ರಾಷ್ಟ್ರ ಮತ್ತು ರಾಜ್ಯ ಎರಡು ವಿಭಿನ್ನ ವಿಷಯಗಳು. ರಾಷ್ಟ್ರವು ‘ಸಾಂಸ್ಕೃತಿಕ ಪರಿಕಲ್ಪನೆ’ ಆಗಿದ್ದರೆ, ರಾಜ್ಯವು ಸಂವಿಧಾನದಿಂದ ಸ್ಥಾಪಿಸಲ್ಪಟ್ಟಿದೆ. ಅದು ರಾಜ್ಯ ಶಕ್ತಿ ಎಂದರು. ‘ಹಿಂದೂ ರಾಷ್ಟ್ರದ ಬಗ್ಗೆ ನಾವು ಕಳೆದ 100 ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ.
ಅದು ಸಾಂಸ್ಕೃತಿಕ ಪರಿಕಲ್ಪನೆ, ಸೈದ್ಧಾಂತಿಕವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಷ್ಟ್ರವು ಒಂದು ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ. ಭಾರತವು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಅದನ್ನು ಮತ್ತೆ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದರು.