ಮೊಹಮ್ಮದ್ ಶಮಿ ಅವರ ಅಲಭ್ಯದಿಂದ ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವಿ ಗಳಿಲ್ಲದ ಕಾರಣ ಸಿರಾಜ್ ಅವರು ಭಾರತ ತಂಡದ ಬೌಲಿಂಗ್ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಬಿಸಿಸಿಐ ದಿಢೀರ್ ಆಗಿ ಸಿರಾಜ್ಗೆ ವಿಶ್ರಾಂತಿ ನೀಡಲು ನಿರ್ಧ ರಿಸಿದೆ.
ಒಂದೊಮ್ಮೆ ಸಿರಾಜ್ ಅವರ ಅನುಪಸ್ಥಿತಿಯಲ್ಲಿ ಉಮ್ರಾನ್ ಮಲಿಕ್, ಜಯ್ದೇವ್ ಉನಾ ದ್ಕತ್ ಮತ್ತು ಮುಖೇಶ್ ಕುಮಾರ್ ಅವರು ಭಾರತದ ಬೌಲಿಂಗ್ ನಿರ್ವಹಿಸಲಿದ್ದಾರೆ.
ಸಿರಾಜ್ ಅವರು ಕಳೆದ ಒಂದು ವರ್ಷದಿಂದ ಸತತವಾಗಿ ಕ್ರಿಕೆಟ್ ಆಡುತ್ತಲೇ ಬರುತ್ತಿದ್ದಾರೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಎಲ್ಲ ದೃಷ್ಟಿಯಿಂದ ಸಿರಾಜ್ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ಮುಂದಾಗಿದೆ. ಹೀಗಾಗಿ, ಸಿರಾಜ್ ಅವರು ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯ ವಿರುದ್ಧ ಗೋಲ್ಡನ್ ಡಕ್ ಹ್ಯಾಟ್ರಿಕ್ ಸಂಕಟ ಅನುಭವಿಸಿದ್ದ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿಯೂ ವೈಫಲ್ಯ ಕಂಡರೆ ಏಕದಿನ ವಿಶ್ವಕಪ್ಗೆ ಅವರ ಆಯ್ಕೆ ಕಷ್ಟಸಾಧ್ಯ. ಗಾಯಾಳು ಶ್ರೇಯಸ್ ಅಯ್ಯರ್ ಅವರು, 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬುದು. ಹೀಗಾಗಿ ವಿಂಡೀಸ್ ವಿರುದ್ಧದ ಸರಣಿ ಸೂರ್ಯ ಪಾಲಿಗೆ ಅಗ್ನಿಪರೀಕ್ಷೆ.
364 ರನ್ ಇಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಇಂಗ್ಲೆಂಡ್ ತಂಡ ಈ ಮೊತ್ತವನ್ನು ಬಾರಿಸಿತ್ತು. ಇಲ್ಲಿನ ಎವರೇಜ್ ರನ್ ಗಳಿಕೆ 229. ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.