Friday, 22nd November 2024

ಬಿಟ್‍ಕಾಯಿನ್ ವ್ಯವಹಾರ: 77 ಲಕ್ಷ ಹಣ ವಂಚನೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಬಿಟ್‍ಕಾಯಿನ್ ವ್ಯವಹಾರ ಮಾಡಲು ಹೋಗಿ 77 ಲಕ್ಷ ರೂ. ಕಳೆದು ಕೊಂಡಿರುವ ಘಟನೆ ನಡೆದಿದೆ. ಉತ್ತಮ ಆದಾಯದ ಭರವಸೆ ನೀಡಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಲಾಗಿದೆ.

77 ಲಕ್ಷ ರೂ.ಗಳನ್ನು ವಂಚಿಸಿರುವ ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಕಲ್ವಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳು ವರ್ಷದ ಏಪ್ರಿಲ್ 2 ಮತ್ತು 8 ರ ನಡುವೆ ಸಂತ್ರಸ್ತರಿಗೆ ಆಮಿಷ ಒಡ್ಡಿದರು. ಉತ್ತಮ ಆದಾಯಕ್ಕಾಗಿ ಬಿಟ್‍ಕಾಯಿನ್ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವಂತೆ ಬಲವಂತ ಪಡಿಸಿದ್ದರು.

ಸಂತ್ರಸ್ತರು ಕಾಲಕಾಲಕ್ಕೆ ಒಟ್ಟು 77,91,090 ರೂಪಾಯಿಗಳನ್ನು ಹೂಡಿಕೆ ಮಾಡಿದರು. ಆದರೆ ಯಾವುದೇ ಲಾಭ ಪಡೆಯಲಿಲ್ಲ ಮತ್ತು ಹೂಡಿಕೆ ಮಾಡಿದ ಮೊತ್ತವನ್ನೂ ಕಳೆದು ಕೊಂಡರು ಎಂದು ದೂರಲಾಗಿದೆ.