Friday, 22nd November 2024

ಉತ್ತರಾಖಂಡ್ ಸಚಿವರಿಗೆ ಕೊರೊನಾ ಸೋಂಕು ದೃಢ

ಡೆಹ್ರಾಡೂನ್: ಉತ್ತರಾಖಂಡ್ ಸಚಿವ ಹರಕ್ ಸಿಂಗ್ ರಾವತ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ವಿಧಾನಸಭಾ ಕಲಾಪ ಆರಂಭಕ್ಕೂ ಒಂದು ದಿನ ಮೊದಲು ಸಚಿವರಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸಚಿವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹರಕ್ ಸಿಂಗ್ ರಾವತ್ ರನ್ನು ತಪಾಸಣೆ ನಡೆಸಿದ ಆಸ್ಪತ್ರೆಯ ವೈದ್ಯ ಡಾ. ಆಶುತೋಷ್ ಸಯಾನ್ ಆರೋಗ್ಯ ಸ್ಥಿರವಾಗಿದೆ. ಯಾವುದೇ ರೀತಿ ಉಸಿರಾಟ ತೊಂದರೆಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಸೆ.23ರಂದೇ ಸಚಿವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಂದಿನಿಂದ ಒಂದು ವಾರ ಗೃಹ ದಿಗ್ಬಂಧನದಲ್ಲಿದ್ದರು.