Tuesday, 26th November 2024

ಬಾಲ್ಯ ವಿವಾಹಗಳ ವಿರುದ್ಧ ಕಾರ್ಯಾಚರಣೆ: 800 ಮಂದಿ ಬಂಧನ

ಗುವಾಹಟಿ: ಅಸ್ಸಾಂನಲ್ಲಿ ಬಾಲ್ಯ ವಿವಾಹಗಳ ವಿರುದ್ಧ ರಾಜ್ಯಾದ್ಯಂತ ನಡೆಯುತ್ತಿರುವ ಎರಡನೇ ಹಂತದ ಕಾರ್ಯಾಚರಣೆಯಲ್ಲಿ ಮಂಗಳವಾರ 800ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಬಾಲ್ಯವಿವಾಹದ ವಿರುದ್ಧದ ಬೃಹತ್ ಶಿಸ್ತುಕ್ರಮದಲ್ಲಿ, ಅಸ್ಸಾಂ ಪೊಲೀಸರು 800ಕ್ಕೂ ಹೆಚ್ಚು ಆರೋಪಿಗಳನ್ನು ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಟ್ಟು 3,907 ಜನರನ್ನು ಬಂಧಿಸ ಲಾಗಿದೆ ಎಂದು ಸೆಪ್ಟೆಂಬರ್ 11 ರಂದು ಅಸ್ಸಾಂ ಅಸೆಂಬ್ಲಿಗೆ ಶರ್ಮಾ ತಿಳಿಸಿದ್ದರು.

ಬಾಲ್ಯ ವಿವಾಹವೆಂದರೆ, ಎರಡೂ ಕುಟುಂಬಗಳು ಒಪ್ಪಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಮದುವೆ ಮಾಡುವುದು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.

ಬಾಲ್ಯವಿವಾಹದ ಪದ್ದತಿ ನಿಯಂತ್ರಿಸಲು ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಬಿಹಾರ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಮದುವೆಯ ಗಂಡು ಹೆಣ್ಣಿನ ವಯಸ್ಸುಗಳನ್ನು ದೃಢ ಪಡಿಸಲು ಮತ್ತು ನ್ಯಾಯ ಬದ್ಧಗೊಳಿಸಲು ವಿವಾಹವನ್ನು ನೊಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಿದ್ದಾರೆ.