ಮುಂಬೈ: ಕಲ್ಕಿ 2898 ಎಡಿ ಸಿನಿಮಾ ಸಲುವಾಗಿ ಸುದ್ದಿಯಾಗುತ್ತಿರುವ ನಟಿಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಸಿಂಘಂ ಎಗೈನ್’
ಬಾಲಿವುಡ್ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆಯಕ್ಷನ್ ಕಟ್ ಹೇಳುತ್ತಿರುವ ‘ಸಿಂಘಂ ಎಗೈನ್’ ಸಿನಿಮಾ ದಿಂದ ತಮ್ಮ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ಅಜಯ್ ದೇವಗನ್ ಮುಖ್ಯ ಭೂಮಿಕೆಯ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ‘ಶಕ್ತಿ ಶೆಟ್ಟಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಪಠಾಣ್ ನಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ‘ಶಕ್ತಿ ಶೆಟ್ಟಿ’ ಪಾತ್ರದಲ್ಲಿ ನಟಿಸುತ್ತಿದ್ದಾರೆ.
‘ಸಿಂಘಂ ಎಗೈನ್’ನ ಎರಡು ಫೋಟೋಗಳ ಸೆಟ್ ಅನ್ನು ನಟಿ ದೀಪಿಕಾ ಪಡುಕೋಣೆ ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಅಕೌಂಟ್ನಲ್ಲಿ ಹಂಚಿಕೊಂಡಿ ದ್ದಾರೆ. ಕಿಡಿಗೇಡಿಗಳನ್ನು ಸದೆಬಡಿದಿರುವ ಚಿತ್ರಣವನ್ನು ಕಾಣಬ ಹುದು. ಪೊಲೀಸ್ ಗಾಡಿ, ಧಗಧಗಿಸುತ್ತಿರುವ ಅಗ್ನಿ ಜೊತೆಗೆ ಹತ್ತಾರು ದುಷ್ಟರು ಗಾಯಗೊಂಡು ಬಿದ್ದಿದ್ದಾರೆ. ಖಡಕ್ ಪೊಲೀಸ್ ಪಾತ್ರ ನಿರ್ವಹಿಸಿರುವಂತೆ ತೋರಿದ್ದು, ಸಿನಿಮಾ ಹೈ ಆಯಕ್ಷನ್ ಸನ್ನಿವೇಶಗಳನ್ನು ಒಳಗೊಂಡಿರಲಿದೆ ಎಂಬುದು ಫಸ್ಟ್ ಲುಕ್ನಲ್ಲೇ ಗೊತ್ತಾಗುತ್ತಿದೆ.
ಎರಡನೇ ಫೋಟೋದಲ್ಲಿ ಗನ್ ಹಿಡಿದು ಸ್ಮೈಲ್ ಮಾಡುತ್ತಿರುವುದನ್ನು ಕಾಣಬಹುದು. ನಟಿಯ ಮೊಗದ ಮೇಲೆ ವಿಜಯಶಾಲಿ ಭಾವನೆ, ಜೊತೆಗೆ ವಿಚಿತ್ರ ಸ್ಮೈಲ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ಅಜಯ್ ದೇವ್ಗನ್, ದೀಪಿಕಾ ಪಡುಕೋಣೆ ಅಲ್ಲದೇ ಚಿತ್ರದಲ್ಲಿ ರಣ್ವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ಕೂಡ ವಿಶೇಷ ಪಾತ್ರಗಳಲ್ಲಿ ನಟಿಸು ತ್ತಿದ್ದಾರೆ. ಈ ನಟರು ತಮ್ಮ ಸಿಂಬಾ ಮತ್ತು ಸೂರ್ಯವಂಶಿ ಪಾತ್ರಗಳನ್ನು ಪುನರಾವರ್ತಿಸಲಿದ್ದಾರೆ. ಕರೀನಾ ಕಪೂರ್ ಖಾನ್ ಸಹ ಚಿತ್ರ ತಂಡದ ಭಾಗವಾಗಿದ್ದಾರೆ. ರೋಹಿತ್ ಶೆಟ್ಟಿ ಅವರ ಈ ಸಿನಿಮಾ 2024ರ ಸ್ವಾತಂತ್ರ್ಯ ದಿನದ ಸಂದರ್ಭ ತೆರೆಕಾಣಲು ನಿರ್ಧರಿಸಿದೆ.
ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ 2 ಕೂಡ ಬಿಡುಗಡೆ ಆಗಲಿದೆ.