ಗುಬ್ಬಿ: ಕಾಂಗ್ರೆಸ್ ನಿಂದ ಶಾಸಕನಾಗಿ ಆಯ್ಕೆಯಾಗುವ ಮೂಲಕ ತಂದೆಯ ಆಸೆಯನ್ನು ಈಡೇರಿಸುತ್ತೇನೆ ಎಂದು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಮಾದಾಪುರ ಮಣ್ಣಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚುನಾವಣ ಪ್ರಚಾರ ಆರಂಭಿಸಿ ಮಾತ ನಾಡಿದ ಅವರು ನಮ್ಮ ತಂದೆಯವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಾಲೂಕಿನಾದ್ಯಂತ ಪಕ್ಷ ಸಂಘಟನೆ ಮಾಡಿದ್ದರು ಅವರ ಕೊನೆಯ ಆಸೆಯೂ ಸಹ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸ ಬೇಕೆಂಬುದಿತ್ತು ಈ ಬಾರಿ ಚುನಾವಣೆಯಲ್ಲಿ ಅವಕಾಶ ಸಿಕ್ಕಿದೆ ಕಾಂಗ್ರೆಸ್ ನಿಂದ ಗೆದ್ದು ಶಾಸಕನಾಗುವ ಮೂಲಕ ಅವರ ಆಸೆಯನ್ನು ಈಡೇ ರಿಸುತ್ತೇನೆ ಎಂದು ಭಾವುಕರಾದ ಅವರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಲಹೆ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದೂ ಸಹ ದ್ವೇಷದ ರಾಜಕಾರಣ ಮಾಡಿಲ್ಲ ನನ್ನ ಮೇಲೆ ಏನೇ ಮಸಲತ್ತು ಮಾಡಿದರು ಸಹ ಜನ ಅಭಿಪ್ರಾಯದ ಮುಂದೆ ಎಲ್ಲವೂ ಶೂನ್ಯ ಯಾವ ವ್ಯಕ್ತಿ ಸೂಕ್ತ ಎಂದು ಜನರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಶಂಕರನಂದ್ ಮಾತನಾಡಿ, ಹಳೇ ಬೇರು ಹೊಸ ಚಿಗುರು ಎಂಬಂತೆ ಎಸ್ ಆರ್ ಶ್ರೀನಿವಾಸ್ ಸೇರ್ಪಡೆಯಿಂದ ಕಾಂಗ್ರೆಸ್ ತಾಲೂಕಿ ನಲ್ಲಿ ಹೆಮ್ಮರವಾಗಲಿದೆ ಗುಬ್ಬಿಯಲ್ಲಿ ನಾಯಕತ್ವದ ಕೊರತೆಯಿಂದ ಕಾರ್ಯ ಕರ್ತರಲ್ಲಿ ಬೇಸರವಿತ್ತು ಎಸ್ ಆರ್ ಶ್ರೀನಿವಾಸ್ ಸೇರ್ಪಡೆಯಿಂದ ಎಲ್ಲರಲ್ಲೂ ಸಂತಸ ತಂದಿದೆ.
ಈ ಒಂದು ಒಳ್ಳೆಯ ಅವಕಾಶವನ್ನು ಅನೇಕ ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಪ್ರತಿಯೊಬ್ಬರೂ ವಾಸಣ್ಣನವರನ್ನು ಬೆಂಬಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ರವರ ಕೈ ಬಲಪಡಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಚಿಕ್ಕರಂಗಯ್ಯ, ತಾತಯ್ಯ, ಮಹಮದ್ ಸಾಧಿಕ್, ನಿಂಬೆಕಟ್ಟೆ ಜಯಣ್ಣ, ಗುರು ರೇಣುಕಾರಾಧ್ಯ, ,ಉಂಡೆ ರಾಮಣ್ಣ, ಲೋಕೇಶ್ ಬಾಬು, ಕೆಆರ್ ವೆಂಕಟೇಶ್, ಜಗನ್ನಾಥ್, ಕೊಡೆಯಾಲ ಮಾದೇವ್,ಜುಂಜೇಗೌಡ, ಯತೀಶ್, ಚೇಳೂರು ಶಿವನಂಜಪ್ಪ, ಭರತ್ ಗೌಡ,ಮಂಜಣ್ಣ, ಶಿವಪ್ಪ, ಕೋಟೆ ಕಲ್ಲೇಶ್, ಹಾಗೂ ವಾಸಣ್ಣ ಬಳಗದ ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದರು.