Wednesday, 23rd October 2024

ಷೇರುಪೇಟೆ ಚೇತರಿಕೆ: 39,000 ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ : ಷೇರುಪೇಟೆ ಮಂಗಳವಾರ ಚೇತರಿಕೆ ಕಂಡಿದ್ದು, ಮುಂಬೈ ಷೇರುಪೇಟೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 39,000 ಗಡಿ ದಾಟುವಲ್ಲಿ ಯಶಸ್ವಿಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 81.75 ಪಾಯಿಂಟ್ಸ್ ಏರಿಕೆಗೊಂಡು 11,521.81 ಪಾಯಿಂಟ್ಸ್‌ ದಾಖಲಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 287.72 ಪಾಯಿಂಟ್ಸ್ ಏರಿಕೆಗೊಂಡು 39,044.35 ಪಾಯಿಂಟ್ಸ್‌ ಗಳಿಸಿದೆ.

ಆರಂಭದಲ್ಲಿನ ಮಾರುಕಟ್ಟೆ ವಹಿವಾಟು ಅತ್ಯಂತ ಬಿಗಿಯಾದ ರೀತಿಯಲ್ಲಿ ವ್ಯಾಪಾರ ನಡೆದಿದ್ದು, ನಂತರದಲ್ಲಿ ಮಾರುಕಟ್ಟೆ ಯಲ್ಲಿ ಹಸಿರು ಬಣ್ಣದಲ್ಲಿ ದಿನದ ಮುಕ್ತಾಯ ಕಂಡಿತು. ಬ್ಯಾಂಕಿಂಗ್ ಮತ್ತು ಫಾರ್ಮಾ ಸೂಚ್ಯಂಕಗಳು ಮಾರುಕಟ್ಟೆಯ ಲಾಭಕ್ಕೆ ಹೆಚ್ಚಿನ ಕೊಡುಗೆ ನೀಡಿವೆ. ಜಾಗತಿಕ ಸೂಚನೆಗಳು ಸಹ ಸಕಾರಾತ್ಮಕವಾಗಿವೆ.

ಅಶೋಕ್ ಲೇಲ್ಯಾಂಡ್, ಇಂಡಸ್‌ಇಂಡ್ ಬ್ಯಾಂಕ್, ಮದರ್‌ಸನ್ ಸುಮಿ, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್, ಎಂ ಅಂಡ್ ಎಂ ಫೈನಾನ್ಸ್, ಲುಪಿನ್, ಅಪೊಲೊ ಹಾಸ್ಪಿಟಲ್, ಅಂಬುಜಾ ಸಿಮೆಂಟ್, ಸಿಪ್ಲಾ- ಲಾಭಗಳಿಸಿದ ಷೇರುಗಳು