Saturday, 23rd November 2024

3,325 ಹೊಸ ಕರೋನ ಪ್ರಕರಣ ಪತ್ತೆ

ವದೆಹಲಿ: ದೇಶದಲ್ಲಿ ಮಂಗಳವಾರ 3,325 ಹೊಸ ಕರೋನ ವೈರಸ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 47,246 ರಿಂದ 44,175 ಕ್ಕೆ ಇಳಿದಿದೆ.

ಕಳೆದ 24 ಗಂಟೆಗಳಲ್ಲಿ 17 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,31,564 ಕ್ಕೆ ಏರಿದೆ. ಇಲ್ಲಿಯವರೆಗೂ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 4.49 ಕೋಟಿ (4,49,52,996) ದಾಖಲಾಗಿದೆ.

ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,43,77,257 ಕ್ಕೆ ಏರಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.18 ರಷ್ಟಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.