Friday, 22nd November 2024

ಕರೋನಾ ಪ್ರಕರಣದಲ್ಲಿ ಇಳಿಕೆ

ವದೆಹಲಿ: ಭಾರತದಲ್ಲಿ 656 ಹೊಸ ಕರೋನವೈರಸ್ ಪ್ರಕರಣಗಳು ಪತ್ತೆಗಿವೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 14,493 ರಿಂದ 13,037 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಮಂಗಳವಾರ ನವೀಕರಿಸಿವೆ.

ಇಂದು ಒಂದೇ ದಿನ ಕೋವಿಡ್‌ನಿಂದ 12 ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ ಒಟ್ಟು 5,31,790 ಕ್ಕೆ ಏರಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ 4.49 ಕೋಟಿ (4,49,82,131) ದಾಖಲಿಸಲಾಗಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ 0.03 ಪ್ರತಿಶತವನ್ನು ಒಳಗೊಂಡಿವೆ. ರಾಷ್ಟ್ರೀಯ COVID-19 ಚೇತರಿಕೆ ದರವು 98.79 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇಲ್ಲಿಯವರೆಗೂ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,44,37,304 ಕ್ಕೆ ಏರಿದೆ. ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.