Tuesday, 26th November 2024

ದ್ವೇಷದ ರಾಜಕಾರಣ ಮಾಡಿಲ್ಲ: ಯಶವಂತರಾಯಗೌಡ ಪಾಟೀಲ

ಇಂಡಿ: ದ್ವೇಷ, ಅಸೂಯಯೆ ರಾಜಕಾರಣ ಮಾಡಿಲ್ಲ ಮುಂದೇಯೂ ಮಾಡುವುದಿಲ್ಲ ಜೀವನದ ಕೊನೆಯ ಉಸಿರು ಇರುವವ ರೆಗೂ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಅಭಿವೃದ್ದಿ ಮೇಲೆ ರಾಜಕಾರಣ ಮಾಡುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ತಡವಲಗಾ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ವಿಧಾನ ಸಭೆಯ ಅಧಿವೇಶನದಲ್ಲಿ ಈ ಭಾಗದ ಜ್ವಲಂತ ಸಮಸ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಮತಕ್ಷೇತ್ರದಲ್ಲಿ ೧೦ ವರ್ಷಗಳ ಕಾಲ ಸಾಕಷ್ಟು ಅಭಿವೃದ್ದಿ ಪರ ಕೆಲಸ ಮಾಡಿದ್ದೇನೆ. ಹೂವು ತರುವ ಕೆಲಸ ಮಾಡಿದ್ದೇನೆ ಹುಲ್ಲು ತರುವ ಕೆಲಸ ಮಾಡಿಲ್ಲ ಮತಕ್ಷೇತ್ರದ ಘನತೆ ಗೌರ ಎತ್ತಿಹಿಡಿದಿರುವೆ.

ಇದಕ್ಕೆಲ್ಲಾ ನಿಮ್ಮಂತ ಹೃದಯವಂತರ ಕರುಣೆ. ಕೆಲಸ ಮಾಡಿದ್ದೇನೆ ಮತಕೇಳುವ ನೈತಿಕ ಹಕ್ಕು ನನಗಿದೆ ದುಡಿದವರಿಗೆ ಕೂಲಿ ಕೊಡುವುದು ನಿಮ್ಮ ಧರ್ಮ ಕ್ಷೇತ್ರದ ಹೃದಯವಂತ ಜನತೆ ಹೆಚ್ಚು ಮತಗಳ ಅಂತರದಿ೦ದ ಗೆಲ್ಲಿಸಿ. ಇಂಡಿ ಅನೇಕ ದಶಕಗಳಿಂದ ಅಭಿವೃದ್ದಿ ವಂಚಿತ ಪ್ರದೇಶ ಈ ಭಾಗಕ್ಕೆ ಹೊಸಸ್ಪರ್ಷ ನೀಡಿ ಅಂದಿನ ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯವರ ಆಡಳಿತ ಅವಧಿಯಲ್ಲಿ ತಾಲೂಕಿಗೆ ಕರ್ನಾಟಕ ರಾಜ್ಯದಲ್ಲಿಯೇ ಯಾವುದೇ ಮತಕ್ಷೇತ್ರಕ್ಕೆ ತರಲಾರದಷ್ಟು ಅನುಧಾನ ತಂದು ಸರ್ವವಿಧ ದಲ್ಲಿ ಸುಧಾರಣೆ ಮಾಡಿದ್ದೇನೆ.

ನನ್ನ ಅವಧಿಯಲ್ಲಿ ಎಲ್ಲಾ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿ ಸರ್ವಜನ ಸುಖಾಯ ಹಿತಾಯ ಎಂಬ ಚಿಂತನೆಯಿAದ ಕೆಲಸ ಮಾಡಿದ್ದೇನೆ. ಮತಕ್ಷೇತ್ರದಲ್ಲಿ ಯಾವ ಕೆಲಸ ಆಗುವುದಿಲ್ಲ ಎಂದು ಕೈಚೆಲಿ ಕುಳಿತದ್ದರೂ ಅದನ್ನು ನಾನು ಚಾಲೇಂಜ ನ್ನಾಗಿ ಸ್ವೀಕರಿಸಿ ಮಾತನಾಡದೆ ಮಾಡಿ ಮುಗಿಸಿರುವೆ . ಇಂಡಿ ಪಟ್ಟಣ ಸರ್ವವಿಧದಲ್ಲಿ ಸುಧಾರಣೆ ಮಾಡುವುದರ ಜೊತೆ ಒಂದು ಜಿಲ್ಲೆಗೆ ಬೇಕಾದ ಮೂಲಭೂತ ಸೌಲಭ್ಯ ಅನುಷ್ಠಾನಗೋಳಿಸಿದ್ದೇನೆ ಇದೊಂದು ಬಾರಿ ಹೆಚ್ಚಿನ ಮತಗಳ ಅಂತರದಿ೦ದ ಗೆಲ್ಲಿಸಿ ಮುಂಬರುವ ದಿನಗಳಲ್ಲಿ ಯುವಕರಿಗೆ ಉದ್ಯೋಗ ,ಸಣ್ಣ ಕೈಕಾರಿಕೆಗಳ ಪ್ರಗತಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ಬಾಬು ಸಾಹುಕಾರ ಮೇತ್ರಿ, ಚಂದ್ರಶೇಖರ ರೂಗಿ, ಬಿ.ಎಸ್.ಇಂಡಿ, ತಮ್ಮಣ್ಣಾ ಪೂಜಾರ, ಸೋಮಶೇಖರ ಬ್ಯಾಳಿ, ಆನಂದ ಹುಣಸಗಿ, ರವಿ ಹೊಸಮನಿ, ಉಸ್ಮಾನಗಣಿ ಕಸಬ, ಮಾಪಾ ತಾಂಬೋಳಿ, ಕಲ್ಯಾಣಿ ಗಣವಲಗಾ, ಶೇಖರ ಕಲಾವಂತ, ಮಲ್ಲು ಇಂಡಿ, ರಾಮಗೊಂಡ ಚವ್ಹಾಣ,ಸದಾಶಿವ ಪ್ಯಾಟಿ, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ,ಅಶೋಕ ಮಿರ್ಜಿ ಸೇರಿದಂತೆ ಅನೇಕ ಕಾಂಗ್ರೆಸ ಮುಖಂಡರು ಉಪಸ್ಥಿತರಿದ್ದರು.

ಧರೇಪ್ಪ ಮೇತ್ರಿ, ಕಿರಣ ಪೂಜಾರಿ, ಸಲೀಂ ಭಾಗವಾನ, ಅನೀಲ ಗೊಬ್ಬುರ, ಕಲ್ಮೇಶ ಹೊಸಮನಿ,ಅಪ್ಪಾಸಾಹೇಬ ನಿಂಬಾಳ ಸೇರಿದಂತೆ ೨೫೦ಕ್ಕಿಂತ ಅಧಿಕ ಜನರು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಇವರ ನೈತೃದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

*

ಇಂಡಿ ಜಿಲ್ಲೆಯಾಗಲು ಅಗತ್ಯೆವಿರುವ ಎಲ್ಲಾ ಸೌಲಭ್ಯಗಳನ್ನು ಕ್ರೂಡಿಕರಿಸಿದ್ದೇನೆ. ಶೈಕ್ಷಣಿಕವಾಗಿ ತಾಲೂಕಿನಲ್ಲಿ ಕ್ರಾಂತಿಯನ್ನೆ ಮಾಡಿರುವೆ ಸರ್ಕಾರಿ ಕೋಟಾದಡಿಯಲ್ಲಿ ಎಂಜಿನಿಯರಿAಗ್ ಕಾಲೇಜಿಗೆ ಮಂಜೂರಾತಿ ಪಡೇದುಕೊಳ್ಳುತ್ತೇನೆ ಇದರಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಸ್ಥಾಪನೆ ಯುವಕರಿಗೆ ಬಂಪರ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯ ನಿವಾರಣೆಮಾಡುವೆ.

ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ