ನನ್ನ ತಂಗಿ ತೋರಿಸು ತ್ತಿದ್ದ ಅನುಮತಿ ಪತ್ರದಲ್ಲಿ ನನ್ನ ಹೆಸರು ಅಥವಾ ಸಹಿ ಎಲ್ಲಿಯೂ ಇರಲಿಲ್ಲ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲು ಬಯಸುತ್ತೇನೆ.
‘ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ನಿಮ್ಮ ಸಮಸ್ಯೆಗೆ ಅವರ ಬಳಿ ಪರಿಹಾರವಿದೆ ಎಂದು ನಾನು ಎಲ್ಲ ಕುಸ್ತಿಪಟುಗಳಿಗೆ ಪದೇ ಪದೇ ತಿಳಿಸಿದ್ದೆ. ಆದರೆ ಅವರು ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ, ದೀಪೇಂದರ್ ಹೂಡಾ ಮತ್ತು ಇತರರ ನೆರವು ಕೋರಿದ್ದರು’ ಎಂದಿದ್ದಾರೆ.
ನೂತನ ಸಂಸತ್ ಕಟ್ಟಡದ ಉದ್ಘಾಟನಾ ದಿನದಂದು ಪ್ರತಿಭಟನೆ ನಡೆಸಿ, ತಾವು ಗೆದ್ದಿರುವ ಪದಕಗಳನ್ನು ಗಂಗೆಯಲ್ಲಿ ಮುಳುಗಿಸುವುದಾಗಿ ಬೆದರಿಕೆಯೊಡ್ಡುವ ಮೂಲಕ ದೇಶದ ಪ್ರತಿಷ್ಠೆಗೆ ಕಳಂಕವನ್ನುಂಟು ಮಾಡಿದ್ದಾರೆಂದು ಬಬಿತಾ ಕುಸ್ತಿಪಟು ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂತನ ಸಂಸತ್ ಕಟ್ಟಡದ ಉದ್ಘಾಟನೆಯ ದಿನ ನಿಮ್ಮ ಪ್ರತಿಭಟನೆ ಮತ್ತು ಗಂಗೆಯಲ್ಲಿ ಪದಕಗಳನ್ನು ಎಸೆಯುವ ಬೆದರಿಕೆ ದೇಶಕ್ಕೆ ಮುಜುಗರವನ್ನುಂಟು ಮಾಡಿದೆ. ನೀವು ಕಾಂಗ್ರೆಸ್ ನ ಕೈಗೊಂಬೆಗಳಾಗಿದ್ದೀರಿ ಎನ್ನುವುದು ದೇಶದ ಜನರಿಗೆ ಅರ್ಥ ವಾಗಿದೆ. ನೀವು ನಿಮ್ಮ ನಿಜವಾದ ಉದ್ದೇಶವನ್ನು ತಿಳಿಸುವ ಸಮಯವು ಈಗ ಬಂದಿದೆ’ ಎಂದು ಬಬಿತಾ ಟ್ವೀಟಿಸಿದ್ದಾರೆ.