ಸ್ವಾಸ್ಥ್ಯ ಸಂಪದ
Yoganna55@gmail.com
ವಿಶ್ವಸಂಸ್ಥೆಯು ಪ್ರತಿವರ್ಷದ ಜೂನ್ ೫ರಂದು ‘ವಿಶ್ವ ಪರಿಸರ ದಿನ’ವನ್ನು ೧೯೭೨ರಿಂದ ಆಚರಿಸುತ್ತಾ ಜನಸಾಮಾನ್ಯರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದೆ. ಈ ದಿನಾಚರಣೆಯ ಅಂಗವಾಗಿ ಪ್ರತಿವರ್ಷವೂ ಪರಿಸರ ಸಂರಕ್ಷಣೆ ಸಂಬಂಽತ ಘೋಷವಾಕ್ಯವೊಂದನ್ನು ಹೊರಡಿಸಿ ಆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
‘ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯವನ್ನು ಹೊಡೆದೋಡಿಸಿ’ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದ್ದು, ಇದು ಪ್ಲಾಸ್ಟಿಕ್‌ನಿಂದ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ ಅರಿವುಂಟುಮಾಡುವು ದಾಗಿದೆ. ವಿಶ್ವ ಪರಿಸರ ದಿನವನ್ನು ಆಚರಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆಯು ಪ್ರತಿವರ್ಷವೂ ಒಂದೊಂದು ರಾಷ್ಟ್ರಕ್ಕೆ ವಹಿಸುತ್ತಿದ್ದು, ೨೦೨೩ರಲ್ಲಿ ಇದು ‘ಕೋಟಿ ಡಿ ಐವೊರಿ’ ದೇಶಕ್ಕೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪರಿಸರ ಎಂದರೇನು? ಪರಿಸರ
ಮಾಲಿನ್ಯ ಹೇಗುಂಟಾಗುತ್ತದೆ? ಇದನ್ನು ತಡೆಗಟ್ಟುವುದು ಹೇಗೆ? ಮತ್ತು ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮ ಗಳೇನು? ಎಂಬುದರ ಬಗ್ಗೆ ಅರಿವು ಮೂಡಿಸುವ ಲೇಖನವಿದು.
ಅಮೆರಿಕದ ರಸಾಯನಶಾಸ್ತ್ರಜ್ಞ ಲಿಯೋ ಬೇಕಿ ಲ್ಯಾಂಡ್‌ನಿಂದ ೧೯೦೭ರಲ್ಲಿ ಆವಿಷ್ಕಾರಗೊಂಡ ಉತ್ಪಾದಿತ ಪ್ಲಾಸ್ಟಿಕ್‌ನ ಉಪಯೋಗವು ಮನುಷ್ಯನ ಬದುಕಿನ ಎಲ್ಲ ಪ್ರಕಾರಗಳಲ್ಲೂ ಹಾಸುಹೊಕ್ಕಾಗಿದೆ. ಆಧುನಿಕ ಮನುಷ್ಯನ ಸಾಂಸಾರಿಕ ಬದುಕು, ವ್ಯವಸಾಯ, ಆರೋಗ್ಯ, ಕೈಗಾರಿಕೆ, ಕಂಪ್ಯೂಟರ್ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಪ್ಲಾಸ್ಟಿಕ್ ಉಪಯೋಗ ಅನಿವಾರ್ಯವಾಗಿದೆ. ಪ್ಲಾಸ್ಟಿಕ್‌ನ ಹಗುರ ತೂಕ, ಕಡಿಮೆ ಬೆಲೆ, ಪಾರದರ್ಶಕತೆ ಹಾಗೂ ಸ್ಥಿರತೆ ಯಿಂದಾಗಿ ಇದರ ಉಪಯೋಗ ಪ್ರಪಂಚಾದ್ಯಂತ ಜನ ಪ್ರಿಯವಾಗಿದೆ. ಪ್ಲಾಸ್ಟಿಕ್ ಇಲ್ಲದೆ ಬದುಕಿಲ್ಲ ಎಂಬಂ ತಾಗಿದೆ. ಪ್ಲಾಸ್ಟಿಕ್ ಆಧುನಿಕ ಮಾನವರ ಅತ್ಯದ್ಭುತ ಅನ್ವೇಷಣೆಯಾಗಿದ್ದು, ಇದನ್ನು ಸರಿದಾರಿಯಲ್ಲಿ ಉಪಯೋಗಿಸಿದಲ್ಲಿ ಮಾತ್ರ ಸಾರ್ಥಕವಾಗುತ್ತದೆ.
ಇಲ್ಲದಿದ್ದಲ್ಲಿ ಪರಿಸರದ ಅಳಿವಿಗೆ ಕಾರಣವಾಗುತ್ತದೆ ಎಂಬ ವೈಜ್ಞಾನಿಕ ಅಂಶವನ್ನು ಮನುಷ್ಯ ಮನಗಂಡು ಸರಿದಾರಿಯಲ್ಲಿ ಕಾರ್ಯೋನ್ಮುಖ
ವಾಗುವುದು ಅತ್ಯವಶ್ಯಕ. ಪರಿಸರದ ಎಲ್ಲವುಗಳ ಬಗ್ಗೆ ಪ್ಲಾಸ್ಟಿಕ್ ಮಾರಕ ಪರಿಣಾಮಗಳನ್ನು ಬೀರುವುದರಿಂದ ಪರಿಸರದ ವಿವಿಧ ಘಟಕಗಳನ್ನು ಅರ್ಥ
ಮಾಡಿಕೊಳ್ಳುವುದು ಅತ್ಯವಶ್ಯಕ. ಪ್ಲಾಸ್ಟಿಕ್ ಎಂದರೇನು? ಇದರಿಂದಾಗುವ ದುಷ್ಪರಿಣಾಮಗಳಾ ವುವು? ಅವನ್ನು ತಡೆಗಟ್ಟುವುದು ಹೇಗೆ? ಪ್ಲಾಸ್ಟಿಕ್ ಅನ್ನು ಪರಿಸರ ಮಾಲಿನ್ಯಗೊಳಿಸದೆ ಉಪಯೋಗಿ ಸುವುದು ಹೇಗೆ ಎಂಬುದರ ಅರಿವು ಅತ್ಯಗತ್ಯ.
ಮನುಷ್ಯ ಪರಿಸರದ ಪ್ರತಿಬಿಂಬ: ಮನುಷ್ಯನು ಸೃಷ್ಟಿಯ ವಿಕಾಸ ಕ್ರಿಯೆಯಲ್ಲಿ ಮೂಡಿಬಂದ ಅತ್ಯುನ್ನತ ಜೀವಿ. ಸೃಷ್ಟಿಯಲ್ಲಿರುವ ಎಲ್ಲವೂ ಅಥವಾ ಅವುಗಳ ಪ್ರತಿಬಿಂಬ ಮನುಷ್ಯನಲ್ಲಿವೆ. ಮನುಷ್ಯನಲ್ಲಿರುವ ರಕ್ತನಾಳಗಳೆಲ್ಲವನ್ನೂ ಜೋಡಿಸಿದಲ್ಲಿ ವಿಶ್ವದ ಒಂದು ಸುತ್ತಾಗುತ್ತದೆ. ಮನುಷ್ಯ
ವಿಶ್ವರೂಪಿ! ಈ ಕಾರಣಕ್ಕಾಗಿ ಮನುಷ್ಯನಿಗೂ ಪರಿಸರಕ್ಕೂ ಅವಿನಾಭಾವ ಸಂಬಂಧವಿದೆ. ಭ್ರೂಣದಿಂದ ಹಿಡಿದು ವಯಸ್ಕನಾಗಿ ಬದುಕಿ ಸಾವನ್ನಪ್ಪು
ವವರೆಗೂ ಆಹಾರ, ನೀರು, ಗಾಳಿ, ವಸತಿ ಇತ್ಯಾದಿ ಗಳೆಲ್ಲಕ್ಕೂ ಮನುಷ್ಯ ಪರಿಸರವನ್ನೇ ಅವಲಂಬಿಸುತ್ತಾನೆ. ಮನುಷ್ಯ ಪರಿಸರದಲ್ಲಿರುವ ಎಲ್ಲವುಗಳೊ ಡನೆ ವ್ಯವಸ್ಥಿತವಾಗಿ ಪೂರ್ವನಿಗದಿತ ವಾಗಿ ಜೋಡಿತವಾಗಿದ್ದು, ಪರಿಸರದಲ್ಲುಂಟಾಗುವ ಏರುಪೇರುಗಳು ಮಾನವನ ಮೇಲೆ ಪರಕ ಅಥವಾ ಮಾರಕ ಪರಿಣಾಮಗಳನ್ನುಂಟು ಮಾಡುತ್ತವೆ.
ಸೃಷ್ಟಿಕರ್ತನು ಮಾನವ ಮತ್ತು ಪರಿಸರ ದೊಡನೆ ಉಭಯೇತರರಿಗೂ ಪರಕವಾಗುವ ಸ್ವಯಂಚಾಲಿತ ವ್ಯವಸ್ಥೆಯನ್ನು ಪರ್ವ ನಿಗದಿತವಾಗಿಯೇ ರೂಪಿಸಿದ್ದಾನೆ. ಇದೆಂತಹ ಅದ್ಭುತ! ಈ ಸ್ವಯಂಚಾಲಿತ ಪರ್ವನಿಗದಿತ ವ್ಯವಸ್ಥೆಗಳನ್ನು ಏರುಪೇರುಗೊಳಿಸುವ ಮಾನವನ ಕಾರ್ಯಕ್ರಮಗಳು ಪರಿಸರದ ಮೇಲೆ ಮಾರಕ ಪರಿಣಾಮ ಬೀರುವುದಲ್ಲದೆ ಸ್ವತಃ ಅವನನ್ನೇ ಅನಾರೋಗ್ಯಕ್ಕೀಡು ಮಾಡುತ್ತವೆ. ಸೃಷ್ಟಿಯ ಸ್ವಯಂಚಾಲಿತ, ಪರ್ವನಿಗದಿತ ಕಾರ್ಯಚಕ್ರಗಳ ಅವ್ಯವಸ್ಥೆಯೇ ಪರಿಸರ ಮಾಲಿನ್ಯ. ಮನುಷ್ಯ ಕೈಗೊಳ್ಳುವ ಯಾವುದೇ ಚಟುವಟಿಕೆಯು ಈ ಸ್ವಯಂಚಾಲಿತ ಪರ್ವನಿಗದಿತ ಪರಿಸರದ ಕಾರ್ಯಚಕ್ರಗಳಿಗೆ ಪರಕವಾಗುವಂತಿರಬೇಕೇ ವಿನಾ ಮಾರಕವಾಗುವಂತಿರಬಾರದೆಂಬ ವೈಜ್ಞಾನಿಕ ಅಂಶವನ್ನು ಮನುಷ್ಯ ಮನನಮಾಡಿಕೊಳ್ಳ ಬೇಕಾಗಿದೆ.
ಪರಿಸರ ವಿಶ್ವವ್ಯಾಪಿ: ಪರಿಸರದಲ್ಲಿ ಮನುಷ್ಯನಲ್ಲದೆ ಇನ್ನಾವ ಜೀವಿಯೂ ಸೃಷ್ಟಿಯ ಪೂರ್ವನಿಗದಿತ ಕಾರ್ಯಚಕ್ರಗಳನ್ನು ಮುರಿಯುವುದಿಲ್ಲ. ಅವು
ತಮ್ಮ ತಮ್ಮ ಬದುಕನ್ನು ಸೃಷ್ಟಿಕರ್ತನ ಅಪೇಕ್ಷೆಯಂತೆ ಚಾಚೂತಪ್ಪದೆ ನಿರ್ವಹಿಸಿಕೊಂಡು ಜೀವನ ಸಾಗಿಸುವುದರಿಂದ ಅವುಗಳಿಂದ ಪರಿಸರಕ್ಕೆ ಯಾವ
ಹಾನಿಯೂ ಇಲ್ಲ. ಆದರೆ ಮನುಷ್ಯನಿಗೆ ಸೃಷ್ಟಿಕರ್ತ ನೀಡಿರುವ ಬುದ್ಧಿವಂತಿಕೆಯಿಂದಾಗಿ ತನ್ನ ಬದುಕನ್ನು ಅಭಿವೃದ್ಧಿಯ ಹೆಸರಿನಲ್ಲಿ ಐಷಾರಾಮ
ಮಾಡಿಕೊಳ್ಳುವ ಏಕೈಕ ದೃಷ್ಟಿಯಿಂದ ಹೊಸ ಹೊಸ ಆವಿಷ್ಕಾರಗಳನ್ನು ಅನ್ವೇಷಿಸುವ ಪರಿಣಾಮದಿಂದಾಗಿ ಪರಿಸರದ ಪೂರ್ವನಿಗದಿತ ಕಾರ್ಯಚಕ್ರ
ಗಳು ಅಸ್ತವ್ಯಸ್ತಗೊಳ್ಳುತ್ತಿದ್ದು, ಅನಾವೃಷ್ಟಿ, ಅತಿ ವೃಷ್ಟಿ, ಭೂ ತಾಪಮಾನ ಏರಿಕೆ, ಸುನಾಮಿ, ಋತುಮಾನಗಳಲ್ಲಿನ ಬದಲಾವಣೆಗಳು, ಹೊಸ ಹೊಸ ಕಾಯಿಲೆಗಳು, ಜೀವಿಗಳು ಕಾಣೆಯಾಗುವಿಕೆ ಸಮಸ್ಯೆಗಳುಂಟಾಗುತ್ತಿವೆ. ಸೃಷ್ಟಿಗೆ ಅದಮ್ಯ ಶಕ್ತಿ ಮತ್ತು ತನ್ನದೇ ಆದ ಬುದ್ಧಿವಂತಿಕೆ ಇದ್ದು, ಇವೆಲ್ಲವನ್ನು ಸಹಿಸಿಕೊಂಡು ಮುಂದುವರಿಯುವ ತನ್ನದೇ ಆದ ವೈಜ್ಞಾನಿಕ ತಂತ್ರಗಾರಿಕೆಯನ್ನು ಹುಡುಕಿಕೊಳ್ಳುತ್ತದೆ. ಆಗುತ್ತಿರುವ ಬದಲಾವಣೆಗಳು ಆ ತಂತ್ರಗಾರಿಕೆಯ ಭಾಗವೇ ಆಗಿದೆ. ಮನುಷ್ಯ ಕೈಗೊಳ್ಳುವ ಪ್ರತಿಯೊಂದು ಚಟುವಟಿಕೆಯೂ ವಿಶ್ವ ಪರಿಸರದ ಮೇಲೆ ಪರಿಣಾಮ ಬೀರುತ್ತದೆ.
ಆದುದರಿಂದ ವಿಶ್ವವ್ಯಾಪ್ತಿ ಯೋಚಿಸಿ ಸ್ಥಳೀಯವಾಗಿ ಕಾರ್ಯ ನಿರ್ವಹಿಸುವ ಮನೋ ವೃತ್ತಿಯನ್ನು ಮನುಷ್ಯ ರೂಢಿಸಿಕೊಳ್ಳಬೇಕು. ನನ್ನಿಂದಲೇ ಪರಿಸರ ಎಂಬ ಮನೋವೃತ್ತಿಯನ್ನು ದೂರ ಮಾಡಿ ಪರಿಸರದಿಂದ ತಾನು ಎಂಬ ನೈಜ ಅರಿವನ್ನು ಮನುಷ್ಯ ರೂಢಿಸಿಕೊಳ್ಳಬೇಕು. ಸೃಷ್ಟಿಯ ಉಗಮ, ವಿಕಾಸ ಮತ್ತು ಅದರಲ್ಲಿರುವ ತುಂಬಿಕೆಗಳ ಬಗ್ಗೆ ಮನುಷ್ಯ ಅರ್ಥಮಾಡಿಕೊಂಡಿರುವುದಕ್ಕಿಂತ ಅರ್ಥಮಾಡಿಕೊಳ್ಳದಿರುವ ಸಂಗತಿಗಳೇ ಅಧಿಕ. ಭೇದಿಸಲಾಗದ ಸೃಷ್ಟಿಯ ರಹಸ್ಯಗಳೇ ಹೆಚ್ಚು. ಸುಮಾರು ೧೪ ಮಿಲಿಯನ್ ವರ್ಷಗಳ ಹಿಂದೆ ಸೃಷ್ಟಿ ಉಗಮಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಸುಮಾರು ೨೦ ಕೋಟಿ ವರ್ಷಗಳ ಹಿಂದೆ ಮಾನವ ಸಂತತಿ ಪ್ರಾರಂಭವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಮಾನವ ಸಂತತಿ ಪ್ರಾರಂಭವಾಗುವ ಮುನ್ನ ಅವನ ಬದುಕಿಗೆ ಪರಕವಾದ ಭೂಮಿ, ಗಾಳಿ, ನೀರು, ಸಸ್ಯ, ಪ್ರಾಣಿ ಸಂಪತ್ತು ಇತ್ಯಾದಿಗಳೆಲ್ಲವೂ ಸೃಷ್ಟಿ ಯಾಗಿದ್ದವು ಎಂಬುದು ನಿರ್ವಿವಾದದ ಸಂಗತಿ. ಅಮೀಬಾ ಜೀವಿಯಿಂದ ಹಂತ ಹಂತವಾಗಿ ವಿಕಾಸಗೊಂಡಿರುವ ಆಧುನಿಕ ಮಾನವನ ವಿಕಾಸ ವ್ಯವಸ್ಥಿತವಾಗಿ ಪದೋನ್ನತಿ ಕಡೆಗೇ ಜರುಗಿದೆಯೇ ವಿನಾ ಅಧಃಪತನದ ಕಡೆಗಲ್ಲ. ಸೃಷ್ಟಿಯಲ್ಲಿ ಹಲವಾರು ಅವಘಡಗಳು ಜರುಗಿದ್ದರೂ ಸೃಷ್ಟಿ ಸರ್ವನಾಶವಾಗಿಲ್ಲ.
ಮುಂದೆಯೂ ಆಗುವುದಿಲ್ಲವೆಂಬ ನಂಬಿಕೆ. ಇವೆಲ್ಲವನ್ನೂ ಗಮನಿಸಿದಾಗ ಸೃಷ್ಟಿಯ ಎಲ್ಲ ಕ್ರಿಯೆಗಳಾದ ಉದಾಹರಣೆಗೆ ಸೂರ್ಯೋದಯ, ಬೆಳಕು, ಕತ್ತಲು, ಋತುಮಾನಗಳು, ಮನುಷ್ಯ ಮತ್ತು ಪರಿಸರದ ನಡುವಿನ ಸಂಬಂಧಗಳು ಇತ್ಯಾದಿಗಳೆಲ್ಲಾ ಪರ್ವನಿಗದಿತವೆಂಬುದನ್ನು ಪಷ್ಟೀಕರಿಸುತ್ತವೆ. ಸೃಷ್ಟಿಯಲ್ಲಿರುವ ಯಾವುದೂ ಅನವಶ್ಯಕವಾಗಿ ಸೃಷ್ಟಿಯಾಗಿಲ್ಲ. ಪ್ರತಿಯೊಂದಕ್ಕೂ ಸೃಷ್ಟಿಯನ್ನು ಪೋಷಿಸುವ ಪೂರ್ವನಿಗದಿತ ಜವಾಬ್ದಾರಿಯಿದೆ ಎಂಬುದನ್ನು ಮನುಷ್ಯ ಅರ್ಥಮಾಡಿಕೊಳ್ಳಬೇಕು.
ಸೃಷ್ಟಿಯಲ್ಲಿ ಸಹಜವಾಗಿಲ್ಲದ್ದನ್ನು ಹೊಸದಾಗಿ ಸೃಷ್ಟಿಸುವುದರಿಂದ ಅದರಿಂದಾಗುವ ಅನಾಹುತವನ್ನು ಮೊದಲು ಪರಿಗಣಿಸಬೇಕು. ಸೃಷ್ಟಿಯ ಪರ್ವನಿಗದಿತ ರಚನೆ ಮತ್ತು ಕಾರ್ಯಚಕ್ರಗಳನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರ ಮನುಷ್ಯ ಪರಿಸರವನ್ನು ಸಂರಕ್ಷಿಸಲು ಸಾಧ್ಯ. ಈ ಬಗೆಯ ಶಿಕ್ಷಣವನ್ನು ಸರ್ವರಿಗೂ ನೀಡಬೇಕು.
ಪರಿಸರ ಎಂದರೇನು? ಅದರ ವಿವಿಧ ಘಟಕಗಳಾವುವು?: ಮನುಷ್ಯನನ್ನು ಒಳಗೊಂಡಂತೆ ಅವನ ಸುತ್ತಮುತ್ತ ಇರುವ ಎಲ್ಲವೂ ಪರಿಸರದ ವ್ಯಾಪ್ತಿಗೆ ಬರುತ್ತವೆ. ಪರಿಸರದಲ್ಲಿ ೧) ಭೌತಿಕ ಪರಿಸರ (Peqsoಜ್ಚಿZ ಉqಜ್ಟ್ಞಿಟಞಛ್ಞಿಠಿ), ೨) ರಾಸಾಯನಿಕ ಪರಿಸರ (ಇeಛಿಞಜ್ಚಿZ ಉqಜ್ಟಿ ಟಞಛ್ಞಿಠಿ), ೩) ಜೈವಿಕ ಪರಿಸರ (ಆಜಿಟ್ಝಟಜಜ್ಚಿZ ಉqಜ್ಟ್ಞಿಟಞಛ್ಞಿಠಿ), ೪) ಸಾಮಾಜಿಕ ಪರಿಸರ (ಖಟ್ಚಜಿZ ಉqಜ್ಟ್ಞಿಟಞಛ್ಞಿಠಿ) ಮತ್ತು ೫) ಅತೀತ ಪರಿಸರ (SZಛಿbಛ್ಞಿಠಿZ ಉqಜ್ಟ್ಞಿಟಞಛ್ಞಿಠಿ) ಎಂದು ಪ್ರಧಾನವಾಗಿ ೫ ಘಟಕಗಳನ್ನಾಗಿ ವಿಂಗಡಿಸಲಾಗಿದೆ.
ಭೂಮಿ, ಗಾಳಿ, ಸೂರ್ಯನ ಶಾಖ ಮತ್ತು ಬೆಳಕು, ನೀರು ಇವು ‘ಭೌತಿಕ’ ಪರಿಸರದ ವ್ಯಾಪ್ತಿಗೂ, ಪರಿಸರದಲ್ಲಿ ಸಹಜವಾಗಿರುವ ಆಮ್ಲಜನಕ, ಕಾರ್ಬನ್‌ಡೈಆಕ್ಸೈಡ್, ನೈಟ್ರೋಜನ್, ಓಜೋನ್ ಇತ್ಯಾದಿ ಮತ್ತು ಮಾನವ ನಿರ್ಮಿತ ಚಟುವಟಿಕೆಗಳಿಂದ (ಕೈಗಾರಿಕೆ, ಸಾಮಾಜಿಕ ಚಟುವಟಿಕೆಗಳು, ಕ್ರಿಮಿನಾಶಕಗಳು ಇತ್ಯಾದಿ) ಪರಿಸರಕ್ಕೆ ಹೊರಹಾಕಲಾಗುವ ರಾಸಾಯನಿಕಗಳು ‘ರಾಸಾಯನಿಕ ಪರಿಸರ’ದ ವ್ಯಾಪ್ತಿಗೂ, ಮನುಷ್ಯ ಮತ್ತಿತರ
ಜೀವಿಗಳು ಹಾಗೂ ಸಸ್ಯಗಳು ‘ಜೈವಿಕ ಪರಿಸರ’ದ ವ್ಯಾಪ್ತಿಗೂ ಮತ್ತು ಮಾನವನಿಂದ ನಿರ್ಮಿತವಾಗುವ ಕಟ್ಟಡಗಳು, ಅಣೆಕಟ್ಟುಗಳು, ಅವನ ನಡವಳಿಕೆ
ಗಳು, ಪಾಲಿಸುವ ಸಾಮಾಜಿಕ ಪದ್ಧತಿಗಳು ಇತ್ಯಾದಿಗಳು ‘ಸಾಮಾಜಿಕ ಪರಿಸರ’ದ ವ್ಯಾಪ್ತಿಗೂ ಬರುತ್ತವೆ.
ಇವುಗಳಲ್ಲದೆ ಬಾಹ್ಯಾಕಾಶದಲ್ಲಿರುವ ಇನ್ನಿತರ ಗ್ರಹಗಳು ಮತ್ತು ಕೋಟ್ಯಂತರ ನಕ್ಷತ್ರಗಳು ಪರಿಸರದ ಮೇಲೆ ಉಂಟುಮಾಡುವ ಪ್ರಭಾವವನ್ನು
ಅಲ್ಲಗಳೆಯುವಂತಿಲ್ಲ. ಪರಿಸರದಲ್ಲಿರುವ ಪ್ರತಿಯೊಂದರ ನಡುವೆ ಅವಿನಾಭಾವ ಸಂಬಂಧವಿದ್ದು, ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸು
ತ್ತವೆ. ಉದಾ: ಮನುಷ್ಯ ಮತ್ತಿತರ ಪ್ರಾಣಿಗಳಲ್ಲಿ ಉತ್ಪತ್ತಿಯಾಗುವ ವಿಷಮವಸ್ತು ಕಾರ್ಬನ್‌ಡೈಆಕ್ಸೈಡ್ ಅನ್ನು ಸಸ್ಯಗಳು ಹೀರಿಕೊಂಡು ಮನುಷ್ಯ
ಮತ್ತಿತರ ಪ್ರಾಣಿಗಳಿಗೆ ಆಮ್ಲಜನಕವನ್ನು ನೀಡುತ್ತವೆ.
ಒಂದರ ವಿಷ ಮತ್ತೊಂದಕ್ಕೆ ಅಮೃತ! ಇದೆಂತಹ ವಿಸ್ಮಯ ಸೃಷ್ಟಿ! ಜೀವಿಗಳ ಸಂಖ್ಯೆಗನುಗುಣವಾಗಿ ಸಸ್ಯಸಂಖ್ಯೆ ಇರಬೇಕು. ಹಾಗಾದಲ್ಲಿ ಮಾತ್ರ
ಆಮ್ಲಜನಕ ಮತ್ತು ಕಾರ್ಬನ್‌ಡೈಆಕ್ಸೈಡ್‌ಗಳ ನಡುವಣ ಸಹಜ ಸಮತೋಲನ ಸಾಧ್ಯ. ಜನಸಂಖ್ಯಾ ಸೋಟವೂ ಪರಿಸರ ಮಾಲಿನ್ಯಕ್ಕೆ ಎಡೆಮಾಡಿ ಕೊಡುತ್ತಿದೆ. ಜನಸಂಖ್ಯೆಯ ನಿಯಂತ್ರಣ ಅತ್ಯವಶ್ಯಕ.ಅತೀತ ಪರಿಸರ (SZಛಿbಛ್ಞಿಠಿZ ಉqಜ್ಟ್ಞಿಟಞಛ್ಞಿಠಿ): ವೈಜ್ಞಾನಿಕವಾಗಿ ಸೃಷ್ಟಿಯಲ್ಲಿರುವ ಎಲ್ಲವುಗಳು ವಸ್ತು (IZಠಿಠಿಛ್ಟಿ) ಮತ್ತು ಶಕ್ತಿ (ಉಛ್ಟಿಜqs) ಗಳಾಗಿದೆ. ಇವೆಲ್ಲವುಗಳ ಶಕ್ತಿಯ ಮೊತ್ತ ವಿಶ್ವಶಕ್ತಿಯಾಗಿದ್ದು, ಇದು ಅತೀತ ಶಕ್ತಿಯ ನಿಯಂತ್ರಣ ದಲ್ಲಿದೆ. ಇದರ ಅರಿವೂ ಅತಿಮುಖ್ಯವಾಗಿದ್ದು, ಇದರ ಸಮತೋಲನವೂ ಅತ್ಯವಶ್ಯಕ.
ಸೂಕ್ಷ್ಮಜೀವಿ ಜಗತ್ತು (Iಜ್ಚ್ಟಿಟ ಉqಜ್ಟಿಟ್ಞ ಞಛ್ಞಿಠಿ): ಬರಿಗಣ್ಣಿಗೆ ಕಾಣದ, ಅಸಂಖ್ಯಾತ ಸೂಕ್ಷ್ಮಜೀವಿಗಳು ಪರಿಸರದಲ್ಲಿವೆ. ಇವುಗಳನ್ನು ಬ್ಯಾಕ್ಟೀರಿಯಾ ಗಳು, ವೈರಾಣುಗಳು, -ಂಗಾಣುಗಳು, ರಿಕೆಟೇಶಿಯಾಗಳು, ಕ್ಲೆಮೀಡಿಯಗಳು ಮತ್ತು ಪ್ರೋಟೋಸೋವಾಗಳು ಎಂದು ಅವುಗಳ ರಚನೆ ಮತ್ತು ಕಾರ್ಯಗಳಿಗನುಗುಣವಾಗಿ ಪ್ರಮುಖವಾಗಿ ವರ್ಗೀಕರಿಸಲಾಗಿದೆ. ಇವು ಸೃಷ್ಟಿಯ ಭಾಗವಾಗಿದ್ದು, ಸೃಷ್ಟಿಯ ನಿರಂತರ ಜೈವಿಕ ಕ್ರಿಯೆಯಲ್ಲಿ ತಮ್ಮದೇ ಆದ ಪರಕವಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತವೆ. ಇವುಗಳ ಸಹಜ ಸಮತೋಲನ ಕ್ರಿಯೆಯಲ್ಲಿ ಏರುಪೇರಾದಲ್ಲಿ ಮಾತ್ರ ಇವು ಮಾನವನಿಗೆ ಕಂಟಕವಾಗುತ್ತವೆ ವಿನಾ ಇಲ್ಲದಿದ್ದಲ್ಲಿ ಇವುಗಳಿಂದ ಯಾವ ಅನಾಹತವೂ ಆಗುವುದಿಲ್ಲ.
ಸೂಕ್ಷ್ಮಜೀವಿ ಜಗತ್ತಿನ ಸಹಜ ಕಾರ್ಯಚಕ್ರಗಳನ್ನು ಏರುಪೇರುಗೊಳಿಸುವ ಮಾನವನ ಕಾರ್ಯಕ್ರಮಗಳು (ಪರಿಸರದ ಉಷ್ಣಾಂಶದ ಬದಲಾವಣೆ, ಅಸಹಜ ರಾಸಾಯನಿಕ ವಸ್ತುಗಳ ಬಿಡುಗಡೆ ಇತ್ಯಾದಿ) ಪರಿಸರದ ಅವ್ಯವಸ್ಥೆಗೆ ನಾಂದಿಯಾಗುತ್ತವೆ. ಭೂಮಿ, ಗಾಳಿ, ನೀರಿನಲ್ಲಿ ಅಸಂಖ್ಯಾತ ಸೂಕ್ಷ್ಮಜೀವಿಗಳಿದ್ದು, ಇವೆಲ್ಲವುಗಳ ಉಳಿವು ಮನುಷ್ಯನನ್ನೂ ಒಳಗೊಂಡಂತೆ ಪರಿಸರದ ಉಳಿವಿಗೆ ಅತ್ಯವಶ್ಯಕ. ಪ್ಲಾಸ್ಟಿಕ್‌ನಿಂದ ಇವೆಲ್ಲವುಗಳ
ಉಳಿವಿಗೆ ಹಾನಿಯಾಗಲಿದೆ.
ಜೈವಿಕ ಪರಿಸರ: ಇದರಲ್ಲಿ ಬರಿಗಣ್ಣಿಗೆ ಕಾಣುವ ಜೀವಿಗಳು ಮತ್ತು ಬರಿಗಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಎಂಬ ಎರಡು ಗುಂಪಗಳ ಜೀವಿಗಳಿವೆ.
ಪ್ರತಿಯೊಂದು ಜೀವಿಗೂ ಪರಿಸರವನ್ನು ಸಂರಕ್ಷಿಸಿ ಪೋಷಿಸುವ ತನ್ನದೇ ಆದ ನಿರ್ದಿಷ್ಟ ಜವಾಬ್ದಾರಿ ಇದ್ದು, ಅದು ಮಾನವ ಸಂತತಿಯ ಮುಂದುವರಿ
ಕೆಗೂ ಪರಕವಾಗಿದೆ. ಮನುಷ್ಯನಲ್ಲಿ ಕೋಟ್ಯಂತರ ಸೂಕ್ಷ್ಮಜೀವಿಗಳಿದ್ದು, ಅವು ಅವನ ಆರೋಗ್ಯಕ್ಕೆ ಪೂರಕವಾಗಿವೆ. ಅವುಗಳಿಲ್ಲದಿದ್ದಲ್ಲಿ ಅನಾರೋಗ್ಯಕ್ಕೆ
ನಾಂದಿ. ಮನುಷ್ಯ ಇದನ್ನು ಅರ್ಥಮಾಡಿಕೊಳ್ಳದೆ ಎಲ್ಲ ಇನ್ನಿತರ ಜೀವಿಗಳು ತನ್ನ ಸ್ವಾರ್ಥಕ್ಕಾಗಿಯೇ ಸೃಷ್ಟಿಯಾಗಿವೆ ಎಂದು ಅವುಗಳನ್ನೂ ನಾಶಮಾಡಿ ಅವುಗಳ ಸಹಜ ಸಮತೋಲನವನ್ನು ಹಾಳುಮಾಡುವುದರಲ್ಲಿ ಅವನ ಅಂತ್ಯವೂ ಇದೆ ಎಂಬ ಸೃಷ್ಟಿಯ ಅಂತಿಮ ಸತ್ಯವನ್ನು ಅರಿಯಬೇಕಾಗಿದೆ.
ಪ್ಲಾಸ್ಟಿಕ್ ಸೂಕ್ಷ್ಮಜೀವಿ ಜಗತ್ತನ್ನು ನಾಶ ಮಾಡುತ್ತದೆ. ರಾಸಾಯನಿಕ ಗೊಬ್ಬರಗಳು, ಕ್ರಿಮಿಕೀಟ ನಾಶಕಗಳ ಉಪಯೋಗ ಜೀವಿ ಪರಿಸರದ ನಾಶಕ್ಕೆ
ಕಾರಣವಾಗಿದೆ. ಪರಿಸರ ವಿಶ್ವವ್ಯಾಪಿಯಾಗಿದ್ದು, ಸ್ಥಾನಿಕವಾಗಿ ಮನುಷ್ಯ ಕೈಗೊಳ್ಳುವ ಪ್ರತಿಯೊಂದು ಕ್ರಿಯೆಯೂ ವಿಶ್ವ ಪರಿಸರದ ಮೇಲೆ ಪರಿಣಾಮ ಬೀರುವುದರಿಂದ ವಿಶ್ವವ್ಯಾಪಿ ಯೋಚಿಸಿ ಅನಂತರ ಸ್ಥಾನಿಕವಾಗಿ ಯಾವುದೇ ಕಾರ್ಯಗಳನ್ನು ಕೈಗೊಳ್ಳಬೇಕು.
(ಮುಂದುವರಿಯುವುದು)