Saturday, 21st December 2024

ಚಕ್ರವರ್ತಿ, ಚಕ್ರತೀರ್ಥ ಮತ್ತು ಅಭೇದ್ಯ ಚಕ್ರವ್ಯೂಹ !?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಚಕ್ರವರ್ತಿ ಸೂಲಿಬೆಲೆಯವರು ಸನಾತನ ಪರಂಪರೆ ಮತ್ತು ಭಾರತೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಹಾದಿಯ ಇತಿಹಾಸ-ವಾಸ್ತವ ವಿಚಾರಗಳನ್ನು ವಿಶ್ಲೇಷಿಸುವ ವಾಗ್ಮಿಯಾಗಿದ್ದಾರೆ. ಮಿಗಿಲಾಗಿ ಚಕ್ರವರ್ತಿಯವರು ತನ್ನ ಜಾತಿಯನ್ನೇ ಯೋಗ್ಯತೆ ಅರ್ಹತೆ ಎಂದು ಅದನ್ನೇ ‘ಗುರಾಣಿ’ ಮಾಡಿಕೊಂಡು ಮೆರೆದವರಲ್ಲ.

‘ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ, ಮಿಕ್ಕ ಓದುಗಳು ತಿರುಪೆಗೆ, ಮೊಕ್ಷಕ್ಕೆರಡಕ್ಕರವೇ ಸಾಕು ಸರ್ವಜ್ಞ’. ಅಕ್ಷರದ ಜ್ಞಾನಕ್ಕೆ ಕನಿಷ್ಠ ಓದು ಸಾಕು, ಸರಿತಪ್ಪು ಅರಿತುಕೊಳ್ಳುವಷ್ಟು ತಾರ್ಕಿಕ ಜ್ಞಾನವಿದ್ದರಷ್ಟೇ ಸಾಕು, ಹೊರತು ಇನ್ನೆಷ್ಟೇ ಪಿಎಚ್‌ಡಿ ಪದವಿ ಸಂಪಾದಿಸಿ ಪಂಡಿತರೆನಿಸಿಕೊಂಡರೂ ಸಮಾಜದಲ್ಲಿ ಸಭ್ಯ-ಸಜ್ಜನ ಎನಿಸಿಕೊಳ್ಳದಿದ್ದರೆ ಅದೆಲ್ಲ ಪದವಿಗಳೂ ತಿರುಪೆಗೆ ಸಮಾನ (ಮೋಕ್ಷ ಅಂದರೆ ಇಲ್ಲಿ ಘನತೆ, ಗೌರವ ಎಂದು ಅರ್ಥೈಸಿಕೊಳ್ಳಬಹುದು) ಎಂಬುದು ತ್ರಿಪದಿಕವಿ ಸರ್ವಜ್ಞ ಮೂರ್ತಿಯ ಸಂದೇಶ.

ಅಸಲಿಗೆ ಇಂಥ ನೀತಿಬದ್ಧ ವಚನಗಳನ್ನು ನೀಡಿರುವ ಸರ್ವಜ್ಞಮೂರ್ತಿ ಯಾವ ಪಿಎಚ್‌ಡಿ ಪದವಿ ಪಡೆದೇ ಇರಲಿಲ್ಲ. ಆದರೂ ಸ್ವತಃ ಒಂದು ವಿಶ್ವವಿದ್ಯಾಲಯ ವಾಗಿದ್ದವರು. ಇನ್ನೂ ನೋಡಿ, ‘ಪಂಚಲೋಹದ ಕಂಬಿ ಮುಂಚೆ ಭೂಮಿಗೆ ಹಾಸಿ, ಕಂಚಿನಾ ರಥವ ನಡೆಸುವರು, ಅದರೋಟ ಮಿಂಚು ಬಡಿದಂತೆ ಸರ್ವಜ್ಞ’ ಎಂದಿದ್ದಾರೆ. ಭವಿಷ್ಯದಲ್ಲಿ ರೈಲುಬಂಡಿ ಸೃಷ್ಟಿಯಾಗುತ್ತದೆಂಬ ಕಾಲeನವನ್ನೂ ಸರ್ವಜ್ಞ ಆಗಲೇ ಹೇಳಿದ್ದರು. ಸರ್ವಜ್ಞ ಮಾತ್ರವಲ್ಲ ಅದಕ್ಕೂ ಹಿಂದಿನ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿಯವರಂಥ ವಚನಕಾರರು, ಕನಕ- ಪುರಂದರರಂಥ ದಾಸವರೇಣ್ಯರು ಇವರೆಲ್ಲರೂ ಯಾವ ವಿಶ್ವವಿದ್ಯಾಲಯದಲ್ಲೂ ಓದಿದವರಲ್ಲ.

ಭಗವಂತನಲ್ಲಿನ ಭಕ್ತಿಯೇ ಅವರ ಜ್ಞಾನಭಂಡಾರವನ್ನು ತುಂಬಿಸಿತ್ತು. ವರನಟ ಡಾ.ರಾಜ್‌ಕುಮಾರ್ ಅವರು ಓದಿದ್ದು
ಕೇವಲ ನಾಲ್ಕನೇ ತರಗತಿ. ಆದರೆ, ಅವರು ಏರಿದ ಎತ್ತರವಿದೆಯಲ್ಲ, ಅದು ದೇಶ-ವಿದೇಶಗಳಲ್ಲೂ ಪ್ರಶಸ್ತಿ ಗೌರವಗಳನ್ನು ತಂದುಕೊಟ್ಟಿದ್ದವು. ಕರ್ನಾಟಕದ ಅಸ್ಮಿತೆ ಮತ್ತು ಶಕ್ತಿಯಾಗಿದ್ದ, ಕನ್ನಡಿಗರ ಆರಾಧ್ಯ ವ್ಯಕ್ತಿಯಾಗಿದ್ದ ಅಣ್ಣಾವ್ರ ಮಾತು, ನಡತೆ,
ಪ್ರಬುದ್ಧತೆಯ ಮುಂದೆ ಅಽಕಾರ, ತೋರಿಕೆಯ ಪಿಎಚ್‌ಡಿಗಳು, ಪದವಿಗಳು ತೃಣಕ್ಕೆ ಸಮಾನ.

ಹಾಗೆಯೇ ಮೇಲೆ ಉಲ್ಲೇಖಿಸಲಾದ ವಚನ ಕಾರರು, ದಾಸವರೇಣ್ಯರು ಮೊದಲಿಗೆ ವಾಗ್ಮಿ ಗಳಾಗಿ ವಚನ-ಕೀರ್ತನೆಗಳ ವಾಕ್ಚಾತುರ್ಯ ದಿಂದಲೇ ಬೀದಿಬೀದಿ ಅಲೆದು ಸಮಾಜವನ್ನು ತಿದ್ದಿದವರು. ಹೀಗೆ ನಮ್ಮ ಪರಂಪರೆಯಲ್ಲಿ ಕಾಲಾನುಗುಣವಾಗಿ ಇಂಥ ವಾಗ್ಮಿಗಳು ಹುಟ್ಟಿ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ವಿದ್ವಾಂಸರು ಸೃಷ್ಟಿಯಾಗುತ್ತಾರೆ. ಸ್ವಾಮಿವಿವೇಕಾ
ನಂದರು, ಹರಿಕಥಾಬ್ರಹ್ಮ ಗುರುರಾಜಲು ನಾಯ್ಡು, ಭಾರತ ದರ್ಶನ ಖ್ಯಾತಿಯ ಬಿ.ವಿ.ವಿದ್ಯಾನಂದ ಶೆಣೈ, ಬನ್ನಂಜೆ ಗೋವಿಂದಾಚಾರ್ಯರು, ಸ್ವದೇಶಿ ಚಳವಳಿಗಾರ ರಾಜೀವ್ ದೀಕ್ಷಿತ್‌ರಂಥ ಅನೇಕ ಮೇದಾವಿಗಳನ್ನು ಕಂಡಿದ್ದೇವೆ.

ಹಾಗಂತ ಇಂಥವರ ವಿಚಾರಧಾರೆಯನ್ನು ಸಹಿಸಲಾಗದವರು ಅವರನ್ನು ‘ಬಾಡಿಗೆ ಭಾಷಣಕಾರರು’ ಎಂದರೆ ಅವಿವೇಕ ವಲ್ಲವೇ? ಇನ್ನು ಚಕ್ರವರ್ತಿ ಸೂಲಿಬೆಲೆಯವರು ಸನಾತನ ಪರಂಪರೆ ಮತ್ತು ಭಾರತೀಯತೆಯ ಮೌಲ್ಯಗಳನ್ನು ಎತ್ತಿಹಿಡಿ ಯುವ ಹಾದಿಯ ಇತಿಹಾಸ- ವಾಸ್ತವ ವಿಚಾರಗಳನ್ನು ವಿಶ್ಲೇಷಿಸುವ ವಾಗ್ಮಿಯಾಗಿದ್ದಾರೆ. ಮಿಗಿಲಾಗಿ ಚಕ್ರವರ್ತಿ ಯವರು ತನ್ನ ಜಾತಿಯನ್ನೇ ಯೋಗ್ಯತೆ ಅರ್ಹತೆ ಎಂದು ಅದನ್ನೇ ‘ಗುರಾಣಿ’ ಮಾಡಿಕೊಂಡು ಮೆರೆದವರಲ್ಲ. ಈಗಲೂ ಚಕ್ರವರ್ತಿಯವರ ಜಾತಿಯ ಬಗ್ಗೆ ವಿರೋಧಿಗಳಿಗೆ ಹೊರತಾಗಿ ಅನ್ಯರಿಗೆ ಅರಿವಿಲ್ಲ.

ಇಂಥ ಸೂಲಿಬೆಲೆಯವರ ತಂದೆ ದೇವದಾಸ್ ಸುಬ್ರಾಯ ಶೇಟ್ ಅವರು ಸಾವಿರಾರು ಕೋಟಿ ಆಸ್ತಿಗಳನ್ನು ಮಾಡಿದವರಲ್ಲ. ಬೇನಾಮಿ ಹೆಸರುಗಳಲ್ಲಿ ಹೋಟೆಲ್‌ಗಳು, ಅಪಾರ್ಟ್ ಮೆಂಟುಗಳನ್ನು ಕಟ್ಟಿದವರಲ್ಲ. ವಿದೇಶಗಳಲ್ಲಿ ಗುಟ್ಟಾಗಿ ಐಷರಾಮಿ ರೆಸಾರ್ಟ್ ಹೊಂದಿದವರಲ್ಲ. ಸೂಲಿಬೆಲೆ ಎಂಬ ಪುಟ್ಟ ಊರಿನಲ್ಲಿ ಶಾಲೆಯೊಂದರ ಮುಖ್ಯೋಪಾಧ್ಯರಾಗಿದ್ದವರು. ಗುಲಾಮಿ
ರಾಜಕಾರಣಿಯ ಮಗ ಅಯೋಗ್ಯ ರಾಜಕಾರಣಿಯಾದಂತೆ ಶಿಕ್ಷಕನ ಮಗನಾಗಿ ಚಕ್ರವರ್ತಿ ಅಪ್ಪನಿಗೆ ಕೆಟ್ಟ ಹೆಸರು ತಂದವರಲ್ಲ.

ಶಿಕ್ಷಣದ ಮೌಲ್ಯಗಳನ್ನೇ ಉಸಿರಾಡುತ್ತಿರುವವರು ಚಕ್ರವರ್ತಿ. ಅವರ ತಂದೆ ಜನ್ಮನಕ್ಷತ್ರದನುಸಾರ ‘ಮಿಥುನಚಕ್ರವರ್ತಿ’ ಎಂದು ಹೆಸರಿಟ್ಟಿದ್ದಾರೆಯೇ ಹೊರತು ಇನ್ಯಾರನ್ನೋ ಓಲೈಸುವುದಕ್ಕೆ ಗುಲಾಮ ಗಿರಿಯ ಸಂಕೇತವಾಗಿ ಗಂಡು ಮಗನಿಗೂ ಹೆಣ್ಣು ಮಗುವಿನ ಹೆಸರನ್ನಿಟ್ಟಿಲ್ಲ. ಇಂಥ ಚಕ್ರವರ್ತಿಯವರ ಭಾಷಣ, ಉಪನ್ಯಾಸ ಕೇಳಿದವರು ಎಂದಿಗೂ ದೇಶದ್ರೋಹಿ ಗಳಾಗುವುದಿಲ್ಲ. ಕುಕ್ಕರ್ ಬಾಂಬ್ ತಾಯಾರಿಸುವ ಉಗ್ರನಾಗುವುದಿಲ್ಲ.

ಪಾಕಿಸ್ತಾನ್ ಜಿಂದಾಬಾದ್ ಎನ್ನುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರ ವಿಚಾರಧಾರೆಯನ್ನು ಅರ್ಥೈಸಿಕೊಂಡವರು ಗುಲಾಮಗಿರಿಯ ಪಕ್ಷಗಳಿಗೆ ಮತ ನೀಡುವುದಿಲ್ಲ. ಈ ಅಂಶವೇ ಅನೇಕರಿಗೆ ಉರಿಸುತ್ತಿದೆ. ಹಾಗಂತ ಚಕ್ರವರ್ತಿಯವರು
ಬರಿಯ ಮಾತುಗಳಿಗೆ ಸೀಮಿತವಾಗದೆ ಕೃತಿಯಲ್ಲೂ ಹೊಣೆಗಾರಿಕೆ ತೋರುತ್ತಿದ್ದಾರೆ. ‘ಯುವ ಬ್ರಿಗೆಡ್’ ಕಟ್ಟಿಕೊಂಡು ನಾಡಿನಾದ್ಯಂತ ಪಾಳು ಬಿದ್ದು, ಪೊದೆಗಳಿಂದ ಮುಚ್ಚಿಹೋಗಿರುವ ದೇಗುಲಗಳನ್ನು ಸ್ವಚ್ಛಗೊಳಿಸಿ ಜೀರ್ಣೋದ್ಧಾರ ಮಾಡಿದ್ದಾರೆ, ಹೂಳುತುಂಬಿ ಮುಚ್ಚಿಹೋಗಿದ್ದ ಅನೇಕ ಕಲ್ಯಾಣಿ-ಕರೆಗಳಿಗೆ ಕಾಯಕಲ್ಪ ನೀಡಿದ್ದಾರೆ.

ಮಲಿನಗೊಂಡ ನದಿಗಳನ್ನು ಮತ್ತೆ ಪಾವನಗೊಳಿಸಿದ್ದಾರೆ. ಅದನ್ನು ಬಿಟ್ಟು ನಮ್ಮಪ್ಪ ಕೆಜಿಎಫ್ ೧ ಮಾಡಿದ್ದಾರೆ, ನಾನು ಕೆಜಿಎಫ್ ೨ ಮಾಡುತ್ತೇನೆಂದು ರಾಜಕಾರಣಕ್ಕೆ ಇಳಿದವರಲ್ಲ. ಅವರು ಬಯಸಿದ್ದರೆ ಇಷ್ಟೊತ್ತಿಗೆ ವಿಧಾನಸಭೆ-ಪರಿಷತ್ತು, ಲೋಕಸಭೆ- ರಾಜ್ಯಸಭೆಯ ಸದಸ್ಯನಾಗಿ ಮೆರೆಯಬಹುದಿತ್ತು. ಆದರೆ ರಾಜಕಾರಣದಲ್ಲಿ ಅಯೋಗ್ಯರು ದುರಾಹಂಕಾರಿ ಗಳೇ ಹೆಚ್ಚಿದ್ದರಿಂದಲೋ ಏನೋ ಅವರು ರಾಜಕೀಯದಿಂದ ದೂರವೇ ಉಳಿದರು.

ಇಷ್ಟಕ್ಕೂ ಚಕ್ರವರ್ತಿ ಸೂಲಿಬೆಲೆಯವರು ದೇಶದ್ರೋಹವನ್ನು ಹುಟ್ಟಿಸುವ, ಜಾತಿಗಳ ಮೂಲಕ ಸಮಾಜವನ್ನು ಒಡೆಯುವಂಥ ಭಾಷಣ ಕಾರನಲ್ಲ. ಜಾತಿಗಳನ್ನು ಒಗ್ಗೂಡಿಸುವ, ದೇಶವನ್ನು ಭದ್ರಗೊಳಿಸುವ, ಸ್ವದೇಶಿ ಮೌಲ್ಯಗಳನ್ನು ಪ್ರತಿಪಾದಿಸುವ, ಅಪ್ಪಟ ದೇಸಿತನವನ್ನು ಜಾಗೃತಗೊಳಿಸುವ ಅವರು ಗಳಿಸಿರುವುದು ಬಿ.ಎಸ್ಸಿ ಗಣಕ ವಿಜ್ಞಾನ ಪದವಿ. ಹೊರತು ಉನ್ನತ ಮಟ್ಟದ ಪದವಿ ಓದಿದ್ದೇನೆಂದು ಹೇಳಿಕೊಂಡು ಚುನಾವಣಾ ಅಫಿಡೆವಿಟ್‌ನಲ್ಲಿ ಮಾತ್ರ ಸತ್ಯ ಹೇಳಿಕೊಳ್ಳುವ ರಾಜಕಾರಣಿ ಗಳಂತಲ್ಲ. ತಮ್ಮ ಬ್ರಿಗೇಡ್ ಮೂಲಕ ದೇಶಕ್ಕೆ ಸೈನಿಕ ಕೊಡುಗೆ, ದೇಶಭಕ್ತಿಯಂಥ ವಿಷಯದಲ್ಲಿ ಯುವಕರಲ್ಲಿ ಜಾಗೃತಿ ಮೂಡಿ
ಸುತ್ತಿzರೆ. ಹೊಸ ಸ್ವಾತಂತ್ರ್ಯದ ಬೆಳಕು, ಸ್ವದೇಶಿ ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದರು.

ಮೇರಾ ಭಾರತ್ ಮಹಾನ್, ಲೈಫ್ ಸ್ಕ್ಯಾನ್, ಜಾಗೋ ಭಾರತ್, ಹೋಂಗೆ ಕಾಮ್ಯಾಬ್ ಶೀರ್ಷಿಕೆಗಳಲ್ಲಿ ಅನೇಕ ಪತ್ರಿಕೆಗಳಲ್ಲಿ ಸರಣಿ ಬರಹಗಳ ಮೂಲಕ ಅಂಕಣಕಾರರಾಗಿದ್ದಾರೆ. ಆಕಾಶವಾಣಿಯ ಜ್ಞಾನವಾಣಿಯಲ್ಲಿ ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಸರಣಿ ಉಪನ್ಯಾಸದ ಮೂಲಕ ಯುವಕರಲ್ಲಿ ದೇಶಾಭಿಮಾನ ಜಾಗೃತಿಗೊಳಿಸುವ ಸೇವೆ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಕೃತಿಗಳು, ಅನುವಾದಿತ, ಸಂಪಾದಿತ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲೂ ಮಹತ್ತರ ಕೊಡುಗೆ ನೀಡಿದ್ದಾರೆ.

ಹೀಗೆ ತಮ್ಮ ಇಡೀ ಜೀವನ ಭಾರತೀಯತೆಯ ಸೇವೆಗೆ ಮುಡಿಪಾಗಿಟ್ಟಿರುವ ಚಕ್ರವರ್ತಿಯವರ ಬೆಳವಣಿಗೆಯನ್ನು ಕಂಡು
ಭಾರತ ವಿರೋಧಿ ಮನಃಸ್ಥಿತಿಯವರಲ್ಲಿ ಅಸೂಯೆ ಹುಟ್ಟಿರಬೇಕು. ವಿದೇಶಿಗರ ಕೃಪಾಕಟಾಕ್ಷದಲ್ಲಿ ಮೀಯುತ್ತಿರುವವರಿಗೇನು ಗೊತ್ತು ರಾಷ್ಟ್ರೀಯತೆಯ ಪರಿಮಳ? ಕಿತ್ತುಹೋದ ನಾಲ್ಕು ಕಾದಂಬರಿ ಬರೆದವರೆಲ್ಲ ಕೇವಲ ಜಾತಿಯ ಕಾರಣಕ್ಕೆ ಸಾಹಿತಿಗಳು, ಬುದ್ಧಿಜೀವಿಗಳು, ವಿಚಾರ ವಾದಿಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದಾರೆ.

ಇಂಥ ಸಮಯಸಾಧಕರು ಸರಕಾರಗಳಿಗೆ ಬಕೇಟು ಹಿಡಿದು ಸೈಟು, ಜಮೀನು, ಐಷರಾಮಿ ಬಂಗಲೆಗಳನ್ನು ಗಿಟ್ಟಿಸಿಕೊಂಡು ‘ವೃದ್ಧನಾರಿ ಪತಿವ್ರತಾ’ ಎಂಬಂತಿದ್ದಾರೆ. ಹೀಗಿರುವಾಗ ಸಾಹಿತ್ಯಿಕ ವಿಚಾರದಲ್ಲಿ ಚಕ್ರವರ್ತಿಯವರು ಇಂಥವರನ್ನೆಲ್ಲ ಮೀರಿಸುವಂಥ ಬರಹಗಾರರಾಗಿದ್ದಾರೆ. ಇನ್ನು ಸಚಿವ ಪ್ರಿಯಾಂಕ್ ಖರ್ಗೆ ವಿಚಾರಕ್ಕೆ ಬರೋಣ. ‘ಚಕ್ರವರ್ತಿ ಸೂಲಿಬೆಲೆ ಅದ್ಯಾವ ಪಿಎಚ್‌ಡಿ ಮಾಡಿದ್ದಾನೆ, ಅವನ್ಯಾವ ಸಾಹಿತಿ, ಆತ ಬಾಡಿಗೆ ಭಾಷಣಕಾರ’ ಎಂದೆಲ್ಲ ಪುಂಖಾನುಪುಂಖವಾಗಿ ಪ್ರಶ್ನಿಸಿದ್ದಾರೆ. ಸೂಲಿಬೆಲೆಯವರ ಪಾಂಡಿತ್ಯದೊಂದಿಗೆ ಪ್ರಿಯಾಂಕ್‌ಖರ್ಗೆಯವರ ಜ್ಞಾನವನ್ನು ತುಲನೆ ಮಾಡುವುದು ಅವಿವೇಕದ ಪರಮಾವಧಿಯಾಗುತ್ತದೆ. ಆ ವಿಚಾರ ಅತ್ಲಾಗಿರಲಿ. ಪ್ರಿಯಾಂಕ್ ಅವರ ಆಕ್ಷೇಪಣೆ ಏನೆಂದರೆ, ಮಕ್ಕಳ
ಪಠ್ಯಪುಸ್ತಕದಲ್ಲಿ ಚಕ್ರವರ್ತಿ ಸೂಲಿಬೆಲೆ ಅರ್ಥಾತ್ ರಾಷ್ಟ್ರೀಯತೆ ವಿಚಾರಧಾರೆಯ ಪಠ್ಯಗಳು ಇರಕೂಡದು.

ಅಸಲಿಗೆ ಆ ಪಠ್ಯಗಳನ್ನು ಪ್ರಿಯಾಂಕ್ ಅವರು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸೂಲಿಬೆಲೆ ಒಪ್ಪಿದಂಥ ಪಠ್ಯಗಳು
ಮಕ್ಕಳಿಗೆ ಬೇಡ. ಆಯ್ತು, ಆದರೆ ದೇಶಾಭಿಮಾನ ಹುಟ್ಟಿಸದ ‘ಬರ’ಗೆಟ್ಟ ಸಾಹಿತಿಗಳ ಬಂಡಾಯ ಪಠ್ಯಗಳು, ಮಕ್ಕಳಲ್ಲಿ ಸನಾತನ ಪರಂಪರೆಯ ಬಗೆಗೆ ದ್ವೇಷ ಹುಟ್ಟಿಸುವಂಥ ಎಡಬಿಡಂಗಿ ವಿಚಾರವ್ಯಾದಿಗಳ ಪಠ್ಯಗಳನ್ನು ಸೇರಿಸುವ ಸ್ವಾತಂತ್ರ್ಯ ಪ್ರಿಯಾಂಕ್ ಅವರಿಗೆ ಹೇಗೆ ಸಿಕ್ಕಿದೆ? ಅಸಲಿಗೆ ತಮ್ಮ ಮಕ್ಕಳು ಏನನ್ನು ಕಲಿಯಬೇಕು, ಯಾವ ಇತಿಹಾಸವನ್ನು ಗೌರವಿಸ ಬೇಕು ಎಂಬ ಮೂಲಭೂತ ಹಕ್ಕು ಇರುವುದು ಮಕ್ಕಳನ್ನು ಹುಟ್ಟಿಸಿದ ತಂದೆತಾಯಿಗಳಿಗೇ ಹೊರತು ರಾಜಕೀಯ ಪಕ್ಷಗಳಿಗಲ್ಲ. ಇಂಥ ಪಠ್ಯಗಳನ್ನೇ ಮಕ್ಕಳು ಕಲಿಯಬೇಕೆನ್ನಲು ಇದೇನು ಲಾರ್ಡ್ ಮೆಕಾಲೆ ಕಾಲವಲ್ಲ. ಹಿಂದೂ ಮಕ್ಕಳು ತಮ್ಮತನವನ್ನು ಕಲಿಯಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.

ಅಂಥ ರಾಷ್ಟ್ರಕವಿ ಕುವೆಂಪು ಅವರೇ ‘ರಾಘವ ಮಧುಸೂದನರವತರಿಸಿದ’, ‘ಜನನಿಯ ಜೋಗುಳ ವೇದದ ಘೋಷ’ ಎಂದು ನಾಡನ್ನು ಸರ್ವಜನಾಂಗದ ಶಾಂತಿಯ ತೋಟವೆಂದು ಬಣ್ಣಿಸಿದ್ದಾರೆ. ‘ದೇಶ ನನ್ನದು ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು’, ‘ಕಚ್ಚಾಡುವ ವರನು ಕೂಡಿಸಿ ಒಲಿಸು ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸು’ ಎಂದು ಏಕತೆ ಸಾರಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಮಾಡುತ್ತಿರುವುದೂ ಇದೇ ಕೆಲಸವನ್ನು. ಈ ರಾಜಕಾರಣಿಗಳು ಪಠ್ಯಗಳಲ್ಲಿ ಏನನ್ನಾದರೂ ತುರುಕಿ ಹಾಳಾಗಿ ಹೋಗಲಿ, ಅದು ಬರಿಯ ಅಂಕಗಳಿಸುವುದಕ್ಕೆ ಸೀಮಿತ ಎಂದು ನಿರ್ಧರಿಸಿರುವ ಬಹುಪಾಲು ಬುದ್ಧಿವಂತ ಪೋಷ
ಕರು, ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಸನಾತನ ಮೌಲ್ಯಗಳನ್ನು ಆಚಾರವಿಚಾರಗಳನ್ನು ಕಲಿಸಿಯೇ ತೀರುತ್ತಾರೆ. ಅಷ್ಟಿಲ್ಲದೆಯೇ ಹೋಗಿದ್ದರೆ ವಿದೇಶಿಗರಲ್ಲದೇ ಸ್ವಧರ್ಮ ಧರ್ಮಗೇಡಿಗಳನ್ನು ಎದುರಿಸಿಯೇ ಹಿಂದೂಧರ್ಮ ಇನ್ನೂ ಉಳಿದುಕೊಂಡು ಬಂದಿದೆಯೇ? ಹೀಗಾಗಿಯೇ ಬದಲಾದ ‘ಕಾಲ ಜ್ಞಾನ’ದಲ್ಲಿ ಮಹ್ಮದ್‌ಬಿನ್ ಖಾಸಿಂ ಆದಿಯಾಗಿ
ಟಿಪ್ಪುವರೆಗಿನ ಮತಾಂಧರು, ದಾಳಿಕೋರರ ಇತಿಹಾಸ ಸಹಜವಾಗಿ ಸತ್ಯಗಳ ಮೂಲಕ ಬೆತ್ತಲಾಗುತ್ತಿವೆ.

ಇದಕ್ಕೆ ‘ವಾಟ್ಸಾಪ್ ಯೂನಿವರ್ಸಿಟಿ’ಯ ಕೊಡುಗೆಯೂ ಪ್ರಮುಖವಾಗಿದೆ. ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ
ಇಂಥವರ ವಿಚಾರಗಳು ಸಮಾಜದಲ್ಲಿ ಹರಿದಷ್ಟೂ ದಿಗಿಲುಗೊಳ್ಳಬೇಕಾದವರು ದೇಶದ್ರೋಹಿಗಳು, ಪಾಕಿಸ್ತಾನದಂಥ ವೈರಿಗಳು ಮಾತ್ರ. ದುರಂತ ವೆಂದರೆ ಇಂಥ ‘ಚಕ್ರ’ಗಳೇ ಗುಲಾಮಗಿರಿಯ ರಾಜಕಾರಣಿಗಳಿಗೆ ಭೇದಿಸಲಾಗದ ‘ಚಕ್ರವ್ಯೂಹ’
ಗಳಾಗಿ ಬಾಽಸುತ್ತಿವೆ! ಪೋಷಕರೇ ಎಚ್ಚೆತ್ತುಕೊಳ್ಳಿ ನಿಮ್ಮ ಮಕ್ಕಳು ‘ನಿಮ್ಮನ್ನೇ’ ಹೋಲಬೇಕೇ ಹೊರತು ನಾಯಲಾಯಕ್ಕು ರಾಜಕಾರಣಿಗಳ, ಲದ್ದಿಜೀವಿಗಳ ಮನಃಸ್ಥಿತಿಗಳನ್ನಲ್ಲ. ದೇಶಪ್ರೇಮದ ಪಠ್ಯ ಭಾಗವನ್ನು ತೆಗೆದರೇನಂತೆ? ಆದರೆ ಮಕ್ಕಳ
ತಲೆಯಿಂದ ತೆಗೆಯುವುದು ಅಸಾಧ್ಯ.