Friday, 22nd November 2024

ಮುಕ್ತವಾಗಿ ಮಾಂಸ ಮಾರಾಟ ರದ್ದು: ಯುಪಿ ಸರ್ಕಾರ

ಕ್ನೋ: ಕನ್ವರ್‌ ಯಾತ್ರೆಯ ಮಾರ್ಗಗಳಲ್ಲಿ ಮುಕ್ತವಾಗಿ ಮಾಂಸ ಮಾರಾಟ ರದ್ದು ಮಾಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ಹಬ್ಬದ ಸೀಸನ್‌ಗೆ ಮುನ್ನ ಪೊಲೀಸ್ ಕಮಿಷನರ್‌, ವಿಭಾಗೀಯ ಕಮಿಷನರ್‌, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಈ ಸಂಬಂಧ ನಿರ್ದೇಶನಗಳನ್ನು ನೀಡಿದ್ದಾರೆ.

ಈ ಬಾರಿ ಅಧಿಕ ಶ್ರಾವಣ ಇರುವ ಕಾರಣಕ್ಕೆ 8 ಸೋಮವಾರಗಳು ಬರಲಿವೆ. ಶಿವಭಕ್ತರಿಗೆ ಶ್ರಾವಣ ಮಾಸ ಬಹಳ ಮುಖ್ಯ. ಈ ಅವಧಿಯಲ್ಲಿ ಶ್ರಾವಣಿ ಶಿವರಾತ್ರಿ, ನಾಗಪಂಚಮಿ, ರಕ್ಷಾಬಂಧನ ಹಬ್ಬಗಳನ್ನು ಆಚರಿಸಲಾಗುವುದು.

ಪವಿತ್ರ ಮಾಸ ಶ್ರಾವಣದಲ್ಲಿ ಜುಲೈ 4ರಿಂದ ಸಾಂಪ್ರದಾಯಿಕ ಕನ್ವರ್ ಯಾತ್ರೆ ಆರಂಭ ವಾಗಲಿದ್ದು, ಇದಕ್ಕೂ ಮುನ್ನ ಜೂ.29ರಂದು ಬಕ್ರಿದ್‌ ಆಚರಣೆಯಾಗಲಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಬಾರಿ ಸೂಕ್ಷ್ಮವಾಗಿರುವುದು ಸ್ಪಷ್ಟ. ನಾವು ನಿರಂತರವಾಗಿ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.