Saturday, 21st September 2024

ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ

ಜೈಪುರ: ರಾಜಸ್ಥಾನದ ಜಯಪುರ, ಉದಯಪುರ, ಅಜ್ಮೆರ ಸಹಿತ ಇತರ ಜಿಲ್ಲೆಗಳಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಫಲಕಗಳು, ಭಿತ್ತಿಪತ್ರಗಳು ದೇವಸ್ಥಾನದ ಹೊರಗೆ ಹಾಕಲಾಗಿದೆ. ಈ ಭಿತ್ತಿಪತ್ರಗಳ ಮೇಲೆ ‘ಹಾಫ್ ಪ್ಯಾಂಟ್, ಬರ್ಮುಡಾ, ಮಿನಿ ಸ್ಕರ್ಟ್, ನೈಟ್ ಸೂಟ್, ಹರಿದಿರುವ ಜೀನ್ಸ್, ಫ್ರಾಕ್ ಧರಿಸಿ ಮಂದಿರದಲ್ಲಿ ಪ್ರವೇಶಿಸಬೇಡಿರಿ’ ಎಂದು ಬರೆಯ ಲಾಗಿದೆ.

ಜೈಪುರದಲ್ಲಿನ ಮಹಾದೇವ ದೇವಸ್ಥಾನ, ಬಿಲ್ವಾಡದಲ್ಲಿನ ಶ್ರೀ ಚಾರಭೂಜಾನಾಥ ದೇವಸ್ಥಾನ, ಸಿರೋಹಿ ಜಿಲ್ಲೆಯಲ್ಲಿನ ಶ್ರೀ ಪಾವಪುರಿ ಜೈನ ಮಂದಿರ, ಸರನೇಶ್ವರ ಮಹಾ ದೇವ ದೇವಸ್ಥಾನ ಹಾಗೂ ಪುಷ್ಕರದ ಬ್ರಹ್ಮ ದೇವಸ್ಥಾನ, ಅಜ್ಮೆರದ ಶ್ರೀ ಅಂಬಾ ಮಾತೆ ದೇವಸ್ಥಾನ, ಉದಯಪುರದ ಶ್ರೀ ಜಗದೀಶ ದೇವಸ್ಥಾನ ಮುಂತಾದ ದೇವಸ್ಥಾನ ಗಳಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ.

ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿ ಮಾಡುವ ಬಗ್ಗೆ ಬಹಳಷ್ಟು ದೇವಸ್ಥಾನ ಆಡಳಿತ ಮಂಡಳಿಗಳು, ದೇವಸ್ಥಾನಗಳು ಪ್ರವಾಸಿ ತಾಣವಲ್ಲ. ದೇವಸ್ಥಾನದಲ್ಲಿ ಬರುವ ಭಕ್ತರು ಸಾಂಪ್ರದಾಯಿಕ ಉಡುಪು ಧರಿಸಿ ಬರಬೇಕು. ದೇವಸ್ಥಾನ ಇದು ಶ್ರದ್ಧೆಯ ಸ್ಥಾನವಾಗಿದೆ. ಜೊತೆಗೆ ಪ್ರತಿಯೊಬ್ಬರ ಶ್ರದ್ಧೆ ಜೋಡಿಸಿರುತ್ತದೆ. ಆದ್ದರಿಂದ ಈ ವಿಷಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕವಾಗಿದೆ.