲಿ ರುವ ಸಾಮಾಜಿಕ ಹಿತಾಸಕ್ತಿಯೊಂದಿಗೆ ರಾಜಕೀಯ ಪ್ರeಯೂ ಸೇರಿಕೊಂಡು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗಬಹುದು.
Read E-Paper click here