Friday, 20th September 2024

ಎಸ್​ಟಿ ಮೀಸಲಾತಿ ವಿಚಾರ: ಮಣಿಪುರದಲ್ಲಿ ಹಿಂಸಾಚಾರ, ಕರ್ಫ್ಯೂ

ವದೆಹಲಿ : ಮಣಿಪುರದಲ್ಲಿ ಎಸ್​ಟಿ ಮೀಸಲಾತಿ ವಿಚಾರವಾಗಿ ಹಿಂಸಾಚಾರ ಭುಗಿಲೆ ದಿದ್ದು, ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಇಂಟರ್​ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹಿಂಸಾಚಾರ ಭುಗಿಲೆದ ಬೆನ್ನಲ್ಲೆ ಸೇನೆಯು ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ರೀತಿ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದೆ. ಬುಡಕಟ್ಟು ಆಂದೋಲನದ ಸಂದರ್ಭದಲ್ಲಿ ಹಿಂಸಾಚಾರ ಹೆಚ್ಚಾದ ಹಿನ್ನೆಲೆ ಮಣಿಪುರದ 8 ಜಿಲ್ಲೆಗಳಾದ ಇಂಫಾಲ್ ಪಶ್ಚಿಮ, ಕಾಕ್ಚಿಂಗ್, ತೌಬಲ್, ಜಿರಿಬಾಮ್ ,ಬಿಷ್ಣುಪುರ್ , ಚುರಾಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ತೆಂಗ್‌ನೌಪಾಲ್ ಕರ್ಫ್ಯೂ ವಿಧಿಸಲಾಯಿತು.

ಇಡೀ ಈಶಾನ್ಯ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನರಿಗೆ ಸಂವಹನಕ್ಕೆ ಭಾರೀ ತೊಂದರೆ ಉಂಟಾಗಿದೆ ಎಂದು ತಿಳಿಯಲಾಗಿದೆ.