ನವದೆಹಲಿ: ದೇಶಕ್ಕಾಗಿ ಮಡಿದ ವೀರ ಯೋಧರ ಸ್ಮರಣಾರ್ಥ ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿ ಕೊಳ್ಳಲಾಗಿರುವ ‘ಮೇರಿ ಮಾಠಿ ಮೇರಾ ದೇಶ್’ ಅಭಿಯಾನಕ್ಕೆ ದೇಶದಾದ್ಯಂತ ಇಂದು ಚಾಲನೆ ಸಿಗಲಿದೆ.
ಈ ಅಭಿಯಾನಕ್ಕೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಕಲ ಸಿದ್ಧತೆ ನಡೆಸಿದ್ದು, ಇಂದಿನಿಂದ ಆಗಸ್ಟ್ 30ರ ವರೆಗೆ ಅಭಿಯಾನ ನಡೆಯಲಿದೆ.
ಈ ಅಭಿಯಾನದಲ್ಲಿ ವೀರಯೋಧರನ್ನು ಸ್ಮರಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತದೆ.
ಹುತಾತ್ಮ ಯೋಧರ ಸ್ಮರಣಾರ್ಥವಾಗಿ ದೇಶದ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನ ಸ್ಥಾಪಿಸುವುದರ ಜೊತೆಗೆ ಅಭಿಯಾನದ ವೇಳೆ ‘ಅಮೃತ ಕಲಶ’ ಯಾತ್ರೆಯನ್ನೂ ಸಹ ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ನಾನಾ ಮೂಲೆಗಳಿಂದ ದೆಹಲಿಗೆ 7500 ಕಲಶಗಳಲ್ಲಿ ಮಣ್ಣನ್ನು ಸಾಗಿಸಲಾಗುತ್ತದೆ. ಈ ಪ್ರಯಾಣದಲ್ಲಿ ಮಣ್ಣಿನ ಜೊತೆಗೆ ದೇಶದ ವಿವಿಧ ಪ್ರದೇಶಗಳ ಸಸಿಗಳನ್ನೂ ಸಹ ಒಯ್ಯಲಾಗುವುದು. ಈ ಎರಡೂ ಅಂಶಗ ಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ’ ರಚಿಸಲು ಬಳಸಲಾಗುತ್ತದೆ, ಇದು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಭವ್ಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಆಗಸ್ಟ್ 30ರ ವೇಳೆಗೆ ದೆಹಲಿಗೆ ತಲುಪುವುದರ ಮೂಲಕ ಈ ಅಭಿಯಾನ ಮುಕ್ತಾಯವಾಗಲಿದೆ.
ಪ್ರಧಾನಿಯವರು ಇತ್ತೀಚೆಗೆ ಆಕಾಶವಾಣಿಯಲ್ಲಿ ತಮ್ಮ ಮನ್ ಕಿ ಬಾತ್ ಪ್ರಸಾರದ ಸಂದರ್ಭದಲ್ಲಿ ಅಮೃತ್ ಮಹೋತ್ಸವದ ಆಚರಣೆಗಳೊಂದಿಗೆ ಹುತಾತ್ಮರಾದ ವೀರ ಪುರುಷ ಮತ್ತು ಮಹಿಳೆಯರನ್ನು ಗೌರವಿಸುವ ದ ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.