ಶ್ರೀನಗರ: ಲಡಾಕ್-ಕಾರ್ಗಿಲ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. 26 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನಿರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟವು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ನ್ಯಾಷನಲ್ ಕಾನರೆನ್ಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದೆ. ಮೂರು ಸ್ಥಾನಗಳಲ್ಲಿ ಪಕ್ಷೇತರರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಪಿಡಿಪಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
ಎನ್‌ಸಿಯಿಂದ 17 ಮತ್ತು ಕಾಂಗ್ರೆಸ್‍ನ 22 ಸೇರಿದಂತೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ 17 ಸ್ಥಾನ ಗಳಲ್ಲಿ ಸ್ರ್ಪಧಿಸಿತ್ತು. ಎನ್‌ಸಿಪಿ-ಕಾಂಗ್ರೆಸ್ ಎರಡು ಪ್ರಬಲ ಧಾರ್ಮಿಕ ಸಂಸ್ಥೆಗಳ ಬೆಂಬಲವನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ.
ನ್ಯಾಷನಲ್ ಕಾನಿರೆನ್ಸ್ ನಾಯಕ ಅಬ್ದುಲ್ಲಾ, ನ್ಯಾಷನಲ್ ಕಾನಿರೆನ್ಸ್ -ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿ ಹೀನಾಯ ಸೋಲನ್ನು ಕಂಡಿದೆ. ಈ ಫಲಿತಾಂಶವು ಪ್ರಜಾಸತ್ತಾತ್ಮಕವಾಗಿದೆ. ಅಸಾಂವಿಧಾನಿಕವಾಗಿ ಜನರ ಒಪ್ಪಿಗೆಯಿಲ್ಲದೆ ರಾಜ್ಯವನ್ನು ವಿಭಜಿಸಿದ ಎಲ್ಲಾ ಶಕ್ತಿಗಳು ಮತ್ತು ಪಕ್ಷಗಳಿಗೆ ಇದು ಸಂದೇಶವನ್ನು ಕಳುಹಿಸಿದೆ.