Friday, 18th October 2024

ಪುಣೆಯಲ್ಲಿ ಟ್ಯಾಂಕರ್‌ಗೆ ಟ್ರಕ್‍ಗೆ ಡಿಕ್ಕಿ: ಅಪ್ರಾಪ್ತರು ಸೇರಿ ನಾಲ್ವರ ಸಾವು

ಪೂನಾ: ಮಹಾರಾಷ್ಟ್ರದ ಪುಣೆಯಲ್ಲಿ ಟ್ಯಾಂಕರ್‌ಗೆ ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಪುಣೆ-ಬೆಂಗಳೂರು ಹೆದ್ದಾರಿಯ ಸ್ವಾಮಿನಾರಾಯಣ ದೇವಸ್ಥಾನ ಮತ್ತು ನವ್ಲೆ ಸೇತುವೆಯ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಬ್ರೇಕ್ ವೈಫಲ್ಯದಿಂದ ಟ್ರಕ್ ಕಂಟೇನರ್‌ಗೆ ಡಿಕ್ಕಿ ಹೊಡೆದು ನಂತರ ಮತ್ತೊಂದು ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆ ಮಹಾನಗರ ಪಾಲಿಕೆಯ ಅಗ್ನಿಶಾ ಮಕ ದಳದ ಅ„ಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

ಸಂತ್ರಸ್ತರ ದೇಹಗಳನ್ನು ಉರಿಯುತ್ತಿರುವ ಟ್ರಕ್‍ನಿಂದ ಹೊರತೆಗೆಯಲಾಯಿತು. ಮುಂದಿನ ಪ್ರಕ್ರಿಯೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಘಟನೆ ನಡೆದಾಗ ಟ್ರಕ್‍ನಲ್ಲಿ ಆರು ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಟ್ರಕ್‍ನಿಂದ ಹಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಪಘಾತದಲ್ಲಿ ಅವರಿಗೂ ಗಾಯಗಳಾ ಗಿವೆ ಎಂದು ಅವರು ಹೇಳಿದರು. ಆದರೆ ಬಲಿಪಶುಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಹೇಳಿದರು.