Tuesday, 26th November 2024

ದಮ್ಮೋಪದೇಶ ಮತ್ತು ಧರ್ಮ ದೀಕ್ಷೆ ಕಾರ್ಯಕ್ರಮ

ಚಿಕ್ಕಮಗಳೂರು: ಬೌದ್ಧ ಧರ್ಮ ಸ್ವೀಕರಿಸುವವರು ಬೇರೆ ಧರ್ಮವನ್ನು ವಿರೋಧಿಸಿ ಅಥವಾ ನಿಂದಿಸುವ ಮೂಲಕ ಸಂಘರ್ಷಕ್ಕೆ ಇಳಿಯಬಾರದು ರಚನಾತ್ಮಕವಾಗಿ ಪರಿವರ್ತನೆ ಆಗಬೇಕೆಂದು ಸಾಮಾಜಿಕ ಚಿಂತಕ ಹಾಗೂ ಬೆಂಗಳೂರಿನ ಐಎಎಸ್ ಅಕ್ಕ ಅಕಾಡೆಮಿಯ ಮುಖ್ಯಸ್ಥ ಡಾ. ಶಿವಕುಮಾರ್ ಅವರು ಕರೆ ನೀಡಿದರು.

ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಅಖಿಲ ಭಾರತ ಬುದ್ಧ ಮಹಾಸಭಾ ಜಿಲ್ಲಾ ಶಾಖೆ ಏರ್ಪಡಿಸಿದ್ದ ದಮ್ಮೋಪದೇಶÀ ಮತ್ತು ಧರ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಸಂಸ್ಕಾರ ಮತ್ತು ನೈತಿಕತೆ ಧರ್ಮದಿಂದ ಬರುತ್ತದೆ ನೈತಿಕ ಬಲದಿಂದ ರಚನಾತ್ಮಕ ಕಾರ್ಯಕ್ಕೆ ತೊಡಗಬೇಕು ಅದನ್ನು ಬಿಟ್ಟು ಇನ್ನೊಂದು ಧರ್ಮವನ್ನು ನಿಂದಿಸುವುದರಿAದ ವಿರೋಧಿಸುವುದರಿಂದ ಏನು ಆಗುವುದಿಲ್ಲ ಋಣಾತ್ಮಕ ಚಿಂತನೆ ಮೂಲಕ ಹಿಂದೂ ಧರ್ಮ ಪಾಲಕ ರೊಂದಿಗೆ ಸಂಘರ್ಷಕ್ಕೆ ಇಳಿಯಬಾರದೆಂದು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ಕಾರಣವನ್ನು ತಿಳಿದುಕೊಳ್ಳಬೇಕು ಹಿಂದೂ ಧರ್ಮ ಅಂಬೇಡ್ಕರ್ ಅವರನ್ನು ಪ್ರತಿ ಹೆಜ್ಜೆ ಹೆಜ್ಜೆಗೂ ಅವಮಾನಿಸಿತ್ತು ಅತಿಯಾಗಿ ಅವಮಾನಿತರಾಗಿವವರು ಬಂಡಾಯಗಾರರಾಗಿರುತ್ತಾರೆ ಅದೇ ರೀತಿ ಬಂಡಾಯಗಾರ ಅಂಬೇಡ್ಕರ್ ಅವರು ಪ್ರತಿಕಾರ ತೀರಿಸಿಕೊಳ್ಳುವ ಮೂಲಕ ಸ್ವಾರ್ಥ ಸಾಧಿಸಿಕೊಳ್ಳುವ ಅಲ್ಪ ತೃಪ್ತರಾಗಿರಲಿಲ್ಲ ತಮ್ಮ ಅಪಾರ ಚಿಂತನೆಯೊAದಿಗೆ ತಮ್ಮ ಅಧ್ಯಯನ ಶಕ್ತಿಯಿಂದ ಬೌದ್ಧ ಧರ್ಮಕ್ಕೆ ವಾಪಸ್ ಮರಳಿದರು ಅದು ಮತಾಂತÀರವಲ್ಲ ಎಂದು ಚರಿತ್ರೆಯನ್ನು ವಿವರಿಸಿದರು.

ಕ್ರಿ.ಪೂ ೧೮೮೫ ರ ಪೂರ್ವದಲ್ಲಿ ಹಿಂದೂ ಕಾನೂನು ಗ್ರಂಥವಾಗಿದ್ದ ಮನುಸ್ಮೃತಿಯನ್ನು ಜಾರಿಗೆ ತಂದು ವರ್ಣಾಶ್ರಮ ಪದ್ಧತಿಯನ್ನು ಆಚರಣೆಗೆ ತರಲಾಗಿತ್ತು. ಇದರಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಹೊರತಾದ ವಿವಿಧ ಕಸುಬುಗಳನ್ನು ಅವಲಂಬಿಸಿದ್ದ ಜನರನ್ನು ಶೂದ್ರರೆೆಂದು ಪರಿಗಣಿಸಿ ಮೇಲ್ವರ್ಗದ ಎಲ್ಲ ಜನರ ಸೇವೆ ಮಾಡುವ ಭಯಾನಕವಾದ ನಿರ್ಬಂಧ ಹೇರಲಾಗಿತ್ತು.

ಈ ನಿರ್ಬಂಧಗಳನ್ನು ವಿರೋಧಿಸಿ ಹೊರಗಿದ್ದವರನ್ನು ಅಸ್ಪೃಶ್ಯರೆಂದು ದೂರವಿಡಲಾಗಿತ್ತು. ಈ ರೀತಿಯ ದೂರ ಉಳಿದ ಅಸ್ಪೃಶ್ಯರೆಲ್ಲಾ ಬುದ್ಧನ ಅನುಯಾಯಿಗಳೆಂದು ಚರಿತ್ರೆಯಲ್ಲಿ ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಬುದ್ಧ ಧರ್ಮವನ್ನು ಸ್ವೀಕರಿಸುವ ದಿಟ್ಟ ನಿರ್ಧಾರ ಮಾಡಿದ್ದ ರೆMದು ವಿವರಿಸಿದರು.

ಅಸ್ಪೃಶ್ಯರು ಮೂಲತಃ ಬುದ್ಧ ಅನುಯಾಯಿಗಳು ಕೀಳು ಜಾತಿಯವರಲ್ಲ ಆದರೆ ಬೇರೆ ಧರ್ಮವನ್ನು ವಿರೋಧಿಸದೆ ಪರಿವರ್ತನೆ ಹೊಂದಬೇಕು ಪ್ರತಿ ಮನೆಯಲ್ಲಿ ಧರ್ಮ ಕಾರ್ಯಕ್ಕೆ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಆಸೆ ಆಮೀಷದಿಂದ ಹೊರಗೆ ಕರೆದೊಯ್ಯವುದೇ ಬುದ್ಧ ಧರ್ಮದ ಗುರಿ ಬೌದ್ಧ ಧರ್ಮ ಸ್ವೀಕರಿಸುವ ಪ್ರತಿಯೊಬ್ಬರು ಜವಾಬ್ದಾರಿಯಿಂದ ಬುದ್ಧನ ಮಾರ್ಗದಲ್ಲಿ ನಡೆಯಬೇಕೆಂದು ಕಿವಿಮಾತು ಹೇಳಿದರು.