Thursday, 12th December 2024

ವಿಧಾನಮಂಡಲ ಅಧಿವೇಶನವೆಂದರೆ ಶಾಸಕರ ಹಾರಾಟ, ಚೀರಾಟವಲ್ಲ

ಎರಡು ದಿನಗಳ ಬಿಡುವಿನ ನಂತರ ಇಂದಿನಿಂದ ಮತ್ತೆsessin ಶುರುವಾಗಲಿದೆ. ಕಳೆದ ಸೋಮವಾರದಿಂದ ಶುಕ್ರವಾರದವರೆಗೆ ನಡೆದ ಅಧಿವೇಶನವು ಕಿರುಚಾಟ, ಹಾರಾಟದಲ್ಲೇ ವ್ಯರ್ಥವಾಗಿದೆ. ಅದರಲ್ಲೂ ನೂತನ ಶಾಸಕರು ಸಭಾಧ್ಯಕ್ಷರ ಮಾತಿಗೆ ಗೌರವ ಕೊಡದೆ ಕಿರುಚಾಡುತ್ತಿದ್ದನ್ನು ಇಡೀ ರಾಜ್ಯವೇ ಗಮನಿಸಿದೆ.

ಇಂತಹ ಜನಪ್ರತಿನಿಧಿಗಳ ಅಪ್ರಬುದ್ಧ ನಡವಳಿಕೆಯಿಂದ ಶಾಸನಸಭೆ ತನ್ನ ಗಾಂಭೀ ರ್ಯವನ್ನು ಕಳೆದುಕೊಂಡಂತೆ ಕಾಣುತ್ತಿದೆ. ಹೊಸ ಶಾಸಕರಿಗೆ ಸದನದ ನಡಾವಳಿಗಳ ಬಗ್ಗೆ ತರಬೇತಿ ನೀಡಿದ್ದು ಸಂಪೂರ್ಣ ವ್ಯರ್ಥವಾದಂತಿದೆ. ಈ ಹಿಂದೆ ಹಿಂದೆ ಡಿ.ದೇವರಾಜ ಅರಸು, ಶಾಂತವೇರಿ ಗೋಪಾಲ ಗೌಡ, ಜೆ.ಎಚ್ .ಪಟೇಲ್, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅಂತಹವರ ಅರ್ಥಪೂರ್ಣ ಮಾತು ಗಳನ್ನು ಕೇಳಲು ವಿಧಾನಸಭಾ ಗ್ಯಾಲರಿ ತುಂಬಿರುತ್ತಿತ್ತು.

ಇಂತಹ ಅನೇಕ ಮಹನೀಯರಿಂದ ಸಭೆಗೆ ಕಳೆ ಬರುತ್ತಿತ್ತು. ರಾಜ್ಯದ ಹಿತ ಕಾಪಾಡುವ ಜವಾಬ್ದಾರಿಯುಳ್ಳ ಈಗಿನ ಪೀಳಿಗೆಯ ಶಾಸಕರ ಈ ವರ್ತನೆ ನೋಡಿದರೆ ಅಚ್ಚರಿ ಯಾಗುತ್ತದೆ. ಮೊದಲ ಬಾರಿಗೆ ಚುನಾಯಿತರಾದ ಬಹುತೇಕ ಶಾಸಕರು ಅಧಿವೇಶನ ವೆಂದರೆ ಕೂಗಾಟ, ಹಾರಾಟ ಎಂದು ಭಾವಿಸಿದಂತಿದೆ. ಪ್ರತಿ ದಿನದ ಅಧಿವೇಶನಕ್ಕೂ ಲಕ್ಷಾಂತರ ರುಪಾಯಿ ತೆರಿಗೆದಾರರ ಹಣ ಖರ್ಚಾಗುತ್ತಿದೆ ಎಂಬ ಪ್ರಜ್ಞೆ ಇಲ್ಲ ದಂತಿದೆ. ಜನಪ್ರತಿನಿಧಿ ಎಂಬ ಕಾರಣಕ್ಕೆ ಕಲಾಪಕ್ಕೆ ಅಡ್ಡಿ ಮಾಡುವ ಮೊಂಡಾಟಗಳು ನಡೆಯುವುದು ಸರಿಯಲ್ಲ.

ಮೊದಲ ಬಾರಿಗೆ ಶಾಸಕರಾದವರಲ್ಲಿ ಬಹುತೇಕರು ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬಗಳಿಂದ ಬಂದವರು ಎಂಬುದನ್ನು ರಾಜ್ಯವೇ ಹೆಮ್ಮೆ ಪಟ್ಟಿದೆ. ಆ ಜನರ ನಿರೀಕ್ಷೆಗಳನ್ನು ಹುಸಿಗೊಳಿಸದೆ ಸದನದಲ್ಲಿ ಸೂಕ್ತ ಚರ್ಚೆ ಮಾಡುವ ಮೂಲಕ ತಮ್ಮ ಕ್ಷೇತ್ರದ ಜನರಿಗೆ ಗೌರವ ತಂದು ಕೊಡುವ ಕೆಲಸವನ್ನೂ ಮಾಡಬೇಕಿದೆ. ಆದ್ದರಿಂದ ಹೊಸ ಶಾಸಕರು ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಗಂಭೀರ ಮತ್ತು ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಿಕೊಂಡು, ಭವ್ಯ ಇತಿಹಾಸವುಳ್ಳ ರಾಜ್ಯ ವಿಧಾನ ಸಭೆಯ ಪರಂಪರೆಗೆ ಕುಂದು ಬಾರದಂತೆ ನಡೆದುಕೊಳ್ಳಬೇಕಿದೆ. ಇಂದಿನ ನಿಮ್ಮ ನಡೆ ಯುವಪೀಳಿಗೆಗೆ ಮಾದರಿ ಯಾಗುವಂತೆ ನಡೆದುಕೊಳ್ಳಬೇಕಿದೆ.