Saturday, 23rd November 2024

ನಕಲಿ ಜಾಹೀರಾತುಗಳಲ್ಲಿ ಸಚಿನ್ ಹೆಸರು ಬಳಕೆ: ದೂರು ದಾಖಲು

ಮುಂಬೈ : ಅಂತರ್ಜಾಲದಲ್ಲಿ ಪ್ರಸಾರವಾಗುವ ನಕಲಿ ಜಾಹೀರಾತುಗಳಲ್ಲಿ ತಮ್ಮ ಹೆಸರು, ಫೋಟೋ ಮತ್ತು ಧ್ವನಿಯನ್ನ ಬಳಸುವುದರ ವಿರುದ್ಧ  ಮಾಜಿ ಕ್ರಿಕೆಟಿಗ ಸಚಿನ್ ತೆಂಡೂ ಲ್ಕರ್ ಮುಂಬೈ ಪೊಲೀಸರ ಅಪರಾಧ ವಿಭಾಗಕ್ಕೆ ದೂರು ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ ಹೆಸರು, ಚಿತ್ರ ಮತ್ತು ಧ್ವನಿಯನ್ನ ಬಳಸಿಕೊಂಡು ಜನರನ್ನ ವಂಚಿಸಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮುಂಬೈ ಪೊಲೀಸರ ಸೈಬರ್ ಸೆಲ್ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದೆ ಮತ್ತು ತನಿಖೆಯನ್ನ ಪ್ರಾರಂಭಿಸಿದೆ.

ಭಾರತ ಮತ್ತು ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳು ಇದೇ ರೀತಿಯ ಪ್ರಕರಣಗಳನ್ನ ಎದುರಿ ಸುತ್ತಾರೆ. ಅಂತರ್ಜಾಲದಲ್ಲಿ ಜನರನ್ನ ಮೋಸಗೊಳಿಸಲು ಅವರ ಫೋಟೋಗಳು ಅಥವಾ ಧ್ವನಿಯನ್ನ ಮೋಸದಿಂದ ವ್ಯವಹಾರ ಹೆಚ್ಚಿಸಲು ಬಳಸಲಾಗುತ್ತದೆ.

ಸಚಿನ್ ತೆಂಡೂಲ್ಕರ್ ಅವರ ವೈಯಕ್ತಿಕ ಸಹಾಯಕರು ಫೇಸ್ಬುಕ್’ನಲ್ಲಿ ತೈಲ ಕಂಪನಿಯ ಜಾಹೀರಾತನ್ನ ನೋಡಿದ್ದಾರೆ. ಅವರು ತಮ್ಮ ಪ್ರಚಾರಕ್ಕಾಗಿ ತೆಂಡೂಲ್ಕರ್ ಅವರ ಚಿತ್ರವನ್ನ ಬಳಸಿದ್ದು, ಲೆಜೆಂಡರಿ ಕ್ರಿಕೆಟಿಗ ತಮ್ಮ ಉತ್ಪನ್ನವನ್ನ ಶಿಫಾರಸು ಮಾಡಿದ್ದಾರೆ ಎಂದು ಹೇಳಿಕೊಂಡಿದೆ.