Saturday, 23rd November 2024

ಅಮರನಾಥ ಯಾತ್ರೆಯ ನೋಂದಣಿ ಆರಂಭ ಇಂದಿನಿಂದ

ನಂತನಾಗ್: ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಕಾಲ ನಡೆಯುವ ಶ್ರೀ ಅಮರ ನಾಥ ಯಾತ್ರೆಯ ನೋಂದಣಿ ಸೋಮವಾರದಿಂದ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾತ್ರೆಯು ಜುಲೈ 1 ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 31ರಂದು ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರಾಡಳಿತ ಪ್ರದೇಶದ ಸರ್ಕಾರ ತಿಳಿಸಿದೆ.

ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಲ್ಟಾಲ್ ಎರಡಕ್ಕೂ ನೋಂದಣಿ ಪ್ರಾರಂಭ ವಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ 316 ಶಾಖೆಗಳು, ಜೆ-ಕೆಯ 90 ಶಾಖೆಗಳು, ಯೆಸ್ ಬ್ಯಾಂಕ್‌ನ 37 ಶಾಖೆಗಳು ಮತ್ತು ಎಸ್‌ಬಿಐ ಬ್ಯಾಂಕ್‌ನ 99 ಶಾಖೆಗಳು ಸೇರಿದಂತೆ ದೇಶಾದ್ಯಂತ 542 ಬ್ಯಾಂಕ್ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಣಿಯಲ್ಲಿ ಹೊಸ ವೈಶಿಷ್ಟ್ಯವೆಂದರೆ ಆಧಾರ್ ಆಧಾರಿತ ನೋಂದಣಿ ಇದರಲ್ಲಿ ಯಾತ್ರಿಕರ ಹೆಬ್ಬೆರಳು ಸ್ಕ್ಯಾನ್ ಅನ್ನು ನೋಂದಣಿಗಾಗಿ ತೆಗೆದುಕೊಳ್ಳಲಾಗುತ್ತದೆ.