Saturday, 23rd November 2024

ಮಲನ್ ಶತಕ, ರೂಟ್ ಅರ್ಧಶತಕ: 400 ರನ್‌ ಪಕ್ಕಾ ?

ಧರ್ಮಶಾಲಾ: ಟಾಸ್ ಗೆದ್ದಿರುವ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್​ ಮಾಡಲು ಇಂಗ್ಲೆಂಡ್​ಗೆ ಆಹ್ವಾನಿಸಿದೆ. ಆದರೆ, ಇಂಗ್ಲೆಂಡ್ ರನ್‌ ರಾಶಿ ಬಾಂಗ್ಲಾದೇಶಕ್ಕೆ ಚಿಂತೆಗೀಡು ಮಾಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡಿಗೆ ಆರಂಭಿಕರಿಬ್ಬರು ಉತ್ತಮ ಬುನಾದಿ ಹಾಕಿಕೊಟ್ಟರು. ಬ್ಯಾರಿಸ್ಟೋ ಹಾಗೂ ಮಲನ್ ಮೊದಲ ಜತೆಯಾಟಕ್ಕೆ 115 ರನ್‌ ಪೇರಿಸಿದರೆ, ಬಳಿಕ ಬಂದ ಜೋ ರೂಟ್‌ ಕೂಡ ಅರ್ಧಶತಕ ಬಾರಿಸಿದರು. ಡೇವಿಡ್ ಮಲನ್ ಅವರದ್ದು ಈಗಾಗಲೇ 140 ರನ್ನುಗಳ ಕೊಡುಗೆ. ಇದರಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌. ಜೋ ರೂಟ್ ಕೂಡ ಇದೇ ಉಮೇದಿನಲ್ಲಿದ್ದಾರೆ.

ಇನ್ನೂ ೧೨ ಓವರ್‌ ಆಟವಿದ್ದು, 400 ರನ್‌ ಪಕ್ಕಾ ಎನ್ನಲಾಗುತ್ತಿದೆ. ಇನ್ನೂ ಹಾರ್ಡ್‌ ಹಿಟ್ಟರ್‌ ಗಳ ಆಟ ಬಾಕಿ ಇದ್ದು, ಬಾಂಗ್ಲಾದೇಶ ಬೌಲರುಗಳಿಗೆ ನೀರು ಕುಡಿಸುವುದು ಪಕ್ಕಾ ಎನ್ನಲಾಗುತ್ತಿದೆ.

ಎರಡೂ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆ ಕಂಡುಬಂದಿದೆ. ಮೊಯಿನ್ ಅಲಿ ಬದಲಿಗೆ ಇಂಗ್ಲೆಂಡ್ ತಂಡ ರೀಸ್ ಟೋಪ್ಲೆ ಅವರನ್ನು ಆಯ್ಕೆ ಮಾಡಿದೆ. ಬಾಂಗ್ಲಾದೇಶವು ಮಹಮ್ಮದುಲ್ಲಾ ಅವರನ್ನು ಕೈಬಿಟ್ಟು ಮೆಹದಿ ಹಸನ್ ಅವರನ್ನ ತಂಡಕ್ಕೆ ತೆಗೆದುಕೊಂಡಿದೆ.

2023ರ ವಿಶ್ವಕಪ್‌ನ 7ನೇ ಪಂದ್ಯ ಇದಾಗಿದೆ. ಈ ಪಂದ್ಯ ಇಂಗ್ಲೆಂಡ್‌ಗೆ ಮಹತ್ವದ್ದಾಗಿದೆ. ಇಂಗ್ಲೆಂಡ್​ ತಂಡ ನ್ಯೂಜಿಲೆಂಡ್​ ವಿರುದ್ಧ ಸೋಲು ಕಂಡಿದ್ದು, ಜಯದ ಲಯ ಕಂಡುಕೊಳ್ಳಲು ಯತ್ನಿಸುತ್ತಿದೆ.

ಇಂಗ್ಲೆಂಡ್ 11ರ ಬಳಗ: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (wk/c), ಲಿಯಾಮ್ ಲಿವಿಂಗ್‌ ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲೆ..

ಬಾಂಗ್ಲಾದೇಶ 11ರ ಬಳಗ: ತಂಜೀದ್ ಹಸನ್, ಲಿಟನ್ ದಾಸ್, ನಜ್ಮುಲ್ ಹುಸೇನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮೆಹದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್ (ವಿಕೆ), ತೌಹೀದ್ ಹೃದಯೋಯ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರಹಮಾನ್..