ಇಂಡಿ: ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ೨೪*೭ ಕುಡಿಯುವ ನೀರಿನ ಬಿಲ್ ಹಾಗೂ ಪುರಸಭೆಯ ಮಳಿಗೆಗಳ ಬಾಡಿಗೆ ಬಿಲ್ ವಸೂಲು ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಪುರಸಭೆಗೆ ಬರಬೇಕಾದ ತೆರಿಗೆ, ಬಿಲ್ ಬರದೆ ಇದ್ದರೆ, ಪಟ್ಟಣದಲ್ಲಿ ಅಭಿವೃದ್ದಿ ಕೆಲಸ ಗಳನ್ನು ಮಾಡುವುದು ಹೇಗೆ ? ಸಾರ್ವಜನಿಕ ರಿಗೆ ಪುರಸಭೆಯಿಂದ ಮೂಲಸೌಲಭ್ಯ ಒದಗಿಸುವುದು ಆದ್ಯ ಕರ್ತವ್ಯ. ಕರ ವಸೂಲಾತಿ ಚುರುಕುಗೊಳಿಸಬೇಕು ಎಂದು ಎಸಿ ಹಾಗೂ ಪುರಸಭೆ ಆಡಳಿತಾಧಿಕಾರಿ ಹಬೀದ ಗದ್ಯಾಳ ಪುರಸಭೆ ಅಧಿಕಾರಿಗಳಿಗೆ ಸೂಚಿಸಿ ದರು.
ಅವರು ಶುಕ್ರವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಕುಡಿಯುವ ನೀರು ಹಾಗೂ ಪಟ್ಟಣದ ಆರಾಧ್ಯ ದೇವರಾದ ಹುಸೇನ ಬಾಷಾ ದೇವರ ಜಾತ್ರಾ ನಿಮಿತ್ಯ ಕರೆದ ತುರ್ತು ಸಭೆಯಲ್ಲಿ ಮಾತನಾಡಿದರು.
ಪಟ್ಟಣದ ಎಲ್ಲ ವಾರ್ಡಗಳ ಮನೆಗಳಿಗೆ ಶುದ್ದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಆದರೆ ಹಲವು ವಾರ್ಡಗಳಲ್ಲಿನ ಮನೆಗಳ ಮುಂದೆ ನಲ್ಲಿ ಮೂಲಕ ಯಾವಾಗಲೂ ನೀರು ಸೊರಿಕೆಯಾಗುತ್ತಿದ್ದು, ಅನಾವಶ್ಯಕವಾಗಿ ನೀರು ಪೊಲು ಆಗದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.
ಪಟ್ಟಣದಲ್ಲಿನ ಅಂಗಡಿ,ಮನೆ,ನೀರು ಸೇರಿದಂತೆ ಇತರೆ ಮೂಲಗಳ ತೆರಿಗೆ ಜಮಾ ಮಾಡುವುದು ಪುರಸಭೆಯ ಕರ್ತವ್ಯ. ಆದರೆ ತೆರಿಗೆ ವಸೂಲು ಮಾಡದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು.ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಪ್ರತಿ ನಿತ್ಯ ಕರ್ತವ್ಯಕ್ಕೆ ಹಾಜರಾ ಗಬೇಕು. ಹಾಜರಾತಿಗಾಗಿ ಬಯೋಮೇಟ್ರಿಕ್(ಥಂಬ್ ನೀಡುವುದು) ಕಡ್ಡಾಯವಾಗಬೇಕು.ಬಯೋಮೆಟ್ರಿಕ್ ಯಂತ್ರ ಅಳವಡಿಸ ಬೇಕು. ಯಾವ ವಾರ್ಡಿನಲ್ಲಿ ಪುರಸಭೆ ವಾಹನಗಳು ಕೆಲಸ ಮಾಡುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ಪುರಸಭೆ ವಾಹನಗಳಿಗೆ ಜಿಪಿಎಸ್ ಅಳವಡಿಸ ಬೇಕು ಎಂದು ಹೇಳಿದರು.
ಪಟ್ಟಣದ ಎಲ್ಲ ವಾರ್ಡಗಳಲ್ಲಿ ಇರುವ ಚರಂಡಿಗಳು ನಿಗದಿತ ಸಮಯದಲ್ಲಿ ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕು. ಸಭೆಯಲ್ಲಿ ಚರ್ಚೆ ಮಾಡಿದ ವಿಷಯಗಳು ಚರ್ಚೆಯಾಗಿಯೇ ಉಳಿಯದೆ, ಅಭಿವೃದ್ದಿಯಾಗಬೇಕು. ಇದಕ್ಕೆಲ್ಲ ಪುರಸಭೆಯ ಎಲ್ಲ ಸದಸ್ಯರ ಸಹಕಾರ ಮುಖ್ಯ ಎಂದು ಹೇಳಿದರು.
ಪುರಸಭೆಯ ಜಟ್ಟಿಯಂತ್ರ(ಒಳಚರ೦ಡಿ ಸ್ವಚ್ಚಗೊಳಿಸುವ) ವಾಹನ ಮೂರು ವರ್ಷವಾದರೂ ಕೆಲಸಕ್ಕೆ ಬಾರದೆ ತುಕ್ಕು ಹಿಡಿದು ಕೊಳೆಯುತ್ತಿದೆ. ಪಟ್ಟಣದಲ್ಲಿ ಅಳವಡಿಸಿರುವ ಒಳಚರಂಡಿ ಗುಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ. ಒಳಚರಂಡಿ ಸ್ವಚ್ಚಗೊಳಿಸಲು ಯಂತ್ರ ಇರದ ಹಾಗೆ ಆಗಿದೆ ಎಂದು ಸದಸ್ಯರು ಎಸಿ ಅವರ ಮುಂದೆ ತಮ್ಮ ಸಮಸ್ಯೆಯನ್ನು ಇಟ್ಟರು.
ಜಟ್ಟಿಯಂತ್ರ ಇಷ್ಟು ವರ್ಷ ಹೀಗೆ ಏಕೆ ನಿಂತಿದೆ.ಇದಕ್ಕೆ ಕಾರಣವೇನು.ಜಟ್ಟಿಯಂತ್ರ ತುಕ್ಕು ಹಿಡಿದು ನಿಲ್ಲಲು ಕಾರಣ ಕುರಿತು ಸಮಗ್ರ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಜಾತ್ರೆಗೆ ಮೂಲಸೌಲಭ್ಯ ಒದಗಿಸಿ: ಪಟ್ಟಣದ ಆರಾಧ್ಯ ದೇವರಾದ ಹುಸೇನಬಾಷಾ ದೇವರ ಜಾತ್ರೆ ದೊಡ್ಡಪ್ರಮಾಣದಲ್ಲಿ ಆಗುತ್ತಿರುವುದರಿಂದ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದAತೆ ಪಟ್ಟಣದ ಎಲ್ಲ ರಸ್ತೆಗಳಲ್ಲಿ ವಿದ್ಯುತ್ ದೀಪ ಅಳವಡಿಸ ಬೇಕು. ದರ್ಗಾದ ಬಳಿ ಬದ್ರತೆಗಾಗಿ ಸಿಸಿ ಟಿವಿ ಅಳವಡಿಸಬೇಕು. ಶೌಚಾಲಯ ಆಗಬೇಕು. ಸ್ವಚ್ಚತೆ ಕಾಪಾಡಬೇಕು ಎಂದು ಸೂಚಿಸಿದರು. ಜಾತ್ರೆಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದAತೆ ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಎಸಿ ಹಾಗೂ ಪುರಸಭೆ ಆಡಳಿತಾಽಕಾರಿ ಆಗಿ ಅಽಕಾರ ಸ್ವೀಕರಿಸಿದ ಎಸಿ ಹಬೀದ ಗದ್ಯಾಳ ಅವರನ್ನು ಪುರಸಭೆಯಿಂದ ಸನ್ಮಾನಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಲಕ್ಷಿ÷್ಮÃಶ,ಕಂದಾಯ ಅಧಿಕಾರಿ ಪ್ರವೀಣ ಸೋನಾರ,ಆರೋಗ್ಯ ನಿರೀಕ್ಷಕ ಎಲ್.ಎಸ್.ಸೋಮನಾಯಕ, ಅಕೌಂಟೆ೦ಟ್ ಅಸ್ಲಂ ಖಾದಿಮ, ಹುಚ್ಚಪ್ಪ ಶಿವಶರಣ, ಸದಸ್ಯರಾದ ಭೀಮನಗೌಡ ಪಾಟೀಲ, ದೇವೆಂದ್ರ ಕುಂಬಾರ,ಅನೀಲಗೌಡ ಬಿರಾದಾರ,ಸತೀಶ ಕುಂಬಾರ,ಸುದೀರ ಕರಕಟ್ಟಿ,ಭೀಮಾಸಂಕರ ಮೂರಮನ,ಅಸ್ಲಮ ಕಡಣಿ, ಶಬ್ಬಿರ ಖಾಜಿ, ಅಯುಬ ಬಾಗವಾನ, ಜಹಾಂಗಿರ ಸೌದಾಗರ, ಮುಸ್ತಾಕ ಇಂಡಿಕರ, ಉಮೇಶ ದೇಗಿನಾಳ, ಲಿಂಬಾಜಿ ರಾಠೋಡ, ಸಚಿನ ಬೊಳೆಗಾಂವ, ಶ್ರೀಶೈಲ ಪೂಜಾರಿ ಮೊದಲಾದವರು ಸಭೆಯಲ್ಲಿ ಇದ್ದರು.