Thursday, 28th November 2024

ಕಾಡಿನ ದೈತ್ಯ ಬದನೆಗೆ ಮನ್ನಣೆ ತಂದ ಹಿರಿ ಜೀವ!

ಸುಪ್ತ ಸಾಗರ

rkbhadti@gmail.com

ಗುಡ್ಡದಿಂದ ತಂದು ಚೆಲ್ಲಿದ ಬದನೆ ಬೀಜ ಮುಂದೆ ದೊಡ್ಡ ಕ್ರಾಂತಿಯೊಂದಕ್ಕೆ ನಾಂದಿ ಹಾಡೀತೆಂದು ಲಕ್ಷೀಬಾಯಿಯವರು ಕನಸಲ್ಲೂ ಎಣಿಸಿರಲ್ಲ. ಇಂದು ಯಾವ ವಿಶ್ವವಿದ್ಯಾಲಯದಿಂದ ಸಾಧ್ಯವಾಗದ ಅಪರೂಪದ ತಳಿಯೊಂದರ ಸಂರಕ್ಷಣೆ, ಜತೆಗೆ ಅದರ ಪ್ರಸರಣಕ್ಕೂ ಅವರು ಕಾರಣವಾಗಿಬಿಟ್ಟಿದ್ದಾರೆ. ಮಾತ್ರವಲ್ಲ, ಈ ಅಪರೂಪದ ಸಾಧನೆಗೆ ಅವರಿಗೆ ರಾಷ್ಟ್ರಪತಿ ಪದಕದ ಗೌರವವೂ ಸಂದಿದೆ. ಇದೀಗ ೮೫ರ ವಯಸ್ಸಿನಲ್ಲಿರುವ ಲಕ್ಷ್ಮೀಬಾಯಿ ಇದಾವುದರ ಪರಿವೆಯಿ ಲ್ಲದೇ ಇಂದಿಗೂ ತಮ್ಮ ಪಾಡಿಗೆ ತಾವು ಹೊಲದಲ್ಲಿ ತಲೆಮೇಲೆ ಇಳಕಲ್ ಸೀರೆಯ ಸೆರಗು ಹಾಕಿಕೊಂಡು ದುಡಿಯುತ್ತಿರುತ್ತಾರೆ.

ಇದು ಸರಿ ಸುಮಾರು ಐವತ್ತು-ಅರವತ್ತು ವರ್ಷಗಳ ಹಿಂದಿನ ಮಾತು. ಜಮಖಂಡಿಯ ಹುಲ್ಯಾಳದ ಕೃಷಿ ಮಹಿಳೆ ಲಕ್ಷೀಬಾಯಿ ಜುಲಪಿಯವರು ಅದೊಂದು ದಿನ ಕುರಿಗಳನ್ನು ತುರುಬಿಕೊಂಡು ಕಾಡಿಗೆ ಹೋಗಿದ್ದಾಗ, ಗುಡ್ಡದ ಮಗ್ಗುಲಲ್ಲಿ ಅಪರೂಪದ ಬದನೆ ಗಿಡವೊಂದು ಗಮನ ಸೆಳೆಯಿತು. ಗಿಡಕ್ಕಿಂತ ಅದರಲ್ಲಿ ಕಪ್ಪಗೆ ತೊನೆದಾಡುತ್ತಿದ್ದ ಬದನೆಕಾಯಿಯ ಹೊಳಪಿಗೆ ಅವರು ಮನ ಸೋತದ್ದು.

ಎಲ್ಲಕ್ಕಿಂತ ಅದರ ಗಾತ್ರ ಲಕ್ಷೀಬಾಯಿಯವರನ್ನು ಅಚ್ಚರಿಗೆ ದೂಡಿತ್ತು. ಬರೋಬ್ಬರಿ ಒಂದು ತೆಂಗಿನಕಾಯಿ ಗಾತ್ರದಲ್ಲಿದ್ದ ಅಂಥ ಬದನೆಯನ್ನು ಅವರು ಹಿಂದೆಂದೂ ಕಂಡಿರಲಿಲ್ಲ. ಯಾವುದಕ್ಕೂ ಇರಲಿ ಎಂದುಕೊಂಡು ಗಿಡದಲ್ಲಿ ಚೆನ್ನಾಗಿ ಬೆಳೆದಿದ್ದ ಒಂದೆರಡು ಕಾಯನ್ನು ಕೊಯ್ದುಕೊಂಡು ಮನೆಗೆ ಬಂದರು. ಅದು ಹಣ್ಣಾದ ಬಳಿಕ, ಬೀಜ ತೆಗೆದು ತಮ್ಮ ಹೊಲದಂಚಿಗೆ ಬಿತ್ತಿದ್ದರು.

ಹಾಗೆ ತಾವು ಗುಡ್ಡದಿಂದ ತಂದು ಚೆಲ್ಲಿದ ಬದನೆ ಬೀಜ ಮುಂದೆ ದೊಡ್ಡ ಕ್ರಾಂತಿಯೊಂದಕ್ಕೆ ನಾಂದಿ ಹಾಡೀತೆಂದು ಲಕ್ಷೀ ಬಾಯಿಯವರು ಕನಸಲ್ಲೂ ಎಣಿಸಿರಲ್ಲ. ಇಂದು ಯಾವ ವಿಶ್ವವಿದ್ಯಾಲಯದಿಂದ ಸಾಧ್ಯವಾಗದ ಅಪರೂಪದ ತಳಿಯೊಂದರ ಸಂರಕ್ಷಣೆ, ಜತೆಗೆ ಅದರ ಪ್ರಸರಣಕ್ಕೂ ಅವರು ಕಾರಣವಾಗಿಬಿಟ್ಟಿzರೆ. ಮಾತ್ರವಲ್ಲ, ಈ ಅಪರೂಪದ ಸಾಧನೆಗೆ ಅವರಿಗೆ ರಾಷ್ಟ್ರಪತಿ ಪದಕದ ಗೌರವವೂ ಸಂದಿದೆ. ಇದೀಗ ೮೫ರ ವಯಸ್ಸಿನಲ್ಲಿರುವ ಲಕ್ಷ್ಮೀಬಾಯಿ ಇದಾವುದರ ಪರಿವೆಯಿಲ್ಲದೇ ಇಂದಿಗೂ ತಮ್ಮ ಪಾಡಿಗೆ ತಾವು ಹೊಲದಲ್ಲಿ ತಲೆಮೇಲೆ ಇಳಕಲ್ ಸೀರೆಯ ಸೆರಗು ಹಾಕಿಕೊಂಡು ಗಿಡಗಳಿಗೆ ನೀರು ಹನಿಸುತ್ತಾ, ಕಳೆ ಕೀಳುತ್ತಾ, ಗೊಬ್ಬರ ಹಾಕುತ್ತ, ಕೊಯ್ಲು ಮಾಡುತ್ತ ದುಡಿಯುತ್ತಿರುತ್ತಾರೆ.

ವಿಶೇಷವೆಂದರೆ ರಾಷ್ಟ್ರಪತಿ ಪದಕ ಸ್ವೀಕಾರಕ್ಕೂ ಅವರು ಅದೇ ಸಾಂಪ್ರದಾಯಿಕ ಇಳಕಲ್ ಸೀರೆಯುಟ್ಟೇ ಹೋಗಿದ್ದರು. ದೈತ್ಯ ಗಾತ್ರದ, ಕಪ್ಪಗೆ ಹೊಳೆಯುತ್ತ ಆ ಕರಿ ಬದನೆ ಮಾತ್ರ ನಸು ನಗುತ್ತ ಅವರ ಹೊಲದಿಂದ ರಾಜ್ಯಗಳ ಗಡಿ ದಾಟಿ ಎಲ್ಲಿಗೋ ರವಾನೆಯಾಗಿದೆ. ಅಲ್ಲಿ ಬೆಳೆದ ಬದನೆಯ ರುಚಿಕಟ್ಟಾದ ಅಡುಗೆಯನ್ನು ಸುತ್ತಮುತ್ತಲ ಜಿಯ ಮಂದಿಯೆಲ್ಲ
ಸವಿಯುತ್ತಿದ್ದಾರೆ.

ಅದು ೧೯೮೦ರ ದಶಕ. ಇಷ್ಟೆಲ್ಲ ಆಗಿ ಹೋಗಿದ್ದು ಆಗಲೇ. ಅತ್ಯಂತ ಮುಗ್ಧವಾಗಿ ಪಾರಂಪರಿಕವಾಗಿ ಬಂದ ಜಮೀನಿನಲ್ಲಿ
ಬೇಸಾಯದಲ್ಲಿ ತೊಡಗಿದ್ದ ಲಕ್ಷ್ಮೀಬಾಯಿಯವರ ಇಂಥ ಸಾಹಸಕ್ಕೆ ಇಂಬು ನೀಡಿದ್ದು ಮಗ ರುದ್ರಪ್ಪ ಜುಲಪಿ. ೧೯೮೯ರಲ್ಲಿ
ಕೃಷಿಗೆ ಧುಮುಕಿದ ರುದ್ರಪ್ಪ ಆರಂಭದಲ್ಲಿ ಎಲ್ಲರಂತೆಯೇ ರಾಸಾಯನಿಕ ಪದ್ಧತಿಗೇ ಮೊರೆ ಹೋದವರು. ಆದರೆ ಅವರೊಳಗಿನ ತುಡಿತ ಹಾಗೂ ಸುತ್ತಲಿನ ಬದಲಾವಣೆಗಳನ್ನು ಗಮನಿಸಿ ತಮ್ಮ ಕೃಷಿ ಪದ್ಧತಿ ಬದಲಾವಣೆಗೆ ಮುಂದಾದರು.

ರಾಸಾಯನಿಕಗಳೆಂದಿಗೂ ಪರಿಸರವನ್ನು ಸುಸ್ಥಿರವಾಗಿಡಲು ಸಾಧ್ಯವಿಲ್ಲವೆಂದು ಮನಗಂಡದ್ದೇ, ಅದಕ್ಕೆ ಕೊನೆ ಹಾಡಿ, ಶುದ್ಧ
ದೇಸೀ, ಸಾವಯವ ಕೃಷಿಯತ್ತ ಹೊರಳಿದರು. ಆರಂಭದ ಎರಡು ಮೂರು ವರ್ಷ ಪ್ರಯೋಗಗಳಿಂದ ಕೈ ಸುಟ್ಟುಕೊಂಡರೂ, ತಮ್ಮ ತಪ್ಪುಗಳಿಂದಲೇ ಪಾಠ ಕಲಿತು, ಯಶಸ್ಸನ್ನು ದಕ್ಕಿಸಿಕೊಳ್ಳುವುದನ್ನು ಕರಗತಮಾಡಿಕೊಂಡರು. ಈ ಹಂತದ ಅವರಿಗೆ ಅರಿವಾಗಿದ್ದು, ಅಮ್ಮ ತಂದು ಹಾಕಿದ್ದ ಬದನೆ ತಳಿಯ ಮೌಲ್ಯ. ಬೇರೆಲ್ಲೂ ಕಾಣ ಸಿಗದ ಅತಿ ಅಪರೂಪದ ಈ ಕರಿ ಬದನೆ ಕೃಷಿಯನ್ನು ವಿಸ್ತರಿಸುವುದರೊಂದಿಗೆ, ಬೀಜ ಸಂರಕ್ಷಿಸಿ, ಅತಿ ಹೆಚ್ಚು ಜನರಿಗೆ ತಲುಪುವಂತೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದು ವಿಶ್ವವಿದ್ಯಾಲಯ, ಸರಕಾರಿ ಇಲಾಖೆಗಳ ಕದ ತಟ್ಟಿದರು.

ಪ್ರತಿಕ್ರಿಯೆ ನಿರಾಶದಾಯವಾಗಿದ್ದರಿಂದ ತಾವೇ ಅದರ ಮೇಲೆ ಹೆಚ್ಚಿನ ಸಂಶೋಧನೆ, ಪ್ರಯೋಗಕ್ಕೆ ಇಳಿದರು. ಪರಿಣಾಮ
ಇಂದು ಎರಡು ಎಕರೆ ಪ್ರದೇಶದಲ್ಲಿ ಈ ದೈತ್ಯ ಬದನೆ ಸಮೃದ್ಧ ಪಸಲು ನೀಡುತ್ತಿದೆ. ಮಾತ್ರವಲ್ಲ, ೨೦೧೫ರಲ್ಲಿ ರಾಷ್ಟ್ರಪತಿ
ಪದಕದ ಗರಿಮೆಯೊಂದಿಗೆ ದೇಶಾದ್ಯಂತ ತನ್ನ ಬೆಳೆ ಕ್ಷೇತ್ರನ್ನು ವಿಸ್ತರಿಸಿಕೊಂಡಿದೆ. ನೀವು ನಂಬಲಿಕ್ಕಿಲ್ಲ, ಹುಲಿಯಾಳದಿಂದ ಹೊರಟ ಬದನೆ ಬೀಜಗಳು ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಲ್ಲದೇ ಗಡಿ ದಾಟಿ, ಮಧ್ಯಪ್ರದೇಶ, ಛತ್ತಿಸಗಡ ಗಳನ್ನು ಮೀರಿ, ಉತ್ತರದ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶ, ಪಂಜಾಬ, ಗುಜರಾತ, ರಾಜಸ್ಥಾನ ಹೀಗೆ ೧೫ಕ್ಕೂ ಹೆಚ್ಚು ರಾಜ್ಯಗಳ ನೆಲದಲ್ಲಿ ನಗುತ್ತಿವೆ.

ಇದೀಗ ಈ ಬದನೆ ಬೆಳೆ ನೋಂದಣಿಯೊಂದಿಗೆ (೨೦೧೫) ಅಧಿಕೃತ ಪೇಟೆಂಟ್ (ಏಘಓಆ-೧) ಅನ್ನು ಸಹ ಪಡೆದಿದ್ದಾರೆ.
ಆಧಿಕ ಇಳುವರಿಯ, ಮಿರ ಮಿರನೆ ಮಿಂಚುವ ಪರ್ಪಲ್ ಬಣ್ಣದ, ಅಪಾರ ರುಚಿಯ ಈ ಬದನೆ ಜಮಖಂಡಿ, ಬಾಗಲಕೋಟ, ಮುಧೋಳ, ವಿಜಾಪುರ, ವಿಜಾಪುರ, ರಬಕವಿ, ಬನಹಟ್ಟಿ, ತೇರದಾಳ ಸೇರಿದಂತೆ ಸುತ್ತಮುತ್ತಲ ರೈತರ ಮತ್ತು ಗ್ರಾಹಕರ ಮನ ಗೆದ್ದಿದೆ. ನ್ಯಾಷನಲ್ ಇನೋವೇಷನ್ ಫೌಂಡೇಶನ್, ಇಂಡಿಯನ್ ಆರ್ಗಾನಿಕ್, ಪೋಸ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರವಾಗಿದೆ. ಪಾತ್ರವಾಯಿತು.

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಪ್ರಶಸ್ತಿ ನೀಡಿ ಗೌರವಿಸಿದರು. ‘ಒಂದು ಎಕರೆಗೆ ಏನಿಲ್ಲವೆಂದರೂ ೪೦ ಟನ್ ಇಳುವರಿ
ಬರುವ ಇದರ ಕಾಯಿ ಚೆನ್ನಾಗಿ ಬಲಿಯಲು ಬಿಟ್ಟರೆ, ಹಣ್ಣಾಗುವ ಹಂತದಲ್ಲಿ ೧-೨ ಕೆಜಿಯಷ್ಟು ತೂಗುತ್ತದೆ. ಒಂದು ಕೇಜಿಗೆ ಸರಾಸರಿ ೨೦-೪೦ರೂ. ಬೆಲೆ ಮಾರುಕಟ್ಟೆಯಲ್ಲಿದೆ. ಒಮ್ಮೆ ಕಾಯಿಬಿಡಲು ಆರಂಭಿಸಿದರೆ ಒಂದು ಎಕರೆಯಿಂದ ಏನಿಲ್ಲ ವೆಂದರೂ ದಿನವೊಂದಕ್ಕೇ ಒಂದು ಟನ್ ಬೆಳೆ ಇಳುವರಿ ಸಾಧ್ಯ. ಒಮ್ಮೆ ಸರಿಯಾಗಿ ಬೆಳೆದ ಗಿಡ ೮-೧೦ ತಿಂಗಳವರೆಗೂ
ಫಸಲನ್ನು ನೀಡುತ್ತದೆ’ ಎನ್ನುತ್ತಾರೆ ರುದ್ರಪ್ಪ.

ಬೇರೆ ಬದನೆಗಿಂತ ಗಾತ್ರದಲ್ಲಿ ದೊಡ್ಡದಿರುವ ಕಾರಣ, ಸಾಲು, ನಾಟಿಯಲ್ಲೂ ಸ್ವಲ್ಪ ಭಿನ್ನತೆಯಿದೆ. ಎಲ್ಲ ಬದನೆ ಗಿಡಗಳ
ನಡುವಿನ ಅಂತರ ೨ ಅಡಿ ಇದ್ದರೆ ಸಾಕು. ಆದರೆ ಈ ಕರಬದನೆ ಗಿಡಗಳನ್ನು ಕನಿಷ್ಠ ೪-೫ ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಗಿಡಗಳ ಗಾತ್ರ ಹೆಚ್ಚಿರುವುದರಿಂದ ಹಾಗೂ ಹೆಚ್ಚು ಬಾಳಿಕೆಯ ದೃಷ್ಟಿಯಿಂದ ಸಾಲುಗಳ ನಡುವೆ ೬-೧೦ ಅಡಿ ಅಂತರ ಕಾಯ್ದುಕೊಳ್ಳುವುದು ಮುಖ್ಯ. ನವೆಂಬರ‍್-ಡಿಸೆಂಬರ‍್ ಅವಽಯಲ್ಲಿ ರಂಟೆ ಹೊಡೆದು ಪಾತಿ ಮಾಡಿಕೊಳ್ಳಬೇಕು.

ಅದಕ್ಕೂ ೪೫ ದಿನಗಳ ಮುನ್ನ ಟ್ರೇಗಳಲ್ಲಿ ಕೋಕೋಫೀಟ್ ಅಥವಾ ಮರಳು ಮಿಶ್ರಿತ ಮಣ್ಣನ್ನು ತುಂಬಿಕೊಂಡು ಬೀಜ
ಬಿತ್ತಿ ಗಿಡಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದು ಎಕರೆ ಪ್ರದೇಶಕ್ಕೆ ಕೇವಲ ೨೦ ಗ್ರಾಂ ನಷ್ಟು ಬೀಜ ಸಾಕಾಗುತ್ತದೆ. ನಾಟಿಗಿಂತ ಮುಂಚೆ ಪಾತಿಗಳಿಗೆ ಗೊಬ್ಬರ ಹಾಕಿ ಸಿದ್ಧಪಡಿಸಿ ಕೊಳ್ಳಬೇಕು. ಹೊಲವನ್ನು ರಾಟೆ ಹೊಡೆದಿಟ್ಟುಕೊಳ್ಳುವುದು
ಮರೆಯಗಿಡಗಳನ್ನು ಸಗಣಿ ಅಥವಾ ಸಾವಯವ ದ್ರಾವಣದಲ್ಲಿ ಅದ್ದಿ ನಾಟಿ ಮಾಡುವುದರಿಂದ ಬೆಳೆ ಹುಲುಸಾಗಿ ಬರುತ್ತದೆ.

ಆರಂಭದಲ್ಲಿ ತುಸು ಹೆಚ್ಚಿಗೆ ನೀರು ಹನಿಸಬೇಕಾಗುತ್ತದೆ, ಒಮ್ಮೆ ಗಿಡ ಬೆಳೆದ ನಂತರ ೨-೩ ದಿನಕ್ಕೊಮ್ಮೆ ನೀರು ಸಾಕಾ ಗುತ್ತದೆ. ಎರಡನೇ ಬಾರಿಗೆ ಹೂವು ಕಚ್ಚುವ ಹಂತದಲ್ಲಿ ಪುನಃ ಗೊಬ್ಬರ ನೀಡಬೇಕು. ಎಕರೆಗೆ ೫-೧೦ ಟನ್ ಗೊಬ್ಬರ ಸಾಕಾಗುತ್ತದೆ-ರುದ್ರಪ್ಪ ಅನುಭವದೊಂದಿಗೆ ವಿವರಿಸುತ್ತಾರೆ. ತಾವು ಸಂಪೂರ್ಣ ಸಾವಯವ ಪದ್ಧತಿಯ ಕೃಷಿಯನ್ನೇ
ಅವಲಂಬಿಸಿರುವುದರಿಂದ ಬೀಜೋಪಾಚಾರ ದ್ರಾವಣ, ಗೊಬ್ಬರ, ಕ್ರಿಮಿನಾಶಕ ಎಲ್ಲವನ್ನೂ ಮನೆಯ ತಯಾರಿಸಿ
ಕೊಳ್ಳುತ್ತಾರೆ ರುದ್ರಪ್ಪ. ಹಟ್ಟಿ ಗೊಬ್ಬರ, ಆಡು ಕುರಿಗಳ ಗೊಬ್ಬರ ಹಾಗೂ ಸುತ್ತಮುತ್ತಲ ಕಸ-ತ್ಯಾಜ್ಯನ್ನು ಸೇರಿಸಿ ಮನೆಯ
ಸಾವಯವ ಗೊಬ್ಬರ ತಯಾರಿಸಿಕೊಳ್ಳುತ್ತಾರೆ.

ಜತೆಗೆ ಬದನೆಯ ಮಧ್ಯ, ನೈಟ್ರೋಜನ್ ಫಿಕ್ಸಿಂಗ್ ಗೆ ಅನುಕೂಲವಾಗುವಂತೆ ಅಲಸಂಡೆ, ಕಡಲೆ, ಮೆಂತೆ, ಉದ್ದು, ಸೆಣಬು, ಬೆಂಡೆ ಹೀಗೆ ಹಲವಾರು ಧಾನ್ಯ ಮತ್ತು ತರಕಾರಿಗಳನ್ನೂ ಬೆಳೆಯುತ್ತಾರೆ. ಜೆತೆಗ ಅಲ್ಲಲ್ಲಿ ಔಡಲ ಹಾಕುವುದರಿಂದ ತೇವಾಂಶ
ರಕ್ಷಣೆಯಾಗುತ್ತದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುವುದರೊಂದಿಗೆ, ಜಾಗದ ಉಳಿತಾಯ, ಆದಾಯ ಹೆಚ್ಚಳವೂ ಸಾಧ್ಯವಾಗುತ್ತದೆ ಎಂಬುದು ರುದ್ರಪ್ಪ ವಿವರಣೆ. ಮುಧೋಳ ಮೂಲದ ಲಕ್ಷ್ಮೀಬಾಯಿಯವರ ತಂದೆ ಭೀಮಪ್ಪ ಬಹುದೊಡ್ಡ ಕೃಷಿಕರು. ಇಂದಿಗೂ ಮುಧೋಳದಲ್ಲಿ ಬಳಿವಳಿಯಾಗಿ ಬಂದ ೨೫ ಎಕರೆ ಜಮೀನು ಲಕ್ಷ್ಮೀಬಾಯಿಯವರ ಹೆಸರಿನಲ್ಲಿದೆ.

ಮದುವೆಯಾಗಿ ಬಂದದ್ದೂ ಕೃಷಿ ಮನೆ ತನಕ್ಕೇ. ರುದ್ರಪ್ಪ ಅವರ ತಂದೆಯ ೨೫ ತಲೆಮಾರು ಕೃಷಿಯನ್ನು ನಡೆಸಿಕೊಂಡು ಬಂದ ದಾಖಲೆ ಸ್ಥಳೀಯ ಹೆಳವರ ಬಳಿ ಸಿಗುತ್ತದೆ. ರುದ್ರಪ್ಪನವರ ಕೈಗೆ ಕೃಷಿ ಹಸ್ತಾಂತರವಾದ ನಂತರವಂತೂ ಸಾವಯವ ಪದ್ಧತಿಯಲ್ಲಿ ಕ್ರಾಂತಿಯೇ ನಡೆದು ಹೋಗಿದೆ. ಈಗ ೪೯ರ ವಯಸ್ಸಿನಲ್ಲಿರುವ ರುದ್ರಪ್ಪನವರ ಇಡೀ ಕುಟುಂಬ ಕೃಷಿಯ ತೊಡಗಿಕೊಂಡಿದೆ. ಬದನೆ ಮಾತ್ರವಲ್ಲ, ಕಬ್ಬು, ಅರಿಶಿನ ಹಾಗೂ ಗೋಽಯ ಹೊಸ ತಳಿಗಳನ್ನು ಸಂಶೋಧಿಸಿರುವ ರುದ್ರಪ್ಪ ಇವಕ್ಕೆ ರಾಷ್ಟ್ರೀಯ ಪುರಸ್ಕಾರವನ್ನೂ ಪಡೆದಿದ್ದಾರೆ.

‘ಇಪ್ಪತ್ತೈದು ವರ್ಷಗಳ ಹಿಂದೆ ಅಮೆರಿಕನ್ ಕೃಷಿ ಅಧ್ಯಯನ ಪ್ರವಾಸಿಯೊಬ್ಬ ಹೊಲಕ್ಕೆ ಭೇಟಿ ನೀಡಿ, ಆಗಿದ್ದ ಸೂರ್ಯಕಾಂತಿ
ಬೆಳೆಯ ಸಮೃದ್ಧತೆಯನ್ನು ಕಂಡು ಅಚ್ಚರಿಪಟ್ಟಿದ್ದೇ ಮುಂದಿನ ಪ್ರಯೋಗಗಳಿಗೆ ಪ್ರೇರಣೆಯೊದಗಿಸಿತು. ಅಂದಿನಿಂದ ಇಂದಿ
ನವರೆಗೂ ಪ್ರತಿ ವರ್ಷ ಒಂದಲ್ಲ ಒಂದು ಬದಲಾವಣೆಯೊಂದಿಗೆ ನಿರಂತರ ಪ್ರಯೋಗಗಳನ್ನು ನಡೆಸಿಕೊಂಡೇ ಬಂದಿದ್ದೇವೆ.
ಇಂದಿನ ತುಮಕೂರು ಜಿಽಕಾರಿ ರಾಕೇಶ್ ಕುರ್ಮಾ ಸ್ವತಃ ನನ್ನ ಹೊಲಕ್ಕೆ ಭೇಟಿ ನೀಡಿ, ಇಲ್ಲಿನ ಪದ್ಧತಿಯನ್ನು ಆಧರಿಸಿಯೇ
ಪಿಎಚ್. ಡಿ ಪದವಿ ಗಳಿಸಿರುವುದು ಹೆಮ್ಮೆ’ ಎನ್ನುವ ರುದ್ರಪ್ಪ, ನಿಸರ್ಗದ ವಿರುದ್ಧ ಹೋಗುವುದು ಎಂದಿಗೂ ಸುಸ್ಥಿರ,
ಆರೋಗ್ಯಕಾರಿ ಕೃಷಿಯಾಗುವುದಿಲ್ಲ. ಅದರ ಜತೆ ಜತೆಗೇ ಕೃಷಿಯೂ ಸಾಗಬೇಕು ಎಂಬ ಕಿವಿಮಾತು ಹೇಳಲು
ಮರೆಯುವುದಿಲ್ಲ.