ಗುಬ್ಬಿ: ರೈತರನ್ನು ಮತ್ತು ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗುಬ್ಬಿ ತಾಲೂಕು ಘಟಕ ಹಾಗೂ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ್ ದಿವಸ್ ಮತ್ತು ಸೈನಿಕ ಮಾಹಿತಿ ಹಾಗೂ ತರಬೇತಿ ಕೇಂದ್ರದ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ರೈತರು ಹಾಗೂ ಸೈನಿಕರು ಈ ದೇಶದ ದೊಡ್ಡ ಆಸ್ತಿಯಾಗಿದ್ದಾರೆ ಅವರಿಬ್ಬರನ್ನು ಗೌರವಿಸಿವುದು ನಮ್ಮೆಲ್ಲರ ಕರ್ತವ್ಯ ವಾಗಿದೆ.
ಸಾವಿರಾರು ಮೀಟರ್ ಎತ್ತರದ ಭಾಗದಲ್ಲಿ ನಿಂತು ಯುದ್ಧ ಮಾಡುವುದು ನೆನಪಿಸಿ ಕೊಂಡರೆ ಮೈ ಜುಮ್ಮೆನ್ನುತ್ತದೆ ಮಳೆ ಗಾಳಿ ಚಳಿ ಎನ್ನದೆ ಎಲ್ಲಾ ಕಾಲದಲ್ಲೂ ದೇಶದ ರಕ್ಷಣೆಗೆ ನಿಂತಿರುವ ನಿಮ್ಮಗಳಿಗೆ ಅದೆಷ್ಟೇ ಗೌರವ ಸಲ್ಲಿಸಿದರು ಚಿಕ್ಕದಾಗಿ ಇರುತ್ತದೆ. ರೈತರಿಗೆ ಹಾಗೂ ಸೈನಿಕರಿಗೆ ಭವನ ನಿರ್ಮಾಣ ಮಾಡಲು ಜಾಗ ಸಿ ಎ ಸೈಟ್ ನೀಡಿ ಭವನ ಕಟ್ಟುವು ದಕ್ಕೆ ಎಲ್ಲಾ ರೀತಿಯ ಸಹಕಾರ ಮಾಡುತ್ತೇನೆ ಮತ್ತು ಮಾಜಿ ಸೈನಿಕರಿಗೆ ಸರಕಾರದ ವತಿಯಿಂದ ಭೂಮಿ ಸಹ ನೀಡಲು ಬದ್ಧವಾ ಗಿದ್ದೇವೆ ಎಂದು ತಿಳಿಸಿದರು.
ಮುಖಂಡ ವಿನಯ್ ಬಿದರೆ ಮಾತನಾಡಿ ಕಾರ್ಗಿಲ್ ನಂತಹ ದುರ್ಗಮ ಪ್ರದೇಶದಲ್ಲಿ ನಮ್ಮ ಸೈನಿಕರು ತಮ್ಮ ಪ್ರಾಣವನ್ನು ತೆತ್ತು ದೇಶವನ್ನು ಉಳಿಸಿರುವ ಮಹಾನ್ ವೀರರಾಗಿದ್ದಾರೆ 24 ವರ್ಷಗಳ ಹಿಂದೆ ನಡೆದಂತಹ ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಕ್ಕೂ ಹೆಚ್ಚು ಸೈನಿಕರು ವೀರ ಮರಣ ಹೊಂದಿರುವುದು ನೋವಿನ ಸಂಗತಿಯಾಗಿದೆ ಇಂದು ಇಡೀ ದೇಶದಾದ್ಯಂತ ಕಾರ್ಗಿಲ್ ವಿಜಯ ದಿವಸ ಆಚರಿಸುವ ಮೂಲಕ ಅವರ ನೆನಪು ಹಾಗೂ ಸೈನ್ಯಕ್ಕೆ ಒಂದು ಶಕ್ತಿ ನೀಡಲು ಇಡೀ ಭಾರತ ಬದ್ಧವಾಗಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಸೈನಿಕರಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಬೇಕಾ ಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಾಲುಕ್ಯ ಆಸ್ಪತ್ರೆ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ ಆರತಿ, ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಿಪಿಐ ಗೋಪಿನಾಥ್, ನಿಕಟ ಪೂರ್ವ ಅಧ್ಯಕ್ಷ ಅಣ್ಣಪ್ಪ ಸ್ವಾಮಿ,ರೈತ ಸಂಘದ ವೆಂಕಟೇಗೌಡ, ಕಮಾಂಡೆಂಟ್ ದಿನೇಶ್, ತಾಲೂಕು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಸೇರಿದಂತೆ ನಿವೃತ್ತ ಸೈನಿಕರು ಅವರ ಕುಟುಂಬದವರು ಭಾಗಿಯಾಗಿದ್ದರು.