ಕೇರಳದ ತ್ರಿಶೂರ್ನ ವಿಷ್ಣುಮಾಯಾ ದೇವಸ್ಥಾನದಲ್ಲಿ ಖುಷ್ಬೂ ಅವರಿಗೆ ಸುಹಾಸಿನಿ ಪೂಜಾ ಎಂದು ಕರೆಯ ಲಾಗುವ ನಾರಿ ಪೂಜೆಯನ್ನು ನೆರವೇರಿಸಿರುವುದು ಗಮನ ಸೆಳೆದಿದೆ. ಈ ದೇವಸ್ಥಾನದ ಆಚರಣೆಗಳ ಪ್ರಕಾರ ಪ್ರತಿ ವರ್ಷ ಒಬ್ಬ ಮಹಿಳೆಯನ್ನು ಆಮಂತ್ರಿಸಿ ಶಾಸ್ತ್ರೋಕ್ತವಾಗಿ ಪಾದ ಪೂಜೆ ಮಾಡಿ ವಿಧಿವಿಧಾನ ನೆರವೇರಿಸಲಾಗು ತ್ತದೆ. ಪೂಜಾರಿಗಳು ಮಹಿಳೆಯನ್ನು ದೇವತೆಗೆ ಹೋಲಿಸಿ ಪೂಜೆ ಮಾಡುವುದು ಇಲ್ಲಿ ವಿಶೇಷ. ಈ ವೇಳೆ ಪೂಜಾರಿಗಳು ಖುಷ್ಬೂ ಅವರ ಪಾದಪೂಜೆ ಮಾಡಿ, ಮಾಲೆ ಹಾಕಿ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದ್ದಾರೆ.
‘ವಿಷ್ಣುಮಾಯಾ ದೇವಸ್ಥಾನದವರು ನಾರಿಪೂಜೆಗೆ ನನ್ನನ್ನು ಆಮಂತ್ರಿಸಿದ್ದು ನಿಜಕ್ಕೂ ನನ್ನ ಅದೃಷ್ಠ. ಇದಕ್ಕಾಗಿ ನಾನು ವಿನೀತಳಾಗಿದ್ದೇನೆ. ಇಂತಹ ಗೌರವವನ್ನು ನೀಡಿದ್ದಕ್ಕೆ ದೇವಸ್ಥಾನಕ್ಕೆ ನಮಿಸುವೆ. ಕೆಟ್ಟದನ್ನು ಅಳಿಸಿ ಒಳ್ಳೆಯದನ್ನು ಪಸರಿಸಲು ಹಾಗೂ ಶಾಂತಿ ನೆಲೆಸಲು ನಾನು ನಿರಂತರವಾಗಿ ಶ್ರಮಿಸುವೆ.
ನಾರಿಪೂಜೆಯಿಂದ ಮನುಕುಲಕ್ಕೆ ಒಳ್ಳೆಯದಾಗಲಿ’ ಎಂದು ಬರೆದುಕೊಂಡಿದ್ದಾರೆ.
1970 ರಲ್ಲಿ ಮುಂಬೈ ಮೂಲದ ಕುಟುಂಬದಲ್ಲಿ ಜನಿಸಿದ್ದ ಖುಷ್ಬೂ ಅವರ ಬಾಲ್ಯದ ಹೆಸರು ನಖತ್ ಖಾನ್. ನಟಿಯಾಗಿ, ನಿರ್ಮಾಪಕಿ, ರಾಜಕಾರಣಿ ಯಾಗಿ ಹೆಸರು ಮಾಡಿರುವ ಅವರು ಬಿಜೆಪಿ ಸೇರಿ ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಹುಭಾಷಾ ನಟಿ ಖುಷ್ಬು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಬಾಷೆಗಳಲ್ಲಿ ನಟಿಸಿದ್ದಾರೆ.