ವಿವಿಧ ಸಮಸ್ಯೆಗಳನ್ನು ಹೊತ್ತು ಜನಸಾಮಾನ್ಯರು ಮುಖ್ಯಮಂತ್ರಿಯವರ ಮನೆ ಕದ ತಟ್ಟುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಮಟ್ಟದ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿ ತಿಂಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಏರ್ಪಡಿಸುವಂತೆ ಆದೇಶ ಹೊರಡಿಸಿದ್ದು ಸ್ವಾಗತಾರ್ಹ.
ಆದರೆ ಸರಕಾರದ ಬಹುತೇಕ ಆದೇಶಗಳು ಆರಂಭದಲ್ಲಿ ಪಾಲನೆಯಾದಂತೆ ದಿನಕಳೆದಂತೆ ಪಾಲನೆ ಯಾಗುವುದಿಲ್ಲ. ಈಗಾಗಲೇ ಸರಕಾರದ ಮಟ್ಟದಲ್ಲಿ ಇಂತಹ ಹಲವು ಹತ್ತು ಆದೇಶಗಳು ಹೊರಡಿಸಲಾಗಿದ್ದು, ಅವುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿದ್ದು ಬಹಳ ಕಡಿಮೆ. ಅದಕ್ಕೆ ಮುಖ್ಯ ಕಾರಣ, ಜನಪ್ರತಿನಿಧಿಗಳ ಅಲಭ್ಯತೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ. ಅಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡುವುದು ಕಡಿಮೆ, ಜನಪ್ರತಿನಿಽಗಳು ಗೈರಾದಲ್ಲಿ ಅಧಿಕಾರಿಗಳು ಕೂಡ ಜನತಾದರ್ಶನಕ್ಕೆ ಹಾಜರಾಗುವುದು ವಿರಳ. ಹೀಗಾಗಿಯೇ ಚಿಕ್ಕಪುಟ್ಟ ಸಮಸ್ಯೆಗಳನ್ನು ಹೊತ್ತು ಜನರು ಸಿಎಂ ಬಳಿಗೇ ಬರುವಂತಾಗುತ್ತದೆ.
ಆದ್ದರಿಂದ ಇನ್ಮುಂದೆ ಜನತಾದರ್ಶನದಲ್ಲಿ ಕೇಳಿಬಂದ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಅಧಿಕಾರಿಗಳೇ ಪರಿಹಾರ ಸೂಚಿಸಲು ಮುತುವರ್ಜಿ ವಹಿಸಬೇಕು. ಜನತಾ ದರ್ಶನ ನಡೆಯುವ ದಿನ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿರಬೇಕು. ಆಯಾ ಜಿಽಕಾರಿಗಳ ಜತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮನ್ವಯ ಸಾಧಿಸಿಕೊಂಡು ಜನತಾ ದರ್ಶನಕ್ಕೆ ರೂಪು ರೇಷೆ ಸಿದ್ಧಪಡಿಸಿಕೊಳ್ಳಬೇಕು. ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಬಹಳ ಜಾಗೃತೆಯಿಂದ ಹಾಗೂ ಸಹಾನುಭೂತಿಯಿಂದ ಪರಿಶೀಲಿಸಿ ನಿಗದಿತ ಕಾಲಾವಽಯೊಳಗೆ ನಿಯಮಾನುಸಾರ ಪರಿಹಾರೋಪಾಯಗಳನ್ನು ಒದಗಿಸುವ ಕುರಿತು ಅಗತ್ಯ ಕ್ರಮ ವಹಿಸಬೇಕು. ಅಲ್ಲದೆ ಹಿಂದಿನ ಜನತಾ ದರ್ಶನದಲ್ಲಿ ಕೇಳಿಬಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯೋ, ಇಲ್ಲವೋ ಎಂಬುದನ್ನು ಮುಂದಿನ ಜನತಾದರ್ಶನದಲ್ಲಿ ಪರಿಶೀಲನೆಯಾಗಬೇಕು.
ಕೆಲವು ತಾಲೂಕುಗಳು ಜಿಲ್ಲಾ ಕೇಂದ್ರಗಳಿಂದ ಬಹಳ ದೂರವಿರುವುದನ್ನು ಅರಿತ ಸರಕಾರ ೧೫ ದಿನಗಳಿ ಗೊಮ್ಮೆ ತಮ್ಮ ಜಿಲ್ಲಾ ವ್ಯಾಪ್ತಿಯ ತಾಲೂಕನ್ನು
ಆಯ್ಕೆ ಮಾಡಿಕೊಂಡು ತಾಲೂಕು ಮಟ್ಟದಲ್ಲಿ ಜನತಾದರ್ಶನ ಕಾರ್ಯಕ್ರಮ ಆಯೋಜನೆ ಮಾಡುವುದು ಕಡ್ಡಾಯ ಎಂದು ಸೂಚಿಸಿದ್ದು, ಇದು ಸರಿಯಾಗಿ ಪಾಲನೆ ಯಾಗಬೇಕು