ದಾದಿ ದಿನ
ಶಿವನಗೌಡ ಪೊಲೀಸ್ ಪಾಟೀಲ್
ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ವ್ಯಕ್ತಿಗಳು ವೈದ್ಯರು ಎಂದು ಅನೇಕ ಜನರು ಭಾವಿಸುತ್ತಾರೆ. ಅವರ ಜೊತೆ ದಾದಿ ಯರ ಶ್ರಮವು ಅಷ್ಟೇ ಇದೆ. ರೋಗಿಗಳ ಯೋಗಕ್ಷೇಮ, ಸುರಕ್ಷತೆ ಮತ್ತು ಚೇತರಿಕೆಗೆ ಜವಾಬ್ದಾರರಾಗಿರುವ ನಮ್ಮ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ.
ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಮತ್ತು ಎಲ್ಲರಿಗೂ ಜಾಗತಿಕ ಆರೋಗ್ಯ ವನ್ನು ಸುಧಾರಿಸಲು ಭವಿಷ್ಯದಲ್ಲಿ ನಾವು ಶುಶ್ರೂಷೆಗೆ ಏನು ಬಯಸುತ್ತೇವೆ ಎಂಬುದನ್ನು ತಿಳಿಸುವ ಜಾಗತಿಕ ಅಭಿಯಾನದ ರೀತಿ ಕಾರ್ಯ ಮಾಡಬೇಕಾಗಿದೆ. ನಾವು ಸಾಂಕ್ರಾಮಿಕದ ಪಾಠಗಳಿಂದ ಕಲಿಯಬೇಕು ಮತ್ತು ಇವುಗಳನ್ನು ಭವಿಷ್ಯದ ಕ್ರಿಯೆಗಳಾಗಿ ಮಾರ್ಪಡಿಸ ಬೇಕು. ಜಗತ್ತಿನ ಬಹುತೇಕ ದಾದಿಯರು ಕೋವಿಡ್೧೯ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಅವರ ಸೇವೆಯನ್ನ ಇಡೀ ಜಗತ್ತು ಮರೆಯಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಯಾವುದೇ ಸಂಕಷ್ಟ ಸಂಭವಿಸಿದರು ಕೂಡ ಸಂಕಷ್ಟದ ಸಮಯದಲ್ಲಿ, ಸಂಕಷ್ಟದ ನಂತರ ಪುನರ್ವಸತಿ ಕಾರ್ಯಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲುವವರೆಂದರೆ ಅದು ದಾದಿಯರು ಮಾತ್ರ. ಶುಶ್ರೂಷಕರು ಸಮಾಜಕ್ಕೆ ನೀಡಿರುವ ಸೇವೆಗಳ ಗೌರವಾರ್ಥವಾಗಿ ಪ್ರತಿ ವರ್ಷ ಮೇ ೧೨ರಂದು ವಿಶ್ವಾದ್ಯಂತ ‘ಶುಶ್ರೂಷಕರ ದಿನ’ ಆಚರಿಸಲಾಗುತ್ತದೆ. ಈ ದಿನ ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ೧೯೬೫ರಲ್ಲಿ ಈ ಆಚರಣೆಯನ್ನು ಜಾರಿಗೆ ತರಲಾಯಿತು.
೧೮೨೦ರ ಮೇ ೧೨ರಂದು ಜನಿಸಿದ ಪ್ಲಾರೆನ್ಸ್ ನೈಟಿಂಗೇಲ್ ಇವರನ್ನು ಆಧುನಿಕ ನರ್ಸಿಂಗ್ ಸಂಜಾತೆ ಎಂದು ಕರೆಯುತ್ತಾರೆ. ಮೂಲತಃ ಇಟಲಿ ದೇಶದಲ್ಲಿ ಜನಿಸಿ ಬಳಿಕ ಬ್ರಿಟಿಷ್ ದೇಶದ ಸಂಜಾತೆಯಾದ ಈಕೆ ಆಗಸ್ಟ್ ೧೩, ೧೯೧೦ ರಲ್ಲಿ ಇಹಲೋಕ ತ್ಯಜಿಸಿದರು. ಸುಮಾರು ೯೦ ವರ್ಷಗಳ ಪರಿಪುರ್ಣ ಬದುಕು ಸವೆಸಿದ ಈಕೆ ತನ್ನ ಜೀವನವನ್ನು ಮನುಕುಲದ ಸೇವೆಗೆ ಮುಡಿ ಪಾಗಿಟ್ಟಿದ್ದಳು. ಇಂದಿಗೆ ಆಕೆ ಹುಟ್ಟಿ ೨೦೩ ವರ್ಷಗಳು ಪೂರ್ತಿಯಾಗಿವೆ. ಅಕೆ ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ ದಾದಿಯರ ದಿನ ನೆರವೇರಿಸಲಾಗುತ್ತದೆ.
ಜನವರಿ ೧೯೭೪ ರಲ್ಲಿ, ಆಧುನಿಕ ಶುಶ್ರೂಷೆಯ ಸಂಸ್ಥಾಪಕರಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ವಾರ್ಷಿಕೋತ್ಸವ ವಾದ ಕಾರಣ ಈ ದಿನವನ್ನು ಆಚರಿಸಲು ೧೨ ಮೇ ಅನ್ನು ಆಯ್ಕೆ ಮಾಡಲಾಯಿತು. ಪ್ರತಿ ವರ್ಷ, ಐಸಿಎನ್ ಜನಸಂಖ್ಯೆಗೆ ಉತ್ತಮ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವ ಅಗತ್ಯವನ್ನು ಕಂಡುಕೊಂಡಿತು. ಹಲವಾರು ಆಸ್ಪತ್ರೆಗಳಿದ್ದರೂ ವೈದ್ಯರನ್ನು ಬೆಂಬಲಿಸಲು ದಾದಿಯರ ಕೊರತೆ ಇತ್ತು.
ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ವ್ಯಕ್ತಿಗಳು ವೈದ್ಯರು ಎಂದು ಅನೇಕ ಜನರು ಭಾವಿಸುತ್ತಾರೆ. ಅವರ ಜೊತೆ ದಾದಿಯರ ಶ್ರಮವು ಅಷ್ಟೇ ಇದೆ. ರೋಗಿಗಳ ಯೋಗಕ್ಷೇಮ, ಸುರಕ್ಷತೆ ಮತ್ತು ಚೇತರಿಕೆಗೆ ಜವಾಬ್ದಾರರಾಗಿರುವ ನಮ್ಮ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ದಾದಿಯರು ಅಗಾಧ ಪ್ರಮಾಣದ ಜ್ಞಾನವನ್ನು ಹೊಂದಿದ್ದಾರೆ ಮತ್ತು ಅನೇಕ ವೈವಿಧ್ಯಮಯ ಕೌಶಲ್ಯಗಳನ್ನು ಅವರು ಪರಿಪೂರ್ಣತೆ ಮತ್ತು ಅಭಿವೃದ್ಧಿಗಾಗಿ ಸೇವೆಗೈಯುತ್ತಾರೆ.
ಎಲ್ಲಾ ಸಮಯದಲ್ಲೂ ತೀವ್ರವಾದ ಒತ್ತಡವು ಕೆಲಸದ ಒಂದು ಭಾಗವಾಗಿರುವ ನಿರ್ಣಾಯಕ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ದಾದಿಯರು ಜಗತ್ತಿನಲ್ಲಿ ಹೊಸ ಜೀವನವನ್ನು ತರಲು ಸಹಾಯ ಮಾಡುತ್ತಾರೆ. ಅನಾರೋಗ್ಯ ಮತ್ತು ಗಾಯಗೊಂಡವರನ್ನು ದಣಿವರಿಯಿಲ್ಲದೆ ನೋಡಿಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ತಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅವರು ಉಳಿಸಲು ಎಲ್ಲವನ್ನೂ ಮಾಡಿದ ರೋಗಿಗಳನ್ನು ವೀಕ್ಷಿಸುತ್ತಾರೆ.
ಅನೇಕ ಸಂದರ್ಭಗಳಲ್ಲಿ ಒಬ್ಬರ ಜೀವ ಉಳಿಸಲು ಸಮಯಕ್ಕೆ ವೈದ್ಯರ ಪ್ರಿಸ್ಕ್ರಿಪ್ಶನ್ನಲ್ಲಿ ತಪ್ಪಾದದ್ದನ್ನು ಗಮನಿಸಿದ ಜಾಗರೂಕ ನರ್ಸ್, ಸರಿಯಾದ ಮಾರ್ಗವನ್ನು ತೋರಿ ತಮ್ಮ ಮತ್ತು ಕೆಲಸದ ಸಮಯದಲ್ಲಿ ಕಠಿಣ ಪರಿಶ್ರಮ, ದೀರ್ಘ
ಸಮಯ ಮತ್ತು ಭಾವನಾತ್ಮಕ ಒತ್ತಡವನ್ನು ನಿಭಾಯಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ. ರೋಗಿಯನ್ನ ಜೀವ ಉಳಿಸಲು ಸತತ ಪ್ರಯತ್ನದಲ್ಲಿ ಇರುತ್ತಾರೆ. ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಗ್ರಾಮಮಟ್ಟದಿಂದ ದೆಹಲಿವರೆಗೂ ಆರೋಗ್ಯಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಿಚಾರದಲ್ಲಿ ದಾದಿಯರ ಶ್ರಮ ಅಪಾರವಾದದ್ದು.
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯದ ಮತ್ತು ಆರೈಕೆ ಮಾಡುವಲ್ಲಿ ಗ್ರಾಮದ ಜನರನ್ನ ಆರೋಗ್ಯ ಸೇವೆಯನ್ನು ಪಡೆದು ಕೊಳ್ಳುವಂತೆ ಮಾಡುವಲ್ಲಿ ಸರಿಯಾದ ಸೌಲಭ್ಯಗಳಾದ ವಿತರಿಸುವಲ್ಲಿ ನರ್ಸ್ಗಳ ಪಾತ್ರ ಪ್ರಮುಖವಾದದ್ದು. ಗರ್ಭಿಣಿ ಮಹಿಳೆಯ ಆರೋಗ್ಯ, ಮಕ್ಕಳ ಆರೋಗ್ಯ, ವೃದ್ಧರ ಆರೋಗ್ಯ ಮತ್ತು ನಾಗರಿಕರ ಆರೋಗ್ಯಗಳಿಗೆ ಹಾಗೂ ವಿಶೇಷವಾದ ರೋಗಗಳಿಗೆ ಒಳಗಾಗಿರುವ ರೋಗಿಗಳ ಆರೈಕೆಯಲ್ಲಿ ಅವರಲ್ಲಿ ಆತ್ಮಸ್ಥೈರ್ಯ ಆತ್ಮವಿಶ್ವಾಸವನ್ನು ಮೂಡಿಸಿ ವೈದ್ಯಕೀಯ ಸೌಲಭ್ಯವನ್ನು ಅವರು ಪಡೆದುಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಗ್ರಾಮ ಭಾಗಗಳಲ್ಲಿ ಇವತ್ತು ಶೇ. ೯೯ ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲಾಗುತ್ತಿವೆ. ಅದಕ್ಕೆ ಕಾರಣ ಈ ದಾರಿಯರೇ. ಭಾರತ ದಲ್ಲಿ ವೈದ್ಯಕೀಯ ಕ್ಷೇತ್ರದ ಸೌಲಭ್ಯಗಳು ಅಷ್ಟು ಹೇಳಿಕೊಳ್ಳದಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೆ ಕರೋನಾದ ಕಾಲದ ನಂತರ ಸ್ವಲ್ಪ ಬದಲಾವಣೆಯಾಗಿದ್ದರೂ ಇನ್ನೂ ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ, ನಗರ ಆರೋಗ್ಯ ಕೇಂದ್ರಗಳಿಗೆ ಹೋಲಿಸಿದರೆ ವೈದ್ಯರ ಪ್ರಮಾಣ ಇನ್ನೂ ಕಡಿಮೆ ಇದೆ. ಆ ವೈದ್ಯರಿಲ್ಲದ ಪರಿಸ್ಥಿತಿ ಯನ್ನು ಸಂಪೂರ್ಣವಾಗಿ ನಿಭಾಯಿಸುವವರೇ ಈ ನರ್ಸ್ಗಳು. ಭಾರತದಲ್ಲಿ ನಗರದಲ್ಲಿರುವ ವೈದ್ಯಕೀಯ ಸೌಲಭ್ಯಗಳು ಮತ್ತು ಗ್ರಾಮೀಣ ದಲ್ಲಿರುವ ವೈದ್ಯಕೀಯ ಸೌಲಭ್ಯಗಳು ವ್ಯತ್ಯಾಸವಿದ್ದರೂ ಕೂಡ ನರ್ಸ್ಗಳ ಸೇವೆಯ ಪ್ರಮಾಣದಲ್ಲಿಯೂ ಕೂಡ ಯಾವುದೇ ವ್ಯತ್ಯಾಸವಾಗಿಲ್ಲ.
ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರು, ಮಾನವೀಯತೆಯ ದೃಷ್ಟಿಯಿಂದ, ಕಠಿಣ ಪರಿಶ್ರಮ ದಿಂದ, ತಮ್ಮದೇ ಆದ ಸೇವೆಯನ್ನು ನೀಡುತ್ತಿದ್ದಾರೆ. ಎಷ್ಟು ಆಸ್ಪತ್ರೆಗಳಲ್ಲಿ ವೈದ್ಯರಿಗಿಂತ ನರ್ಸ್ಗಳ ಆರೈಕೆಯ ಕಾರಣದಿಂದ ರೋಗಿಗಳು ಆಸ್ಪತ್ರೆ ಹೋಗುವ ಉದಾಹರಣೆಗಳು ಇವೆ. ಭಾರತದ ಗ್ರಾಮೀಣ ಭಾಗಗಳಲ್ಲಿರುವ ದಾದಿಯರನ್ನ ಅಥವಾ ನರ್ಸ್ ಗಳನ್ನ ಡಾ.ಮೇಡಂ ಎಂದು ಕರೆಯುತ್ತಾರೆ.
ಅಷ್ಟರಮಟ್ಟಿಗೆ ಸೇವೆಯನ್ನು ನೀಡುತ್ತಿದ್ದಾರೆ. ಅರೆ ವೈದ್ಯಕೀಯ ಶಿಕ್ಷಣವನ್ನು ಪಡೆದಿರುವ ಇವರು ರೋಗಿಗಳ ಹಾರೈಕೆ ಮತ್ತು ವೈದ್ಯರು ನೀಡುವ ಔಷಧಿಗಳನ್ನ ನೀಡುವಲ್ಲಿ ವೈದ್ಯರು ಮತ್ತು ರೋಗಿಗಳ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಬರೀ ಔಷಧಗಳನ್ನು ವಿಸ್ತರಿಸುವುದಷ್ಟೇ ಅಲ್ಲದೆ ರೋಗಿಯ ಮತ್ತು ರೋಗಿಯ ಕುಟುಂಬದವರ ಮನಸ್ಥಿತಿಗಳನ್ನ ಅರಿತು
ರೋಗದ ಪ್ರಮಾಣವನ್ನು ತಿಳಿದುಕೊಂಡು ಅವರು ಮಾನಸಿಕವಾಗಿ ಕುಗ್ಗಿ ಹೋಗದಂತೆ ಅವರಲ್ಲಿ ಪುನರ್ವಸತಿ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ರೋಗಿ ಮತ್ತು ಆ ಕುಟುಂಬದವರಿಗೆ ಧೈರ್ಯವನ್ನು ತುಂಬುತ್ತಾರೆ.
ಜನರ ಆರೋಗ್ಯ ರಕ್ಷಣೆಯ ಸೇವಕರಾದ ಎಲ್ಲಾ ದಾದಿ ಯರು ಹಗಲಿರುಳು ರೋಗಿಗಳ ಸೇವೆಗೈದು ಜೀವ ರಕ್ಷಣೆ, ಆರೋಗ್ಯ ರಕ್ಷಣೆ ಮಾಡುವ ಆರೋಗ್ಯ ಕ್ಷೇತ್ರದ ಬುನಾದಿಯಾಗಿದ್ದಾರೆ. ವೈದ್ಯರು ಮತ್ತು ದಾರಿಯರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲಾದರೂ ಸ್ವಲ್ಪ ವ್ಯತ್ಯಾಸವಾದರೆ ಅಪಾಯ ಕಟ್ಟಿಟ್ಟ ಬುತ್ತಿ, ನಂಬಿಕೆ ಗೌರವ ಆದರ್ಶ ವಿಶ್ವಾಸಗಳು ವ್ಯಾಪಾರಕ್ಕಾಗಿ ಕಳೆದು ಹೋಗಿರುವ ಸಂದರ್ಭದಲ್ಲಿ ಪ್ರೀತಿ ವಿಶ್ವಾಸದಿಂದ ರೋಗಿಗಳ ಮನೋಸ್ಥೈರ್ಯವನ್ನು ಹೆಚ್ಚಿಸಿ, ಆತ್ಮವಿಶ್ವಾಸವನ್ನು ಮೂಡಿಸಿ,
ರೋಗಿ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳುವ ಎಲ್ಲಾ ದಾದಿಯರಿಗೂ ಹೃದಯಪೂರ್ವಕ ಅಭಿನಂದನೆಗಳು. ೨೦೨೩ ರ ಸಂಪನ್ಮೂಲದ ಥೀಮ್ ನಮ್ಮ ದಾದಿಯರು, ನಮ್ಮ ಭವಿಷ್ಯ.