ರಾಜಸ್ಥಾನದಲ್ಲಿ ವಿದೇಶಿ ಮಹಿಳಾ ಪ್ರವಾಸಿಯನ್ನು ಅನುಚಿತವಾಗಿ ಸ್ಪರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಜಸ್ಥಾನದ ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವ್ಯಕ್ತಿ ಮಹಿಳೆಯ ಭುಜ-ಎದೆ ಮೇಲೆ ಕೈ ಹಾಕುವ ಮೊದಲು ” ಇಟ್ಸ್ ಮೈ ಪ್ಲಸರ್’’ ಎಂದು ಹೇಳುತ್ತಿದ್ದಾನೆ. ಹಾಗೆ ಸಂತೋಷ ಎನ್ನುತ್ತಲೇ ಮತ್ತೊಂದು ಕಡೆಯಿಂದ ಮಹಿಳಾ ಪ್ರವಾಸಿಯ ಇನ್ನೊಂದು ತೋಳನ್ನು ಹಿಡಿಯುತ್ತಾನೆ. ಒಂದು ಕ್ಷಣದಲ್ಲಿ ಅವರ ದೇಹದ ಇತರ ಭಾಗಗಳನ್ನು ಸ್ಪರ್ಶಿಸುವ ಯತ್ನ ಮಾಡುತ್ತಾನೆ. ಈ ವಿಡಿಯೋಗೆ ಟ್ವೀಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷರ ಆಕ್ರೋಶ ಈ ವಿಡಿಯೋವನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.