ಬಾಲಸೋರ್ ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಒಂದು ಸಾವು ದೃಢ ಪಟ್ಟಿದ್ದು, ಮೃತರ ಕುಟುಂಬಕ್ಕೆ 50,000 ರೂ.ಗಳ ಪರಿಹಾರವನ್ನು ಅನುಮೋದಿಸಲಾಗಿದೆ.
ಸಾವನ್ನಪ್ಪಿದ ಇತರ 18 ಮಂದಿ ಬಿಸಿಲ ತಾಪದಿಂದಲೇ ಸಾವನ್ನಪ್ಪಿದ್ದಾ ರೆಯೇ ಎಂದು ತಿಳಿದುಬಂದಿಲ್ಲ. ಇದಕ್ಕಾಗಿ ಆಯಾ ಜಿಲ್ಲೆಗಳ ತಹಸೀಲ್ದಾರ್ ಹಾಗೂ ವೈದ್ಯಾಧಿಕಾರಿಗಳು ಜಂಟಿ ತನಿಖೆ ನಡೆಸಿ ಸಾವಿನ ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ.
ಒಡಿಶಾ ಸದ್ಯ ಬಿಸಿಗಾಳಿಯ ಹಿಡಿತದಲ್ಲಿದೆ. ಈ ಬೇಸಿಗೆಯಲ್ಲಿ ರಾಜ್ಯದಲ್ಲಿ ಶಾಖದ ಅಲೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.