Thursday, 12th December 2024

ಜಲಕ್ಷಾಮ ನಿವಾರಣೆಗೆ ಸನ್ನದ್ಧರಾಗಿ

ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ೧೭ ಜಿಗಳು ತೀವ್ರವಾದ ನೀರಿನ ತೊಂದರೆ ಅನುಭವಿ ಸಲಿವೆ ಎಂದು ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನೆ ಸಂಸ್ಥೆ ಎಚ್ಚರಿಕೆ ನೀಡಿದೆ. ಭಾರೀ ಜಲಕ್ಷಾಮ ಎದುರಿಸಲಿರುವ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿ ಇದ್ದು, ರಾಯಚೂರು. ಚಿಕ್ಕಬಳ್ಳಾಪುರ, ಕಲಬುರಗಿ, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ, ಬೀದರ ಹಾಗೂ ಬೆಳಗಾವಿ ಇದೆ.

ನಂತರದ ಸ್ಥಾನದಲ್ಲಿ ಕೋಲಾರ, ಬಾಗಲಕೋಟೆ, ದಾವಣಗೆರೆ, ಯಾದಗಿರಿ, ಚಿತ್ರದುರ್ಗ ಹಾಗೂ ತುಮಕೂರು ಇವೆ. ಇವುಗಳು ಭಾರೀ ಪ್ರಮಾಣದ ಜಲಕ್ಷಾಮ ಎದುರಿಸಲಿದೆ. ನೀರಿನ ಕೊರತೆ ಕಡಿಮೆ ಅನುಭವಿಸುವ ಜಿಲ್ಲೆಗಳ ಪೈಕಿ ಉಡುಪಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಳಿವೆ. ಉಳಿದ ಜಿಗಳು ಭಾಗಶಃ ತೊಂದರೆ ಅನುಭವಿಸಲಿದೆ ಎನ್ನುವುದು ವರದಿ ಯಲ್ಲಿ ಉಲ್ಲೇಖಿಸಲಾಗಿದೆ. ಈ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಪರಿಸ್ಥಿತಿ ಎದುರಾಗಲಿದ್ದು, ರೈತರು, ಯುವ ಸಮೂಹ ಜಲಕ್ಷಾಮ, ಅದರ ನಿವಾರಣಾ ಕ್ರಮಗಳನ್ನು ಸವಾಲಾಗಿ ಸ್ವೀಕರಿಸಬೇಕಿದೆ.

ಹಳ್ಳಿಯಲ್ಲಿ ಇಂಗು ಗುಂಡಿ ನಿರ್ಮಾಣ, ಬೋರ್ ಮತ್ತು ಬಾವಿಗಳಿಗೆ ಮಳೆ ನೀರು ಮರುಪೂರಣ ಕ್ರಮಗಳನ್ನು ಚಾಚು ತಪ್ಪದೆ ಅನುಸರಿಸಿದ್ದಲ್ಲಿ ಜಲಕ್ಷಾಮಕ್ಕೆ ಕಡಿವಾಣ ಹಾಕಬಹುದು. ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಜಲಕ್ಷಾಮ ನಿವಾರಣೆಗೆ ಇನ್ನೊಂದು ಪರಿಣಾಮಕಾರಿ ಮಾರ್ಗ. ನಗರ ಪ್ರದೇಶದಲ್ಲಿರುವ ಕನಿಷ್ಠ ೩೦ಷ ೪೦ ಅಳತೆಯ ಮನೆಗಳಿಗೆ ಕಡ್ಡಾಯವಾಗಿ ಎಲ್ಲರೂ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳ ಬೇಕು. ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಕಟ್ಟಡಗಳಿಗೆ ನಕ್ಷೆ ಅನುಮೋದನೆ ನೀಡುವಾಗ ಮಳೆ ನೀರು ಕೊಯ್ಲು ಅಳವಡಿಸಿ ಕೊಳ್ಳಬೇಕು ಎಂದು ಷರತ್ತು ವಿಧಿಸಬೇಕು. ಅಲ್ಲದೆ ಅಲ್ಲದೆ, ಮಳೆ ಕೊಯ್ಲು ಅಳವಡಿಸಿಕೊಂಡರೆ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು. ಅಲ್ಲದೆ, ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪ್ರತಿಯೊಬ್ಬರೂ ತಮ್ಮ ಮನೆಯ ಖಾಲಿ ಜಾಗಗಳಲ್ಲಿ ಮರಗಳನ್ನು ನೆಡಬೇಕು. ಆ ಮೂಲಕ ಜಲಕ್ಷಾಮ ನಿವಾರಣೆಗೆ ಪ್ರತಿಯೊಬ್ಬರೂ ಕ್ರಮ ಕೈಗೊಳ್ಳಬೇಕಿದೆ.