Tuesday, 26th November 2024

ಹಿಂದುತ್ವ ಸಂಘಟನೆ ನಿಷೇಧಿಸಿ ಎಂದು ಆಗ್ರಹಿಸಿದ್ದ ಮುಸ್ಲಿಂ ಧರ್ಮಗುರುಗಳ ಗೃಹಬಂಧನ

ರೇಲಿ: ಹಿಂದುತ್ವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಉತ್ತರಪ್ರದೇಶದ ಬರೇಲಿಯಿಂದ ದೆಹಲಿವರೆಗೆ ತಿರಂಗ ಯಾತ್ರೆ ನಡೆಸು ವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದ ಮುಸ್ಲಿಂ ಧರ್ಮಗುರುವೊಬ್ಬರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇತ್ತೆಹಾದ್‌-ಇ-ಮಿಲ್ಲತ್‌ ಮಂಡಳಿಯ ಮುಖ್ಯಸ್ಥ ಮೌಲಾನ ತೌಖೀರ್‌ ರಾಜಾ ಮತ್ತು ಅವರ ಮೂವರು ಸಹಚರರನ್ನು ಮಂಗಳವಾರ ರಾತ್ರಿ ಗೃಹ ಬಂಧನದಲ್ಲಿ ಇರಿಸಲಾಗಿದೆ. ಅಗತ್ಯ ಬಂದರೆ ಅವರ ಬಂಧನದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಶಿವಕಾಂತ್‌ ದ್ವಿವೇದಿ ತಿಳಿಸಿದರು.

ಗುಪ್ತಚರ ಸಂಸ್ಥೆಗಳು ನೀಡಿದ್ದ ಮಾಹಿತಿ ಆಧರಿಸಿ ರಾಜಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಾ ಅವರು ತಮ್ಮ ಯೋಜನೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದರೆ, ಇದಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆದಿರಲಿಲ್ಲ. ರಾಜಾ ಅವರ ವಾಸಸ್ಥಳವಾದ ಹಜ್ರತ್‌ ದರ್ಗಾ ಆವರಣದ ಸುತ್ತ ಮತ್ತು ಗೃಹಬಂಧನದಲ್ಲಿರುವ ಇತರ ಸಹಚರರ ಮನೆಗಳಿಗೆ ಬಿಗಿ ಭದ್ರತೆ ನೀಡಲಾಗಿದೆ. ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಬರೇಲಿ ನಗರ ಮ್ಯಾಜಿಸ್ಟ್ರೇಟ್‌ ತಿಳಿಸಿದ್ದಾರೆ.