ಗುಬ್ಬಿ: 43,000 ಮತಗಳನ್ನು ನೀಡುವ ಮೂಲಕ ಜೆಡಿಎಸ್ ಪಕ್ಷ ಸದೃಢವಾಗಿದೆ ಎಂದು ಸಾಬೀತುಪಡಿಸಿದ ತಾಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜೆಡಿಎಸ್ ಪರಜಿತ ಅಭ್ಯರ್ಥಿ ಬಿಎಸ್ ನಾಗರಾಜ್ ರವರು ತಿಳಿಸಿದರು.
ಪಟ್ಟಣದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದವರು ತಾಲೂಕಿನ ಉದ್ದಗಲಕ್ಕೂ ನನ್ನ ಜೊತೆ ಹೆಜ್ಜೆ ಹಾಕಿ ಹಗಲಿರುಳು ಶ್ರಮಿಸಿದ್ದೀರಿ ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ. ಕಾರ್ಯಕರ್ತರ ಕಷ್ಟಸುಖಕ್ಕೆ ಕ್ಷೇತ್ರದಲ್ಲಿ ಸದಾ ನಿಮ್ಮೊಂದಿಗೆ ಇರುತ್ತೇನೆ. ಗುಬ್ಬಿ ತಾಲೂಕಿನ ಜನರು ಸೌಮ್ಯ ಸ್ವಭಾವದವರು ಪ್ರೀತಿ ವಿಶ್ವಾಸಕ್ಕೆ ಹೆಚ್ಚು ಮನ್ನಣೆ ನೀಡು ವವರು ನನ್ನನ್ನು ಗುರುತಿಸಿ ಕ್ಷೇತ್ರದ ಜನರು ಜೆಡಿಎಸ್ ಪಕ್ಷಕ್ಕೆ 43.000 ಮತಗಳನ್ನು ನೀಡಿ ನನಗೆ ಶಕ್ತಿ ನೀಡಿದ್ದಾರೆ ಅವರಿಗೆ ನಾನು ಸದಾ ಚಿರಋ ಣಿಯಾಗಿರುತ್ತೇನೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಜಿಎನ್ ಬೆಟ್ಟಸ್ವಾಮಿ ಮಾತನಾಡಿ ಕಾರ್ಯಕರ್ತರು ಹತಾಶರಾಗದೆ ಯಾವುದೇ ಸಮಸ್ಯೆ ಬಂದರೂ ಕಾನೂನಿನ ಅಡಿಯಲ್ಲಿ ಜನತೆಗೆ ನ್ಯಾಯ ಒದಗಿಸಿಕೊಡಲು ಮುಂದಾಗಬೇಕು. ಒಗ್ಗಟ್ಟಿನಿಂದ ಮುಂಬರುವ ತಾಲೂಕು ಪಂಚಾ ಯತಿ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಜಯಗೊಳಿಸೋಣ 2028 ರ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕಿರಯ್ಯ, ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಯೋಗಾನಂದ್, ಕಳ್ಳಿಪಾಳ್ಯ ಲೋಕೇಶ್, ಶಿವಲಿಂಗಯ್ಯ, ಆಟೋ ಮಂಜಣ್ಣ, ಮಡೇನಹಳ್ಳಿ ದೊಡ್ಡಯ್ಯ,ಮಂಜುನಾಥ್ ಇತರರು ಇದ್ದರು.