Sunday, 15th December 2024

ದಳಪತಿ ಗೋವಿಂದರಾಜು ಮಂಚದ ವಿಷ್ಯ: ಆಡಿಯೋ ಬಹಿರಂಗ

ತುಮಕೂರು: ನಗರ ಜೆಡಿಎಸ್ ಅಭ್ಯರ್ಥಿ ಮಂಚದ ವಿಷಯವಾಗಿ ನಡೆಸಿರುವ ಆಡಿಯೋ ಬಹಿರಂಗಗೊಂಡಿದ್ದು, ಎನ್. ಗೋವಿಂದರಾಜು ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಎನ್. ಗೋವಿಂದರಾಜು ಅವರು ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಲು ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಈಗ ಆಡಿಯೊ ಬಿಡುಗಡೆಯಾಗಿರುವುದು ಇರಿಸು ಮುರಿಸಿಗೆ ಕಾರಣವಾಗಿದೆ.
ಯುವತಿಯರನ್ನು ಮಂಚಕ್ಕೆ ಕರೆಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಮುಸ್ಲಿಂ ಸಮುದಾಯದ ರೇಷ್ಮಾ ಆರೋಪ ಮಾಡಿದ್ದು, ಆಡಿಯೋ ಸಾಕ್ಷ್ಯಗಳನ್ನು ಒದಗಿಸಿದ್ದಲ್ಲದೆ, ಕುವೆಂಪು ನಗರದಲ್ಲಿರುವ ಗೋವಿಂದರಾಜು ಮನೆ ಮುಂದೆ ಗಲಾಟೆ ಮಾಡುವ ಮೂಲಕ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಆಡಿಯೊದಲ್ಲೇನಿದೆ?: ಮನೆಯಲ್ಲಿ ಯಾರೂ ಇಲ್ವಾ? ನಾನು ಬರಲಾ? ಬೇರೆ ಹುಡುಗಿಯರನ್ನು ಕರೆಸು.. ಆ ಹುಡುಗಿಯರ ಫೋಟೊ ಕಳಿಸು ಎಂಬಿತ್ಯಾದಿಯಾಗಿ ಅಶ್ಲೀಲವಾಗಿ ಮಾತನಾಡುವ ಮೂಲಕ ಹೆಣ್ಣು ಮಕ್ಕಳನ್ನು ಕಳುಹಿಸುವಂತೆ ದುಂಬಾಲು ಬೀಳುತ್ತಿದ್ದರು ಎಂದು ಗೋವಿಂದರಾಜು ಅವರ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ.