ಬೆಂಗಳೂರು: ವಾಹನ – ತಂತ್ರಜ್ಞಾನ ಒಟ್ಟುಗೂಡಿಸಿರುವ ಭಾರತದ ಪ್ರಮುಖ ಸಂಸ್ಥೆಯಾಗಿರುವ ರ್ಯಾಪಿಡೊ, ರಸ್ತೆ ಸುರಕ್ಷತೆಯ ಉಪಕ್ರಮಗಳಿಗೆ ಈಗ ಮತ್ತೊಂದು ಗರಿ ಸೇರಿಸುವ ಮೂಲಕ, ದೇಶದಾದ್ಯಂತ ಸುರಕ್ಷತಾ ಅಭಿಯಾನ #ರ್ಯಾಪಿಡೊಸೇಫ್ಟಿಫಸ್ಟ್ (#RapidoSafetyFirst) ಪರಿಚಯಿಸುತ್ತಿದೆ. ಈ ಪ್ರಚಾರ ಅಭಿಯಾನವು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದ್ದು, ರ್ಯಾಪಿಡೊದ ದೈನಂದಿನ ಸವಾರಿ ಸುರಕ್ಷತಾ ಸೌಲಭ್ಯಗಳಿಗೆ ರಾಷ್ಟ್ರವ್ಯಾಪಿ ಪ್ರಚಾರ ನೀಡಲಿದೆ.
ತನ್ನ ಈ ಪ್ರಚಾರ ಅಭಿಯಾನದ ಭಾಗವಾಗಿ ರ್ಯಾಪಿಡೊ, ಬೆಂಗಳೂರಿನಲ್ಲಿ ಆಟೊ-ರಿಕ್ಷಾಗಳನ್ನು ಸೀಟ್ಬೆಲ್ಟ್ನಿಂದ ಸಜ್ಜು ಗೊಳಿಸುತ್ತಿದೆ. ಹಠಾತ್ ನಿಲುಗಡೆ ಅಥವಾ ಡಿಕ್ಕಿಯ ಸಮಯದಲ್ಲಿ ಅಪಘಾತ, ಸಾವು ಮತ್ತು ಗಾಯದ ಅಪಾಯವನ್ನು ಇದು ಕಡಿಮೆ ಮಾಡಲಿದೆ. ಕಂಪನಿಯು ತನ್ನ ಕ್ಯಾಪ್ಟನ್ಗಳಿಗೆ ಸಂಬಂಧಿಸಿದಂತೆ ನಾಲ್ಕು-ಹಂತದ ಹಿನ್ನೆಲೆ ಪರಿಶೀಲನೆ ಪ್ರಕ್ರಿಯೆ ಅಳವಡಿಸುವ ಮೂಲಕ ರೈಡರ್ ಸುರಕ್ಷತೆ ಖಾತ್ರಿಪಡಿಸಿದೆ.
ಹೆಚ್ಚುವರಿಯಾಗಿ, ಮಹಿಳಾ ಸವಾರರ ಗೌಪ್ಯತೆ ಮತ್ತು ಗುರುತು ರಕ್ಷಿಸಲು ಇದು ವಿಶಿಷ್ಟವಾದ ಮಾಹಿತಿ-ಮರೆಮಾಚುವ ಸೌಲಭ್ಯ ಬಳಸುತ್ತದೆ. ಅಕ್ಷಾಂಶ ಮತ್ತು ರೇಖಾಂಶ ದತ್ತಾಂಶ ಬಳಸಿ ವಾಹನದ ಪ್ರತಿ ಕ್ಷಣದ ಚಲನವಲನದ ಮೇಲೆ ರ್ಯಾಪಿಡೊ ನಿಗಾ ಇರಿಸಲಿದೆ. ಇತರ ಪ್ರಯಾಣಿಕರ ಜೊತೆ ಬಾಡಿಗೆ ಆಟೊ ಹಂಚಿಕೊಂಡಿರುವ ಪ್ರಯಾಣಿಕರಿಗೆ 24/7 ಆನ್-ಗ್ರೌಂಡ್ ಬೆಂಬಲ ನೀಡಲಿದೆ.
ದೇಶವ್ಯಾಪಿ ಪ್ರಚಾರ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರ್ಯಾಪಿಡೊ ಆಟೊದ ಸಹ-ಸಂಸ್ಥಾಪಕ ಪವನ್ ಗುಂತುಪಲ್ಲಿ ಅವರು, ‘ರಸ್ತೆ ಸುರಕ್ಷತೆಯ ಮಹತ್ವ ಮನವರಿಕೆ ಮಾಡಿಕೊಡಲು, ಜಾಗೃತಿ ಉತ್ತೇಜಿಸಲು ಮತ್ತು ಅಪಘಾತಗಳು ಹಾಗೂ ಸಾವು–ನೋವಿನ ಸಂಖ್ಯೆ ಕಡಿಮೆ ಮಾಡಲು ರ್ಯಾಪಿಡೊದ ಬದ್ಧತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ‘ರ್ಯಾಪಿಡೊ– ಜವಾಬ್ದಾರಿಯುತ ಸೇವಾ ಪೂರೈಕೆದಾರ ಸಂಸ್ಥೆ ಆಗಿರುವುದರಿಂದ, ರಸ್ತೆ ಸುರಕ್ಷತೆಯು ಇಂದು ಪ್ರಮುಖ ಕಾಳಜಿಯಾಗಿದೆ ಎಂಬುದನ್ನು ನಾವು ನಿಜವಾಗಿಯೂ ನಂಬುತ್ತೇವೆ. ಆದ್ದರಿಂದ ಕ್ಯಾಪ್ಟನ್ಗಳಿಗೆ ಕಟ್ಟುನಿಟ್ಟಾದ ತರಬೇತಿ ನೀಡುವ ಜಾಗೃತಿ ಅಭಿಯಾನವು ಆರಂಭದಿಂದಲೇ ನಮ್ಮ ನೀತಿಯ ಭಾಗವಾಗಿದೆ. #ರ್ಯಾಪಿಡೊಸೇಫ್ಟಿಫಸ್ಟ್ ಪ್ರಚಾರ ಅಭಿಯಾನವು, ಸೀಟ್ಬೆಲ್ಟ್ ಮತ್ತು ಗ್ರಾಹಕರ ದತ್ತಾಂಶಗಳ ಗೋಪ್ಯತೆ ಮತ್ತು ಸುರಕ್ಷತೆಗಾಗಿ ಸಂಪೂರ್ಣ ಬಗೆಯ ಪರಿಹಾರಗಳನ್ನು ಒಳಗೊಂಡಿದೆ.
ರ್ಯಾಪಿಡೊ ಅಪ್ಲಿಕೇಷನ್ನ ಸುರಕ್ಷತಾ ವೈಶಿಷ್ಟ್ಯಗಳು – ತಮ್ಮ ಪಯಣದ ಉದ್ದಕ್ಕೂ ಸುರಕ್ಷಿತ, ಭದ್ರತೆಯ ಮತ್ತು ಉತ್ತಮ ರಕ್ಷಣೆಯ ಭಾವನೆಯನ್ನು ಖಚಿತಪಡಿಸುತ್ತವೆ. ಭಾರತದಲ್ಲಿ ರಸ್ತೆ ಅಪಘಾತಗಳು ದಿಗಿಲುಗೊಳಿಸುವ ಅಂಕಿಅಂಶಗಳನ್ನು ಹೊಂದಿರುವುದರಿಂದ, ರ್ಯಾಪಿಡೊದ ಈ ಪ್ರಚಾರ ಅಭಿಯಾನದ ಉಪಕ್ರಮವು ಸಾವು ಮತ್ತು ಗಾಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ’ ಎಂದು ಗುಂತುಪಲ್ಲಿ ಅವರು ಹೇಳಿದ್ದಾರೆ.
ಸವಾರರು ಮತ್ತು ಪ್ರಯಾಣಿಕರಿಗೆರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ರ್ಯಾಪಿಡೊ ಆಟೊ ಹಲವಾರು ಸುರಕ್ಷತಾ ಕ್ರಮಗಳನ್ನು ಸಹ ಜಾರಿಗೆ ತಂದಿದೆ. ಸವಾರರಿಗೆ ಕಡ್ಡಾಯ ಸುರಕ್ಷತಾ ತರಬೇತಿ, ನಿಯಮಿತ ವಾಹನ ನಿರ್ವಹಣೆ ತಪಾಸಣೆ ಮತ್ತು ಸುರಕ್ಷತೆ ಪಾಲನೆ ಆಗುತ್ತಿರುವುದರ ಬಗ್ಗೆ ಮೇಲ್ವಿಚಾರಣೆ ಮಾಡಲು ಸವಾರಿಯ ನೈಜ-ಸಮಯದ ಮೇಲೆ ನಿಗಾ ಇರಿಸುವುದು ಈ ಕ್ರಮಗಳಲ್ಲಿ ಸೇರಿವೆ. ಇದಲ್ಲದೆ, ಎಲ್ಲಾ ರ್ಯಾಪಿಡೊ ಕ್ಯಾಪ್ಟನ್ಗಳು ಕಲಿಕೆ (ಲರ್ನಿಂಗ್ ಮೊಡ್ಯುಲ್ ಸಿಸ್ಟಮ್) ಮತ್ತು ತರಬೇತಿ ಅಭ್ಯಾಸ ಕಲಿಕೆ, ಗ್ರಾಹಕರ ಜೊತೆಗಿನ ಸೂಕ್ತ ನಡವಳಿಕೆ, ರಸ್ತೆ ಸುರಕ್ಷತೆ ತರಬೇತಿ ಮತ್ತು ಕಾರ್ಯಾಚರಣೆಯ ತರಬೇತಿ ಪೂರ್ಣಗೊಳಿಸಬೇಕು.
ರ್ಯಾಪಿಡೊ ಆಟೊ, ಭಾರತದಾದ್ಯಂತ ನಗರ ಸಂಚಾರ ಪೊಲೀಸ್ ಇಲಾಖೆಗಳ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಈ ಉಪಕ್ರಮಗಳಡಿ ಸಿಪಿಆರ್ ಮತ್ತು ಅವರ ಕ್ಯಾಪ್ಟನ್ಗಳಿಗೆ ಮೂಲ ಜೀವನ ಬೆಂಬಲ ತರಬೇತಿ ನೀಡಬೇಕು ಮತ್ತು ಬೆಂಗಳೂರು, ಗುರುಗ್ರಾಮ, ಹೈದರಾಬಾದ್, ಚೆನ್ನೈ, ವಿಜಯವಾಡ ಮತ್ತು ಮದುರೈನಂತಹ ನಗರಗಳಲ್ಲಿ ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆ ಕಂಡುಬರುವ ಕೂಡು ರಸ್ತೆಗಳಲ್ಲಿ ರಸ್ತೆ ಸುರಕ್ಷತೆಯ ಮಹತ್ವ ಪ್ರದರ್ಶಿಸುವ ಮೈಮ್ ಕಾರ್ಯಕ್ರಮ ಒಳಗೊಂಡಿವೆ. ರಸ್ತೆ ಸುರಕ್ಷತಾ ನಿಯಮಗಳನ್ನು ಬದಲಾಯಿಸುವ ಸಮಗ್ರ ರಸ್ತೆ ಸುರಕ್ಷತಾ ಕಾರ್ಯಕ್ರಮ ಅಭಿವೃದ್ಧಿಪಡಿಸಲು ಪೊಲೀಸ್ ಮತ್ತು ಇತರ ಭಾಗಿದಾರರ ಜೊತೆ ನಿರಂತರವಾಗಿ ಸಹಯೋಗ ಹೊಂದುವುದನ್ನು ರ್ಯಾಪಿಡೊ ಮುಂದುವರೆಸಲಿದೆ.
ರಸ್ತೆ ಸುರಕ್ಷತೆಯು ದೇಶದಾದ್ಯಂತ ಒಂದು ಬಹುದೊಡ್ಡ ಸವಾಲಾಗಿ ಉಳಿದಿರುವುದರಿಂದ, ಅಪಘಾತ ಮತ್ತು ಸಾವು–ನೋವು ಸಂಖ್ಯೆ ಕಡಿಮೆ ಮಾಡಲು ಇಂತಹ ಉಪಕ್ರಮಗಳು ಸದ್ಯದ ಅಗತ್ಯವಾಗಿದೆ. #ರ್ಯಾಪಿಡೊಸೇಫ್ಟಿಫಸ್ಟ್ ಅಭಿಯಾನವು ಇಂತಹ ಬಹುಬಗೆಯ ಉಪಕ್ರಮಗಳೊಂದಿಗೆ ದೇಶದಾದ್ಯಂತ ರ್ಯಾಪಿಡೊದ ‘ಸುರಕ್ಷತೆಯೇ ಮೊದಲು‘ ನಿಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಉದ್ದೇಶಿಸಿದೆ.