ಮತ್ತೊಮ್ಮೆ ಉತ್ತರ ಭಾರತಕ್ಕೆ ಪ್ರವಾಹ ವಕ್ಕರಿಸಿದೆ. ಅಂಕಿ ಅಂಶಗಳ ಪ್ರಕಾರ ೨೦೧೭ರ ಬಳಿಕ ಈವರೆಗೆ ದೇಶದಲ್ಲಿ ೭೫೦ ಮಿಲಿಯನ್ಗೂ ಹೆಚ್ಚು ಮಂದಿ ಪ್ರವಾಹದಿಂದ ಬಾಧಿತರಾಗಿದ್ದಾರೆ. ಹಿಮಾಲಯ ಶ್ರೇಣಿಯಲ್ಲಿ ಬರುವ ರಾಜ್ಯಗಳಲ್ಲಿ ವರ್ಷ ದಿಂದ ವರ್ಷಕ್ಕೆ ನೈಸರ್ಗಿಕ ಅಪಾಯದ ಸಂಭವನೀಯತೆ ಹೆಚ್ಚುತ್ತಲೇ ಸಾಗುತ್ತಿದ್ದು, ಈ ವರ್ಷ ರಾಜಸ್ಥಾನದಂಥ ಸಾಮಾನ್ಯ ಒಣ ಭೂಮಿಯೂ ನೀರಿನಡಿ ಮುಳುಗಿದೆ. ಭಾರೀ ಮಳೆಯಿಂದ ರಾಷ್ಟ್ರ ರಾಜಧಾನಿಯ ಅಕ್ಕಪಕ್ಕದ ಐದಕ್ಕೂ ಹೆಚ್ಚು ರಾಜ್ಯಗಳು ತತ್ತರಿ ಸಿದ್ದು, ಜೀವ, ಆಸ್ತಿಪಾಸ್ತಿಗಳ ಹಾನಿ ಅಂದಾಜಿಗೆ ಸಿಲುಕುತ್ತಿಲ್ಲ.
ಹಾಗೆ ನೋಡಿದರೆ ಭಾರತದ ಹವಾಮಾನವು ಮಾನ್ಸೂನ್ಗಳಿಂದ ಹೆಚ್ಚು ಪ್ರಭಾವಿತ ವಾಗಿದ್ದು, ಈ ಬಾರಿ ದಕ್ಷಿಣದ ಪ್ರದೇಶಗಳಲ್ಲಿ ಮುಂಗಾರು ಕೊರತೆ ತಲೆದೋರಿರು ವಾಗಲೇ ಉತ್ತರದ ನದಿಗಳು ಪ್ರವಾಹದಿಂದ ಉಕ್ಕೇರ್ತುತಿವೆ. ಜಲವಿಜ್ಞಾನವನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಎರಡೂ ಸನ್ನಿವೇಶಗಳಿಗೂ ಮತ್ತದೇ ಮಾನವನ ಸ್ವಯಂಕೃತ ಅಪರಾಧವೇ ಕಾರಣವಾಗಿರುವುದು ಢಾಳಾಗಿ ಕಾಣುತ್ತಿದೆ.
ಭಾರೀ ಮಳೆಗೆ ನೈಸರ್ಗಿಕ ಅಂಶಗಳ ಹೊರತಾಗಿ, ಮಾನವನ ಹಸ್ತಕ್ಷೇಪದ ಅಂಶ ಎದ್ದು ಕಾಣುತ್ತಿದೆ. ಸಾಮಾನ್ಯವಾಗಿ ಜುಲೈ ಮಧ್ಯದಲ್ಲಿ ಉತ್ತರ ಭಾರತದೆಡೆಗೆ ಮಾನ್ಸೂನ್ ಸಾಗುತ್ತದೆ. ಸೆಪ್ಟೆಂಬರ್ ಅಂತ್ಯದವರೆಗೂ ಇದರ ಆರ್ಭಟವಿದ್ದು, ಈ ಅವಧಿ ಯಲ್ಲಿ ಬಂಗಾಳದ ಉಪ-ಹಿಮಾಲಯ ಬಯಲು ಪ್ರದೇಶಗಳು, ಗಂಗಾ ಬಯಲು, ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಘಟ್ಟದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರವಾಹ ನಿರೀಕ್ಷಿತ. ಆದರೆ, ಈ ಬಾರಿ ಇದಕ್ಕೆ ವ್ಯತಿರಿಕ್ತವಾಗಿ ಮುಂಗಾರಿನ ಆರಂಭದಲ್ಲೇ ಉತ್ತರಮಧ್ಯದ ರಾಜ್ಯಗಳು ಪ್ರವಾಹಕ್ಕೀಡಾಗಲು ಪ್ರಮುಖ ಕಾರಣ ಮಾನ್ಸೂನ್ನೊಂದಿಗೆ ಡ್ಯೂಯೆಟ್ಗಿಳಿದಿರುವ ವಾಯವ್ಯ ಮಾರುತಗಳು.
Read E-Paper click here
ಪರಿಣಾಮ ಪರ್ವತದ ಇಳಿಜಾರುಗಳಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಹೆಚ್ಚಿನ ನೀರು ಬಯಲಿನ ಕಡೆಗೆ ಹರಿದು ನದಿಗಳು ಉಕ್ಕೇರಿ ಅನಾಹುತವನ್ನು ಸೃಷ್ಟಿಸಿದೆ. ಮುಂಗಾರು ಅಡಿಯಿಡುತ್ತಿರುವಾಗಲೇ ದಕ್ಷಿಣ ದಲ್ಲಿ ಅರಬ್ಬಿ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ ಎದ್ದ ವಾಯುಭಾರ ಕುಸಿತ ಇಡೀ ಮಾನ್ಸೂನ್ ವ್ಯವಸ್ಥೆಯನ್ನೇ ಏರುಪೇರು ಮಾಡಿದೆ. ಜಾಗತಿಕ ತಾಪಮಾನ ದಲ್ಲಿನ ಹೆಚ್ಚಳವೂ ಇದಕ್ಕೆ ಇನ್ನೊಂದು ಪ್ರಮುಖ ಕಾರಣ. ಈ ಬಗ್ಗೆ ತಜ್ಞರು ಸಾಕಷ್ಟು ಮುನ್ನೆಚ್ಚರಿಕೆಯನ್ನು ನೀಡಿದ್ದಾಗ್ಯೂ ಎಚ್ಚೆತ್ತುಕೊಳ್ಳದ ನಾವು ಅಪಾಯಕಾರಿ ಸನ್ನಿವೇಶಕ್ಕೆ ಸಿಲುಕಿದ್ದೇವೆ. ಪ್ರವಾಹದ ಕಾರಣಗಳು ಸ್ಪಷ್ಟವಾಗಿದ್ದರೂ ಅದರಿಂದ ಹೊರಬರುವ ಮಾರ್ಗಗಳ ಬಗ್ಗೆ ಯೋಚಿಸದಿರುವುದು ದುರದೃಷ್ಟಕರ.
ಜತೆಗೆ ಇಂಥ ನೈಸರ್ಗಿಕ ವಿಕೋಪಗಳನ್ನು ಎದುರಿಸುವ ವಿಜ್ಞಾನ ನಮಗಿನ್ನೂ ದಕ್ಕದಿರುವುದು ಇನ್ನಷ್ಟು ಅಸಹಾಯಕ ಸಂಗತಿ.
ಮಣ್ಣಿನೊಳಕ್ಕೆ ನೀರನ್ನು ಇಳಿಸುವ ತಂತ್ರದ ಮೊರೆ ಹೋಗದ ಹೊರತೂ ಇಂಥ ಅನಿರೀಕ್ಷಿತ ಆಘಾತ ತಪ್ಪಿದ್ದಲ್ಲ. ಅದಕ್ಕೆ ಸ್ವಯಂಪ್ರೇರಣೆಯಿಂದಾಗದಿದ್ದರೆ ಕಠಿಣ ಕಾನೂನಿನ ಮೂಲಕವಾದರೂ ಮುಂದಾಗಬೇಕಿದೆ.