Saturday, 23rd November 2024

ಬೈಜುಸ್ ಸಂಸ್ಥೆಯಿಂದ ಉದ್ಯೋಗ ಕಡಿತ…!

ಬೆಂಗಳೂರು: ಬೆಂಗಳೂರು ಮೂಲದ ಬೈಜುಸ್ ಸಂಸ್ಥೆ ಇದೀಗ ಉದ್ಯೋಗ ಕಡಿತಕ್ಕೆ ಆಲೋಚಿಸುತ್ತಿದೆ ಎಂಬಂ ತಹ ಸುದ್ದಿ ಪ್ರಕಟವಾಗಿದೆ.

ಬೈಜುಸ್ ಸಂಸ್ಥೆ 1000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ (Layoff) ಸಾಧ್ಯತೆ ಇದೆ. ಈ ಬಗ್ಗೆ ಬೈಜುಸ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿಂದೆ ಒಂದೆರಡು ಬಾರಿ ಬೈಜುಸ್ ಸಂಸ್ಥೆ ತನ್ನ ಕೆಲ ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಜನವರಿ ತಿಂಗಳಲ್ಲೂ 1,000 ಮಂದಿಯನ್ನು ಬೈಜುಸ್ ಆಡಳಿತ ಮನೆಗೆ ಕಳುಹಿಸಿತ್ತು.

ಲೇ ಆಫ್ ಆಗುತ್ತಿರುವವರಲ್ಲಿ ಬೈಜುಸ್​ನ ಸೇಲ್ಸ್ ವಿಭಾಗದಲ್ಲಿರುವವರು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಇರಲಿದ್ದಾರೆ.  ಈ ಹಿಂದೆ ನಡೆದ ಲೇ ಆಫ್​ನಲ್ಲಿ ಕಂಟೆಂಟ್, ಮೀಡಿಯಾ, ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಟೀಮ್​ಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಬಾಧೆ ಯಾಗಿತ್ತು. ವರ್ಷಕ್ಕೆ ಒಂದು ಕೋಟಿ ರೂಗೂ ಹೆಚ್ಚು ಸಂಬಳ ಪಡೆಯುತ್ತಿದ್ದ ಸೀನಿಯರ್ ವೈಸ್ ಪ್ರೆಸಿಡೆಂಟ್​ಗಳು ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು.

ಭಾರತದ ಮೊದಲ ಹಾಗೂ ಅಗ್ರಗಣ್ಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಎನಿಸಿರುವ ಬೈಜುಸ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಉದ್ಯೋಗಕಡಿತ ಅನಿವಾರ್ಯವೂ ಎನಿಸಿದೆ.