Saturday, 23rd November 2024

ಬೃಹತ್ ಮೊತ್ತ ಪೇರಿಸಿದ ಚೆನ್ನೈ: ಡೆಲ್ಲಿಗೆ ಆಘಾತ

ನವದೆಹಲಿ: ಪ್ಲೇ ಆಫ್​ ಪ್ರವೇಶದ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ನ ಆರಂಭಿಕ ಜೊತೆಗಾರರು ಮತ್ತೊಂದು ಬೃಹತ್​ ರನ್​ನ ಜೊತೆಯಾಟ ನೀಡಿದ್ದಾರೆ.

ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಅವರ ಮೊದಲ ವಿಕೆಟ್​ಗೆ 141 ರನ್​ನ ಕಲೆ ಹಾಕಿದರು. ಇವರ ಬ್ಯಾಟಿಂಗ್​ ನೆರವಿನಿಂದ ಚೆನ್ನೈ ನಿಗದಿತ ಓವರ್ ಅಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ 223 ರನ್​ ಹಾಕಿತು. ಡೆಲ್ಲಿ ಪಂದ್ಯ ಗೆಲ್ಲಲು 224 ರನ್​ ಗಳಿಸಬೇಕಿದೆ.

ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಜೋಡಿಯಿಂದ ಮತ್ತೊಂದು ದೊಡ್ಡ ಆರಂಭಿಕ ಜೊತೆಯಾಟ ಬಂತು. 141 ರನ್​ ಗಳಿಸಿ ಈ ಜೋಡಿ ಸಿಎಸ್​ಕೆಯ 4ನೇ ಬೃಹತ್​ ಜೊತೆಯಾಟ ಆಡಿದರು.

ರುತುರಾಜ್ ಗಾಯಕ್ವಾಡ್ 50 ಬಾಲ್​ ಎದುರಿಸಿ 7 ಸಿಕ್ಸ್​ ಮತ್ತು 3 ಬೌಂಡರಿ ಸಹಿತ 79 ರನ್​ ಕಲೆಹಾಕಿದರು. ನಂತರ ಬಂದ ಶಿವಂ ದುಬೆ ಅಬ್ಬರಿಸಿದರು ಕೇವಲ 9 ಬಾಲ್​ ಎದುರಿಸಿ 3 ಸಿಕ್ಸ್​ನಿಂದ 22 ರನ್​ ಕಲೆಹಾಕಿದರು. ಈ ಇನ್ನಿಂಗ್ಸ್​ನಲ್ಲಿ 52 ಬಾಲ್​ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸ್​ ಗಳಿಸಿದರು.

ನಂತರ ರವೀಂದ್ರ ಜಡೇಜಾ ಮತ್ತು ಧೋನಿ ಕೊನೆಯಲ್ಲಿ ಉತ್ತಮ ಜೊತೆಯಾಟವಾಡಿ ಅಜೇಯರಾಗಿ ಉಳಿದರು. 7 ಬಾಲ್​ ಎದುರಿಸಿದ ಜಡೇಜಾ 1 ಸಿಕ್ಸ್​ ಮತ್ತು 3 ಬೌಂಡರಿ ಇಂದ 20 ರನ್​ ಕಲೆಹಾಕಿದರು. ಕೇವಲ ನಾಲ್ಕು ಬಾಲ್​ ಎದುರಿಸಿದ ಧೋನಿ 5 ರನ್​ಗಳನ್ನು ಮಾತ್ರವೇ ಗಳಿಸಿದರು. ಡೆಲ್ಲಿ ಪರ ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ ಮತ್ತು ಚೇತನ್ ಸಕಾರಿಯಾ ತಲಾ ಒಂದು ವಿಕೆಟ್​ ಪಡೆದರು.

ತಂಡಗಳು : ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್(ವಿಕೆಟ್​ ಕೀಪರ್​), ರಿಲೀ ರೋಸೊವ್, ಯಶ್ ಧುಲ್, ಅಮನ್ ಹಕೀಮ್ ಖಾನ್, ಅಕ್ಸರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ

ಚೆನ್ನೈ ಸೂಪರ್​ ಕಿಂಗ್ಸ್​​: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ / ವಿಕೆಟ್​ ಕೀಪರ್​), ದೀಪಕ್ ಚಹಾರ್, ತುಷಾರ್ ದೇಶ ಪಾಂಡೆ, ಮಹೇಶ್ ತೀಕ್ಷಣಾ.