Thursday, 14th November 2024

ಅಷ್ಟಕ್ಕೂ, ಯೇತಿ ಎಂದರೆ ಪ್ರೇತಿ ಅನ್ನುವುದ್ಯಾಕೆ ?

ಸುಪ್ತ ಸಾಗರ

rkbhadti@gmail.com

ಇದು ನಿಗೂಢ ಜೀವಿಯ ರಂಜನೀಯ ಕಥೆ . ಹಿಮ ಮಾನವ ‘ಯೇತಿ’ಯ ಬಗ್ಗೆ ಸುದ್ದಿಗಳು ಆಗಾಗ ಹರಿದಾಡುತ್ತಿವೆ. ಬಹಳಷ್ಟು ವರ್ಷಗಳಿಂದ ಇಂಥ ದೊಂದು ಜೀವಿಯ ಇರುವಿಕೆಯ ಚರ್ಚೆ ನಡೆಯುತ್ತಲೇ ಇದೆ. ಮಂಗನಿಂದ ಮಾನವ ರೂಪಗೊಂಡ ಎಂಬ ಮಾನವೇತಿಹಾಸವನ್ನು ಪ್ರಾಥಮಿಕ ಶಾಲೆಯಿಂದಲೂ ಕಲಿತುಕೊಂಡೇ ಬಂದಿದ್ದೇವೆ. ಅದೇ ರೀತಿ ಹಿಮಾಲಯದಲ್ಲಿ ಮನುಷ್ಯನ ರೀತಿಯ ಇರುವ ಮಂಗಮಾನವ ಅಥವಾ ಹಿಮಮಾನವರು ನೆಲೆಸಿರಬಾರದೇಕೆ ಎಂಬ ಪ್ರಶ್ನೆಯೂ ಇದೆ.

ಹಿಮಾಲಯದಲ್ಲಿ ಯೇತಿ ಓಡಾಡುವುದು ನಿಜವೋ ಅಲ್ಲವೊ. ಆದರೆ ಕ್ರಿ. ಶ.ಪೂರ್ವ ೩ನೇ ಶತಮಾನದಿಂದ ಇಂದಿನವರೆಗೂ ದೈತ್ಯ ಹಿಮ ಮಾನವನ ಕಥೆಗಳು, ಅಂತೆ ಕಂತೆಗಳು ಓಡಾಡುತ್ತಲೇ ಇವೆ. ಯೇತಿ ಅಥವಾ ದಟ್ಟ ರೋಮಭರಿತ ಹಿಮಮಾನವ ಅಥವಾ ಆದಿವಾಸಿ ಈ ಪ್ರಾಣಿ, ನೇಪಾಳ ಮತ್ತು ಟಿಬೆಟ್‌ನ ಗಡಿಯಲ್ಲಿ ನೆಲೆಸಿದೆ ಎಂದು ಹೇಳಿಕೊಂಡೇ ಬರಲಾಗಿದೆ. ಯೇತಿಯ ಹುಡುಕಾಟ ಅಲೆಕ್ಸಾಂಡರ್ ಚಕ್ರವರ್ತಿಯ ಕಾಲದಿಂದಲೇ ಆರಂಭ ವಾಗಿತ್ತಂತೆ. ಸಿಂಧು ಕಣಿವೆಯನ್ನು ಗೆಲ್ಲುವ ಸಲುವಾಗಿ ಕ್ರಿ.ಶ.ಪೂರ್ವ ೩೨೬ರಲ್ಲಿ ಅಲೆಕ್ಸಾಂಡರ್ ಭಾರತದ ಮೇಲೆ ದಂಡಯಾತ್ರೆ ಕೈಗೊಂಡಿದ್ದನಲ್ಲ,

ಆಗಲೇ ಆತ ತನಗೊಂದು ಯೇತಿಯನ್ನು ನೀಡುವಂತೆ ಸ್ಥಳೀಯರನ್ನು ಕೇಳಿದ್ದನಂತೆ. ಆಧುನಿಕ ಯುಗದಲ್ಲೂ ‘ಯೇತಿ’ಯ ಚರ್ಚೆಗೆ ಶತಮಾನಗಳಷ್ಟು ಇತಿಹಾಸವಿದೆ. ೧೯೫೦ರ ದಶಕದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟಿಷ್ ಯಾತ್ರಿಕ ಎರಿಕ್ ಸ್ಟೀಫನ್, ಎವರೆಸ್ಟ್ ಶಿಖರ ಏರಲು ಪರ್ಯಾಯ ದಾರಿ ಹುಡುಕುತ್ತಿದ್ದ ವೇಳೆ ಬೃಹತ್ ಗಾತ್ರದ ಹೆಜ್ಜೆ ಗುರುತುಗಳನ್ನು ಕಂಡಿದ್ದಾಗಿ ಹೇಳಿದ್ದ. ಅದರ ಬೆನ್ನಲ್ಲೇ ನೇಪಾಳ ಸರಕಾರ ೧೯೫೦ರ ಹಿಮ ಮಾನವನ ಬೇಟೆ
ಯಾಡಿ ಸೆರೆ ಹಿಡಿಯಲು ಪರವಾನಗಿ ನೀಡಿತ್ತು. ಇದಕ್ಕೂ ಮುನ್ನ ೧೯೨೧ರಲ್ಲಿ ಲೆಫ್ಟಿನೆಂಟ್ – ಕರ್ನಲ್ ಚಾಲ್ಸ ಹೊವರ್ಡ್ – ಬುರಿ ನೇತೃತ್ವದಲ್ಲಿ ಅಲಿನ್ ಕ್ಲಬ್ ಮತ್ತು ರಾಯಲ್ ಜಿಯಾಗ್ರಾಫಿ ಕಲ್ ಸೊಸೈಟಿ ಜಂಟಿಯಾಗಿ ಕೈಗೊಂಡಿದ್ದ ಎವರೆಸ್ಟ್ ಪರ್ವತಾರೋಹಣ ಯಾತ್ರೆಯಲ್ಲಿ ಈ ದೈತ್ಯ ಜೀವಿಯ ಅಸ್ತಿತ್ವವನ್ನು ಪತ್ತೆ ಮಾಡಲಾಗಿತ್ತು.

ತಮ್ಮ ‘ಮೌಂಟ್ ಎವೆರೆಸ್ಟ್ ದಿ ರಿಕೊನೈಸಾನ್ಸ್’ ಎಂಬ ಕೃತಿಯಲ್ಲಿ ಯೇತಿಯ ಬಗ್ಗೆ ದಾಖಲಿಸಿದ್ದಾರೆ. ಆ ಬಳಿಕ ಇದರ ಸುಳಿವು ಕಂಡ ಬಗ್ಗೆ ಪರ್ವತಾ ರೋಹಿಗಳು ಹೇಳುತ್ತಲೇ ಬಂದಿದ್ದಾರೆ. ೨೦೧೯ರ ಏಪ್ರಿಲ್ ೯ರಂದು ನೇಪಾಳದ ಮಕಾಲು ಬೇಸ್ ಕ್ಯಾಂಪ್ ಬಳಿ ಇಂಥ ನಿಗೂಢ ಹಿಮಮಾನವನ ಹೆಜ್ಜೆ
ಗುರುತುಗಳನ್ನು ಕಂಡಿರುವುದಾಗಿ ಭಾರತೀಯ ಸೇನೆ ಟ್ವೀಟ್ ಮಾಡಿತ್ತು. ಪರ್ವತಾರೋಹಣ ತಂಡದ ಜತೆಗೆ ಯಾತ್ರೆ ವೇಳೆ ೩೨ ಇಂಚು ಉದ್ದದ ೧೫ ಇಂಚು ಅಗಲದ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಇದು ಪ್ರಾಚೀನ ಜೀವಿ ಯೇತಿಯದೇ ಇರಬೇಕು ಎಂದು ಸೇನಾ ಪ್ರಕಟಣೆ ಆಗ ತಿಳಿಸಿತ್ತು. ನೇಪಾಳ ಮತ್ತು ಟಿಬೆಟ್‌ನ ಹಿಮಾಲಯದ ಪ್ರದೇಶದಲ್ಲಿ
ವಾಸಿಸುತ್ತಾನೆನ್ನಲಾದ ಕರಡಿಯಂಥ ಈ ಆದಿವಾಸಿ ಹಿಮಮಾನ ವನ ಅಸ್ತಿತ್ವದ ಬಗ್ಗೆ ವೈeನಿಕವಾಗಿ ಈಗಲೂ ಪ್ರಶ್ನೆಗಳಿವೆ. ಅದೊಂದು ಕಾಲ್ಪನಿಕ ಪಾತ್ರ ಎನ್ನುವವರೂ ಇದ್ದಾರೆ. ಯೇತಿ ಎಂದರೆ ಕಲ್ಲು, ಶಿಲೆ, ಕರಡಿ ಎಂಬಿತ್ಯಾದಿ ಅರ್ಥವಿದೆ. ಮೇಹ್ ತೇಹ್ ಎಂಬ ಹೆಸರಿನಲ್ಲೂ ಇದನ್ನು ಕರೆಯಲಾಗುತ್ತದೆ. ಅಂದರೆ ಕರಡಿ ರೂಪದ ಮನುಷ್ಯ ಎಂದರ್ಥ. ಈ ನಡುವೆ ಯೇತಿಯ ಅಸ್ತಿತ್ವಕ್ಕೆ ಇಂಬು ನೀಡುವಂತೆ, ಹಿಮಾಲಯ ಪ್ರವಾಸಕ್ಕೆ ತೆರಳಿದ್ದ ಹಲವರಿಗೆ ಯೇತಿಯ ಉದ್ದದ ಕೂದಲುಗಳು ಸಿಕ್ಕಿವೆಯಂತೆ.

ಅವುಗಳ ಅಧ್ಯಯನದ ಮೂಲಕವೂ ಯೇತಿ ಇದ್ದಿದ್ದು ಸತ್ಯ ಎಂಬುದಕ್ಕೆ ಪುರಾವೆ ಸಿಕ್ಕಿದೆ ಎನ್ನುತ್ತಾರೆ ಕೆಲ ಸಂಶೋಧಕರು. ಯೇತಿ ಹೆಸರಿನಲ್ಲಿ ಸಿನಿಮಾ ಗಳು, ಸಾಹಿತ್ಯಗಳು, ವಿಡಿಯೋ ಗೇಮ್ ಗಳು ಅವೆಷ್ಟು ಬಂದಿವೆಯೋ ಲೆಕ್ಕಕ್ಕಿಲ್ಲ. ಯೇತಿಯ ಬಗ್ಗೆ ಹಾಲಿವುಡ್ ಚಿತ್ರಗಳಲ್ಲಿಯೂ ಉಲ್ಲೇಖಿಸ ಲಾಗಿದೆ. ದ ಸ್ನೋ ಕ್ರೀಚರ್, ದ ಎಬೊಮಿನೆಬಲ್ ಸ್ನೋಮ್ಯಾನ್, ಮ್ಯಾನ್ಸ್ಟರ್ ಮುಂತಾದ ಚಿತ್ರದಲ್ಲಿ ಯೇತಿ ಬಗ್ಗೆ ತೋರಿಸಲಾಗಿದೆ. ಪಾಶ್ಚಿಮಾತ್ಯರಲ್ಲಿ ಹತ್ತೊಂಬ ತ್ತನೆ ಶತಮಾನದಲ್ಲಿ ಯೇತಿಯ ಬಗೆಗಿನ ಹಲವು ಕಾಲ್ಪನಿಕ ಕತೆಗಳು ಚಾಲ್ತಿಯಲ್ಲಿದ್ದವು. ಆದರೆ ವೈಜ್ಞಾನಿಕ ಸಮುದಾಯದ ಪ್ರಕಾರ ಈಗಲೂ ಇದೊಂದು ಕ್ರೈಪ್ಟೊಜೂಲಜಿಯಲ್ಲಿ ಪ್ರಸಿದ್ಧ ಪ್ರಾಣಿ. ಯೇತಿ ಇಂದಿಗೂ ಉತ್ತರ ಅಮೆರಿಕದ ಭಾಗದಲ್ಲಿ ದಂತಕಥೆಯಾಗಿಯೇ ಇದೆ.

‘ಯೇತಿ’  ಎಂಬುದಕ್ಕೆ ಪರ್ಯಾಯವಾಗಿ ಮೆಹ್-ತೆಕ್ ಪದವನ್ನು ಞZ – ಚಿಛಿZ ಅಥವಾ ಕರಡಿ ರೂಪದ ಮನುಷ್ಯ ಎಂದು ಅನುವಾದಿಸಲಾಗಿದೆ. -ಂಕ್ ಸ್ಮಿತ್ ೧೯೩೭ರಲ್ಲಿ ರಚಿಸಿದ ಶೆರ್ಪಾ ಸಂಸ್ಕೃತಿಯ ಲಿಖಿತ ಹೇಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಗಳಿವೆ. ನೇಪಾಳಿಗಳು ಹಲವಾರು ಹೆಸರುಗಳಿಂದ ಯೇತಿಯನ್ನು
ಕರೆಯುತ್ತಾರೆ, ಬಾನ್-ಮಾಚೆ, ಅಂದರೆ ಅರಣ್ಯ(ವನ್ಯ) ಮಾನವ ಎಂದರ್ಥ. ಕಂಜನಜುಂಗಾ ರಚ್ಯಾಸ್ ಎಂಬ ವ್ಯಾಖ್ಯಾನವೂ ಇದೆ. ಇದರರ್ಥ ಕಾಂಚನ ಜುಂಗಾದ ಸೈತಾನ ಎಂಬು ಅರ್ಥೈಸಬಹುದು. ಪರ್ವತಾರೋಹಿಗಳಿಗೆ ಮಾರ್ಗದರ್ಶಕರಾಗಿರುವ ಶೆರ್ಪಾಗಳು ಈ ಹಿಮಮಾನವನಿಗೆ ಮೆತೊ-ಕಾಂಗ್ಮಿ ಎನ್ನುತ್ತಾರೆ ಎಂದು ಹೊವಾರ್ಡ್ – ಬುರಿ, ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ದೈತ್ಯಾಕಾರದ ಹಿಮಮಾನವ ಶಬ್ದದ ಉಗಮವು ಇದಕ್ಕಿಂದ ಹೆಚ್ಚಿಗೆ ವರ್ಣರಂಜಿತವಾಗಿದೆ. ಇದು ಶುರುವಾಗುವುದು ಹೆನ್ರಿ ನ್ಯೂಮನ್ ಕೊಲ್ಕತಾದಲ್ಲಿ ‘ದ ಸ್ಟೇಟ್ಸ್‌ಮನ್’ ಪತ್ರಿಕೆಗೆ ಬರೆದ ಬರಹದಿಂದ. ಹೆನ್ರಿ ನ್ಯೂಮ್ಯಾನ್, ‘ಮೆಹೋಹ್’ ಎಂಬ ಶಬ್ದವನ್ನು ಡರ್ಟಿ ಎಂದು ತಪ್ಪಾಗಿ ಅರ್ಥಮಾಡಿಕೊಂಡ. ಕೊನೆಗೆ ಅವುಗಳನ್ನು ಎಬೊಮಿನೆಬಲ್ ಸ್ನೋಮೆನ್ (ಹಿಮದಲ್ಲಿನ ಕೊಳಕು ಪುರುಷರು) ಎಂದು ಕರೆದ. ಆದರೆ ಲೇಖಕ ಟಿಲ್ಮನ್ ಪುನಃ ನ್ಯೂಮನ್ ಬಹಳ ಕಾಲದ ನಂತರ ‘ದ ಟೈಮ್ಸ’ ಪತ್ರಿಕೆಗೆ ಪತ್ರ ಬರೆದು ಹೆನ್ರಿಯವರ ಬರಹವನ್ನು ಸಂಪೂರ್ಣ ನಿರಾಕರಿಸಿ ‘ಈ ಕಥೆಯು ಸಂತೋಷಕ್ಕಾಗಿ ಬರೆದ ಸೃಷ್ಟಿಯಂತೆ ಕಾಣುತ್ತದೆ’ ಎಂದುಬಿಟ್ಟರು.

ಚಾರಣಿಗ ಬಿ.ಎಚ್.ಹೊಡ್‌ಗಸನ್‌ರ ಉತ್ತರ ನೇಪಾಳದಲ್ಲಿನ ಅನುಭವವನ್ನು ಜೇಮ್ಸ್ ಪ್ರಿನ್ಸೆಪ್ ಅವರ ‘ಜರ್ನಲ್ ಆಫ್ ದ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ೧೮೩೨ರಲ್ಲಿ ಪ್ರಕಟಿಸಿತು. ಅವರ ಸ್ಥಳಿಯ ಮಾರ್ಗದರ್ಶಕ ‘ಎತ್ತರದ ಸ್ಥಳದಲ್ಲಿ, ಉದ್ದವಾದ ಕಪ್ಪು ಕೂದಲಿನಿಂದ ಮುಚ್ಚಿದ ದ್ವಿಪಾದಿ
ಜೀವಿ ಹೆದರಿಕೆಯಿಂದ ಪಲಾಯನ ಮಾಡುವಂತೆ ಕಾಣುತ್ತಿತ್ತು’ ಎಂದು ತಿಳಿಸಿದ್ದ. ೧೮೮೯ರಲ್ಲಿ ಲಾರೆನ್ಸ್ ವಾಡೆಲ್‌ರ ‘ಅಮಂಗ್ ದ ಹಿಮಾಲಯಾಸ್’ ದಲ್ಲಿ ಹೆಜ್ಜೆ ಗುರುತು ಮೊದಲು ದಾಖಲೆಯಾದ ವರದಿ ಇದೆ.

ಇಪ್ಪತ್ತನೆ ಶತಮಾನದ ಆರಂಭದಲ್ಲಿ ಪಾಶ್ಚಿಮಾತ್ಯರು ಆ ಪ್ರದೇಶಗಳಲ್ಲಿ ಹಲವಾರು ಪರ್ವತಗಳನ್ನು ಅಳೆಯಲು ಆರಂಭಿಸಿದಾಗ ಅಪರಿಚಿತ ಮಾರ್ಗಗಳಲ್ಲಿ ಒಮ್ಮೊಮ್ಮೆ ವಿಚಿತ್ರ ಪ್ರಾಣಿಗಳನ್ನು ನೋಡಿದ್ದಾಗಿ ವರದಿಗಳು ಬರುತ್ತಲೇ ಇದ್ದವು. ೧೯೨೫ರಲ್ಲಿ ಛಾಯಾ ಚಿತ್ರಗ್ರಾಹಕ ಮತ್ತು ರಾಯಲ್
ಜಿಯಾಗ್ರಫಿಕಲ್ ಸೊಸೈಟಿಯ ಸದಸ್ಯ ಎನ್.ಎ ಟಾಮ್‌ಬಾಜಿ, ತಾನು ಜೆಮು ಗ್ಲೇಸಿಯರ್‌ನ ಸಮೀಪ ವಿಚಿತ್ರ ಪ್ರಾಣಿ ನೋಡಿದ್ದಾಗಿ ಬರೆದ.

‘ಬಾಹ್ಯ ಆಕೃತಿಯು ಮಾನವನಂತೆಯೆ, ನೇರ ನಡಿಗೆಯೊಂದಿಗೆ ದೊಡ್ಡ ಹೂವು ಬಿಡುವ ನಿತ್ಯಹಸುರಿನ ಗುಲ್ಮದ ಪೊದೆUಗಳಲ್ಲಿ ಆಗಾಗ ನಿಂತುಕೊಂಡು ಮರೆಯಾಗುತ್ತಿತ್ತು. ಹಿಮದ ನಡುವೆ ಕಪ್ಪಾಗಿ ತೋರುತ್ತಿತ್ತು. ನನಗನಿಸಿದಂತೆ ಅದು ಬಟ್ಟೆ ಧರಿಸಿರಲಿಲ್ಲ. ಸುಮಾರು ಎರಡು ಗಂಟೆಗಳ ನಂತರ ನಾನು
ಮತ್ತು ಸಹಚರರು ಪರ್ವತವನ್ನು ಇಳಿದೆವು. ಆಗ ಆ ಪ್ರಾಣಿಯ ಗುರುತು ನೋಡಿದೆವು. ಕೇವಲ ಆರರಿಂದ ಏಳು ಅಂಗುಲ ಉದ್ದ, ನಾಲ್ಕು ಅಂಗುಲ ಅಗಲವಿತ್ತು’ ಎಂದು ವಿವರಿಸಿದ್ದಾನೆ.

೧೯೫೦ರಲ್ಲಿ ಯೇತಿಯ ಬಗ್ಗೆ ಪಾಶ್ಚಾತ್ಯರ ಆಸಕ್ತಿ ಉತ್ತುಂಗಕ್ಕೇರಿತ್ತು. ೧೯೫೧ರಲ್ಲಿ ಸಮುದ್ರ ಮಟ್ಟಕ್ಕಿಂತ ಮೇಲ್ಮಟ್ಟದಲ್ಲಿಯ ಅಳತೆಯಿಂದ ಮೌಂಟ್ ಎವರೆಸ್ಟ್ ಅಳೆಯುವ ಪ್ರಯತ್ನ ನಡೆಯಿತು. ಈ ಸಂದರ್ಭದಲ್ಲಿ ಎರಿಕ್ ಶಿಪ್ಟನ್‌ಹಿಮದಲ್ಲಿ ಹಲವಾರು ದೊಡ್ಡ ಅಚ್ಚುಗಳ ಛಾಯಾಚಿತ್ರ ತೆಗೆದಿದ್ದ. ಈ ಛಾಯಾಚಿತ್ರಗಳನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಲಾಯಿತು. ಕೆಲವು ವಾದಗಳ ಪ್ರಕಾರ ಇವು ಯೇತಿ ಇರುವ ಬಗೆಗಿನ ಉತ್ತಮ ಸಾಕ್ಷಿ. ಆದರೆ ಇತರರು ಕರಗಿದ ಹಿಮದಲ್ಲಿ ಸಾಮಾನ್ಯ ಪ್ರಾಣಿಯ ಹೆಜ್ಜೆ ಗುರುತೇ ಹೀಗೆ ಹಿಗ್ಗಿದೆ ಎಂದರು. ಇದರಿಂದ ಎರಿಕ್ ಹಾಸ್ಯಕ್ಕೆ ಒಳಗಾದ. ೧೯೫೩ರಲ್ಲಿ ಸರ್ ಎಡ್ಮಂಡ್ ಹಿಲರಿ ಮತ್ತು ತೆನ್ಸಿಂಗ್ ನೊರ್ಗೆ ಮೌಂಟ್ ಎವರೆಸ್ಟ್ ಅಳೆಯುವಾಗ ಉದ್ದವಾದ ಹೆಜ್ಜೆ ಗುರುತು ಕಂಡಿದ್ದಾಗಿ ವರದಿಯಾಗಿತ್ತು. ನಂತರ ಈ ವರದಿಗಳೂ ವಿಶ್ವಾಸಾರ್ಹವಲ್ಲ ಎಂದು ಕಡೆಗಣಿಸಲಾಯಿತು.

ತೇನ್ಸಿಂಗ್‌ರ್ ಮೊದಲ ಆತ್ಮಚರಿತ್ರೆಯಲ್ಲಿ ಯೇತಿ ಇರುವಿಕೆಯ ಬಗ್ಗೆ ತನಗೆ ಬಲವಾದ ಸಂಶಯವಿದೆ ಎಂದು ಹೇಳಿದ್ದಾರೆ. ೧೯೫೪ರ ಡೆಲಿ ಮೇಲ್ ಸ್ನೊಮ್ಯಾನ್ ಎಕ್ಸ್‌ಪೆಡಿಶನ್‌ನ ವರದಿ ಮಾಡಿತು. ಪರ್ವತಾರೋಹಿಗಳ ಮುಖಂಡ ಜನ್ ಏಜೆಂಲೊ ಜಕ್ಸನ್ ಎವರೆಸ್ಟ್ ನಿಂದ ಕಾಂಚನ್ಜುಂಗಾವರೆಗೆ ಮೊದಲ ಚಾರಣ ಕೈಗೊಂಡ. ಅವನು ಸಾಂಕೇತಿಕವಾದ ಯೇತಿಯ ಚಿತ್ರವನ್ನು ತೆಂಗ್ಬೊಚೆ ಗೊಂಪಾದಲ್ಲಿ ಛಾಯಾಚಿತ್ರಿಸಿದ. ಇಂಥ ಹಲವಾರು ಹೆಜ್ಜೆ ಗುರುತುಗಳನ್ನು ಹಿಮದಲ್ಲಿ ಆತ ಕ್ಲಿಕ್ಕಿಸಿದ್ದ. ಆದರೆ, ಈ ಹೆಜ್ಜೆಗುರುತಿನ ಅಳತೆಯು ಭೂ ಸವೆತ ಮತ್ತು ಗಾಳಿಯಿಂದಾಗಿ ಮೂಲ ಅಳತೆಯ ವ್ಯತ್ಯಾಸವಾಗಿರಬಹುದು ಎಂಬ ಅನುಮಾನವನ್ನು ಡೇಲಿ ಮೇಲ್ ವರದಿಯಲ್ಲಿ ನಮೂದಿಸಲಾಯಿತು.

ಮಾರ್ಚ್ ೧೯,೧೯೫೪ರಂದು ಡೈಲಿ ಮೇಲ್, ಪಾಂಗ್ಬೊಚೆ ಮಠದಲ್ಲಿ ಯೇತಿಯ ನೆತ್ತಿಯ ಕೂದಲಿನ ಮಾದರಿ ಪಡೆಯಲಾಗಿದೆ ಎಂದು ಒಂದು ಲೇಖನ ಪ್ರಕಟಿಸಿತು. ಮಂದ ಬೆಳಕಿನಲ್ಲಿ ಕೂದಲಿನ ಬಣ್ಣವು ಕಪ್ಪನಿಂದ ಗಾಢ ಕಂದು ಮತ್ತು ಸೂರ್ಯನ ಬೆಳಕಿನಲ್ಲಿ ಕೆಂಪು ನರಿ ಬಣ್ಣದ್ದಾಗಿತ್ತೆಂದು ವರದಿ ಹೇಳಿತ್ತು. ಮಾನವ ಅಂಗರಚನಾಶಾಸ್ತ್ರ ನಿಪುಣರಾದ ಫ್ರೆಡರಿಕ್ ವುಡ್ ಜನ್ಸ್ ಅವರು ಈ ಕೂದಲನ್ನು ವಿಶ್ಲೇಷಿಸಿದ್ದಾರೆ.

ಕೂದಲಿನ ಸೂಕ್ಷ್ಮ ಛಾಯಾಚಿತ್ರಗಳು ಮತ್ತು ಕರಡಿ, ಒರಾಂ ಗುಟಾನಂತಹ ಆಗ ಸ್ಥಳೀಯವಾಗಿದ್ದ ಪ್ರಾಣಿಗಳ ಕೂದಲಿನ ಜತೆ ಹೋಲಿಸಲಾಯಿತು. ಇದರೊಂದಿಗೆ ಜನ್ ಅವರು ಇದು ನಿಜವಾಗಿ ನೆತ್ತಿಯ ಕೂದಲಲ್ಲ ಎಂದು ತೀರ್ಮಾನಕ್ಕೆ ಬಂದರು. ಲಭ್ಯ ಕೂದಲು ಗೊರಸುಳ್ಳ ಪ್ರಾಣಿಯ ಭುಜದ
ಒರಟಾದ-ಕೂದಲು ಎಂದು ಅಭಿಪ್ರಾಯಪಟ್ಟರು. ಸ್ಲೊವೊಮಿರ್ ರವಿಚ್ ೧೯೫೬ರಲ್ಲಿ ತಮ್ಮ ‘ದ ಲಾಂಗ್ ವಾಕ್’ ಪುಸ್ತಕದಲ್ಲಿ ಮತ್ತೆ ಈ ಬಗ್ಗೆ  ಪ್ರಸ್ತಾಪಿಸಿದರು. ೧೯೪೦ರ ಚಳಿಗಾಲದಲ್ಲಿ ಅವರು ಮತ್ತು ಇತರ ಕೆಲವರು ಹಿಮಾಲಯ ದಾಟುತ್ತಿದ್ದಾಗ, ಎರಡು ದ್ವಿಪಾದಿ ಪ್ರಾಣಿಗಳು ಹಿಮದಲ್ಲಿ
ಸುಮ್ಮನೆ ಹೆಜ್ಜೆ ಹಾಕುತ್ತಿದ್ದಂತೆ ಕಾಣಿಸುತ್ತಿತ್ತು ಎಂದು ಪುಸ್ತಕದಲ್ಲಿ ಕೇಳಿದ್ದಾರೆ.

೧೯೫೯ರಲ್ಲಿ ಸ್ಲೀಕ್‌ನ ಒಬ್ಬ ಪ್ರಯಾಣಿಕ ಯೇತಿಯ ಸಗಣಿ ಸಂಗ್ರಹಿಸಿದ್ದಾಗಿ ಹೇಳಿದ. ೧೯೫೯ರಲ್ಲಿ ನಟ ಜೇಮ್ಸ್ ಸ್ಟುವರ್ಟ್ ಭಾರತಕ್ಕೆ ಭೇಟಿ ನೀಡಿzಗ ಯೇತಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಕದ್ದೊಯ್ದ ಎಂಬ ಗುಮಾನಿಯಿದೆ. ೧೯೭೦ರಲ್ಲಿ ಬ್ರಿಟೀಷ್ ಪರ್ವತಾರೋಹಿ ಡಾನ್ ವಿಲ್ಲನ್ಸ್ ಅನ್ನಪೂರ್ಣ ಶಿಖರ ಅಳೆಯುವಾಗ ಪ್ರಾಣಿ ಕಂಡ ಸಂಗತಿ ತಿಳಿಸಿದ. ಆತನ ಪ್ರಕಾರ, ಶಿಬಿರದಲ್ಲಿದ್ದಾಗ ತಾನು ವಿಚಿತ್ರವಾದ ಕೂಗು ಕೇಳಿದೆ. ಆಗ ಶೆರ್ಪಾ ಇದು ಯೇತಿ ಕರೆಯುವ ಲಕ್ಷಣ ಎಂದು ತಿಳಿದ. ಆ ರಾತ್ರಿ, ಅವನ ಶಿಬಿರದ ಸಮೀಪ ಕಪ್ಪು ಆಕಾರ ನಡೆದಾಡಿದ್ದನ್ನು ನೋಡಿದ. ಮರುದಿನ, ಹಿಮದಲ್ಲಿ ಮಾನವ ನನ್ನು ಹೋಲುವ ಕೆಲವು ಹೆಜ್ಜೆಗುರುತು ಗಮನಿಸಿದೆ. ಆ ದಿನ ಸಂಜೆ ವಾನರನಂತಹ ದ್ವಿಪಾದಿ ಪ್ರಾಣಿ ಶಿಬಿರದ ಸಮೀಪ ಅದು ಆಹಾರಕ್ಕಾಗಿ ಹುಡುಕಾಡುತ್ತಿದ್ದುದನ್ನು ಬೈನಾಕ್ಯುಲರ್ನಿಂದ ಸುಮಾರು ಇಪ್ಪತ್ತು ನಿಮಿಷ ಸ್ಪಷ್ಟವಾಗಿ ವೀಕ್ಷಿಸಿದೆ ಎನ್ನುತ್ತಾನೆ.

ತೀರಾ ಇತ್ತೀಚೆಗೆ ೨೦೦೪ರಲ್ಲಿ , ‘ದಿ ನೇಚರ್’ನ ಸಂಪಾದಕ ಹೆನ್ರಿ ಗೀ, ಯೇತಿ ‘ಹೆಚ್ಚಿನ ಅಧ್ಯಯನಕ್ಕೆ ಯೋಗ್ಯ ಪ್ರಸಿದ್ಧ ಪ್ರಾಣಿ’ಗೆ ಎಂದು ಹೇಳುತ್ತಾರೆ. ಅಲ್ಲದೆ ಹೊಮೊ -ರೆಸಿ ಯೆನ್ಸಿಸ್ ಇತ್ತೀಚೀನವರೆಗೂ ಉಳಿದಿದ್ದವು ಎಂದು ಸಂಶೋಧನೆಯಿಂದ ತಿಳಿದು ಬರುತ್ತದೆ. ೨೦೦೭ ಡಿಸೆಂಬರ್‌ನಲ್ಲಿ ಅಮೆರಿಕ
ದೂರದರ್ಶನ ಪ್ರೆಸೆಂಟರ್ ಜೋಶುವಾ ಗೇಟ್ಸ್ ಮತ್ತು ಅವನ ತಂಡದ ಸದಸ್ಯರು (ಡೆಸ್ಟಿನೇಷನ್ ಟ್ರುತ್) ಸಹ ನೇಪಾಳದ ಎವರೆಸ್ಟ್ ಪ್ರದೇಶದಲ್ಲಿ ಯೇತಿಯ ಹೆಜ್ಜೆಗುರುತು ಹೋಲುವ ಸಾಲುಗಳು ಕಂಡುಬಂದಿವೆ ಎಂದು ವರದಿ ಮಾಡಿದರು.

ನಂತರ, ಗೇಟ್ಸ್ ತಂಡ ಮತ್ತೆ ಭೂತಾನ್‌ಗೆ ಭೇಟಿ ನೀಡಿದ್ದಾಗ, ಗಿಡದ ಮೇಲಿನ ಕೂದಲಿನ ಮಾದರಿಯನ್ನು ವಿಶ್ಲೇಷಣೆಗೆ ತೆಗೆದುಕೊಂಡು ಪರೀಕ್ಷಿಸಿ ‘ಕೂದಲು ಅನಾಮಿಕ ಸ್ತನಿಗೆ ಸೇರಿದ್ದು’ ಎಂದು ಹೇಳಿದ್ದರು. ಈಶಾನ್ಯ ಭಾರತದ ಗಾರೊ ಬೆಟ್ಟ ಪ್ರದೇಶಗಳ ಸಮೀಪ ಕೂದಲನ್ನು ಸಂಗ್ರಹಿಸಲಾಗಿತ್ತು.
ಮರುವರ್ಷ (ಅಕ್ಟೋಬರ್ ೨೦, ೨೦೦೮) ಜಪಾನಿನ ಏಳು ಜನ ಸಾಹಸಿಗರು ಯೇತಿಯದು ಇರಬಹುದು ಎನ್ನಲಾದ ಹೆಜ್ಜೆ ಗುರುತುಗಳನ್ನು ಛಾಯಾಚಿತ್ರಿಸಿzರೆ. ತಂಡದ ಮುಖಂಡ, ಯೊಶಿತೆರು ತಕಹಾಶಿ ೨೦೦೩ರ ಎಕ್ಸ್ಪೆಡಿಶನ್ ನಲ್ಲಿ ಯೇತಿಯನ್ನು ನೋಡಿದ್ದೆ ಮತ್ತು ಪ್ರಾಣಿಯನ್ನು ಚಿತ್ರದಲ್ಲಿ ಹಿಡಿಯಲು ನಿರ್ಧರಿಸಿದ್ದೆ ಎಂದು ಹೇಳಿದ.

ಮೌಂಟ್ ಎವರೆಸ್ಟ್ ಶಿಖರಾ ರೋಹಿಗಳು ೨೦೦೦೦ ಅಡಿ ಎತ್ತದಲ್ಲಿ ಯೇತಿಗಳು ಓಡಾಡಿದ್ದು ಎನ್ನಲಾದ ಹೆಜ್ಜೆಗುರುತನ್ನು ಪತ್ತೆಹಚ್ಚಿದ್ದರು. ಹಿಮಾಲಯ
ಪರ್ವತಗಳ ೩೦೦೦-೬೦೦೦ ಮೀ. ಎತ್ತರದ ಅಂದರೆ ಹಿಮ ರೇಖೆಯ ಪ್ರದೇಶದಲ್ಲಿ ವಾಸಮಾಡುತ್ತದೆ ಎನ್ನಲಾದ ಯೇತಿಯ ಇರುವಿಕೆಯ ಬಗ್ಗೆ ಹೀಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಕೆಲವರು ಹೇಳುವಂತೆ ಯೇತಿ ಒಂದು ಮಾನವ ಲಕ್ಷಣದ ಒಬ್ಬೊಂಟಿಗ. ೧೯೮೬ರಲ್ಲಿ ದಕ್ಷಿಣ ಟೈರೋಲಿಯನ್ ಪರ್ವತಾರೋಹಿ ರೈನ್ಹೋಲ್ಡ ಮೆಸ್ನರ್ ಎಂಬಾತ ತಾನು ಯೇತಿಯನ್ನು ಕಣ್ಣಾರೆ ಕಂಡಿzಗಿ ಹೇಳಿಕೊಂಡಿದ್ದಾನೆ.

ಮೈ ಕ್ವೆಸ್ಟ್ ಫಾದರ್ ಯೇತಿ ಎಂಬ ಪುಸ್ತಕದಲ್ಲಿ ಯೇತಿಯ ಬಗ್ಗೆ ವಿವರಣೆ ನೀಡಿದ್ದಾನೆ. ೨೦೦೩ರಲ್ಲಿ, ಜಪಾನಿನ ಪರ್ವತಾರೋಹಿ ಮೊಕೊಟೊ ನೆಬುಲ ಅವನ ಹನ್ನೆರಡು ವರ್ಷದ ಭಾಷಾವ್ಯಾಸಂಗವನ್ನು ಆಧಾರವಾಗಿ ಇಟ್ಟುಕೊಂಡು ಪ್ರಾದೇಶಿಕ ಆಡುಭಾಷೆಯ ಕರಡಿ ಎಂಬ ಶಬ್ದದ ಮೇತಿ ಎಂಬ ಶಬ್ದ ಸವೆದು ಹೋಗಿ ಯೇತಿ ಎಂಬ ಶಬ್ದ ವಾಗಿದೆ ಎಂದು ಪ್ರಕಟಿಸಿದನು. ಟೀಬೇಟಿನ ಜನಾಂಗವು ಕರಡಿಯನ್ನ ದೈವಿಕ ಎಂದು ಹೆದರಿ ಪೂಜಿಸುತ್ತಾರೆ ಎಂದು ನೆಬುಲಾ ಹೇಳಿದನು.

ಈ ನಡುವೆ ಡಾ. ರಾಜ್ ಕುಮಾರ್ ಪಾಂಡೆ ಯೇತಿ ಮತ್ತು ಪರ್ವತ ಪ್ರದೇಶಗಳ ಭಾಷೆಯನ್ನು ಸಂಶೋಧಿಸಿದ್ದಾರೆ, ಇವರು ಬೇರೆ ಬೇರೆ ಅರ್ಥದ ಪ್ರಾಸಬದ್ಧ ಶಬ್ದಗಳನ್ನು ಆಧರಿಸಿ ಹಿಮಾಲಯದ ಗುಪ್ತ ಪ್ರಾಣಿಯ ಕಥೆಗಳನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸುಮಾರು ೧,೨೦,೦೦೦ ಲಕ್ಷ
ವರ್ಷಗಳ ಹಿಂದೆ ಹಿಮಾಲಯ ಪರ್ವತಗಳಲ್ಲಿ ‘ಯೇತಿ’ ಎಂಬ ಬೃಹದಾಕಾರದ ಪ್ರಾಣಿ ಇತ್ತು ಎನ್ನುವುದಕ್ಕೆ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಸಂಶೋಧನೆ ಇಂಬು ನೀಡುತ್ತದೆ. ವಿವಿಯ ಮಾನವ ತಳಿ ವಿಜ್ಞಾನ ವಿಭಾಗದ ಡಾ.ಬ್ರ್ಯಾನ್ ಸೈಕ್ ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿದ್ದಾರೆ. ಅವರು ಈ ಬಗ್ಗೆ ಡಿಎನ್‌ಎ ಸಂಶೋಧನೆ ನಡೆಸಿದ್ದಾರೆ.

ಪಶ್ಚಿಮ ಹಿಮಾಲಯ ಪ್ರದೇಶದಲ್ಲಿರುವ ಲಡಾಕ್ ಮತ್ತು ಪೂರ್ವದಲ್ಲಿರುವ ಭೂತಾನ್ ಪ್ರದೇಶಗಳಲ್ಲಿರುವ ಎರಡು ಗೊತ್ತಿಲ್ಲದ ಪ್ರಾಣಿಗಳ ಕೂದಲುಗಳನ್ನು ಸೈಕ್ ಸಂಗ್ರಹಿಸಿ ತಂದಿದ್ದರು. ಪರೀಕ್ಷೆಯಿಂದ ಕಂಡುಬಂದ ಮಾಹಿತಿಯೇನೆಂದರೆ ನಾರ್ವೆಯ ಸಾವಲ್ ಬಾರ್ಡರ್‌ನಲ್ಲಿ ೪೦ ಸಾವಿರ ವರ್ಷಗಳ ಇತ್ತು ಎಂದು ನಂಬಲಾಗಿರುವ ಹಿಮ ಕರಡಿಗಿಂತಲೂ ಹಿಂದೆ ಅಂದರೆ ಸುಮಾರು ೧,೨೦,೦೦೦ ಲಕ್ಷ ವರ್ಷಗಳ ಹಿಂದೆ ಹಿಮಾಲಯ ಪರ್ವತ ಪ್ರದೇಶದಲ್ಲಿ ’ಯೇತಿ’ ಎಂಬ ಪ್ರಾಣಿ ಇತ್ತು ಎಂಬ ವಿಚಾರ ಖಚಿತಪಟ್ಟಿದೆ ಎಂದರು ಅವರು. ಸಾಮಾನ್ಯ ಕರಡಿ ತಮ್ಮ ನಿಗದಿತ ದಾರಿ ತಪ್ಪಿ ಹಿಮಾಚ್ಛಾದಿತ
ಪ್ರದೇಶಕ್ಕೆ ಪ್ರವೇಶ ಮಾಡಿರಬಹುದು. ಎರಡು ಪ್ರಬೇಧಗಳು ಜತೆಯಾದಾಗ ಮಿಶ್ರ ತಳಿ ‘ಯೇತಿ’ ಹುಟ್ಟಿರಬಹುದು ಎಂಬ ವಾದವನ್ನು ಪ್ರೊ.ಸೈಕ್ ಮುಂದಿಡುತ್ತಾರೆ.

ಒಟ್ಟಾರೆ ಯೇತಿಯ ಬಗ್ಗೆ ಸ್ಪಷ್ಟವಾಗಿ ಗೊತ್ತಾಗದಿದ್ದರೂ ‘ಯೇತಿ ಎಂದರೆ ಪ್ರೇತಿ’ ಎಂಬ ಗಾದೆ ಹುಟ್ಟಿದ್ದು ಹೀಗೆಯೇ ಇರಬಹುದೇ? ಮರೆತ ಮಾತು: ಸ್ಥಳೀಯ ಶೆರ್ಪಾ ಭಾಷೆಯಲ್ಲಿ ಯೇತಿ ಎಂದೆ ‘ಅಗೋ ಅಲ್ಲಿ ಕಾಣುವ ಬೃಹತ್ ಆಕಾರ’ ಎಂದಾಗುತ್ತದಂತೆ. ಯೇತಿಗಳಿಗಿರುವ ಇತರೆ ಹೆಸರುಗಳು;
ಮಿಶೇ, ದ್ಸುತೇ, ಮಿಗೋಯ್ ಅಥವಾ ಮೀಗೋ, ಬನ್ ಮಾಂಚಿ, ಮಿಕಾರ್ ಕಾಂಗ್ ಆದ್ಮಿ.