Sunday, 5th January 2025

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಹಣಕಾಸು ಕಾರ್ಯಕ್ಷಮತೆ ಘೋಷಣೆ

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ., ಸೆಪ್ಟೆಂಬರ್ 30, 2023ರಂದು ಅಂತ್ಯಗೊಂಡ ತ್ರೈಮಾಸಿಕ ಹಾಗೂ ಅರ್ಧವರ್ಷಕ್ಕೆ ತನ್ನ ಹಣಕಾಸು ಕಾರ್ಯಕ್ಷಮತೆಯನ್ನು ಘೋಷಿಸಿತು.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ವ್ಯವಹಾರ ಕಾರ್ಯಕ್ಷಮತೆ- – Q2FY24 and H1FY24
• ₹ 5,749 ಕೋಟಿಯಲ್ಲಿ ವಿತರಣೆಗಳಿತ್ತು/ Q2FY24/H1FY24ದಲ್ಲಿ ₹ 11,033 ಕೋಟಿ ಇತ್ತು-ವ-ವಕ್ಕೆ 18%/20% ಏರಿಕೆ
• ₹ 541 ಕೋಟಿಯಲ್ಲಿ ಕೈಗೆಟುಕುವಂತಹ ಗೃಹಸಾಲ(Housing$) ವಿತರಣೆ / Q2FY24/H1FY24 ದಲ್ಲಿ₹ 959 ಕೋಟಿ-ವ-ವಕ್ಕೆ  69%/58% ಏರಿಕೆ
• ₹26,574* ಕೋಟಿಯಲ್ಲಿ ಒಟ್ಟು ಸಾಲ ಪುಸ್ತಕ –ವ-ವಕ್ಕೆ /Q-o-Qಗೆ 27%/5% ಏರಿಕೆ
ಸಂಗ್ರಹಣೆ ಮತ್ತು ಸಂಪತ್ತಿನ ಗುಣಮಟ್ಟ
• ಸೆಪ್ಟೆಂಬರ್ ’23ದಲ್ಲಿ ~99% ಸಾಮರ್ಥ್ಯದೊಂದಿಗೆ ಸಂಗ್ರಹಣೆಗಳಲ್ಲಿ ನಿರಂತರ ಏರಿಕೆ; NDA ಸಂಗ್ರಹಣೆ ನಿರಂತರವಾಗಿ ~100%ನಲ್ಲಿ
• ಸೆಪ್ಟೆಂಬರ್ ’23ರಂದು ಇದ್ದಂತೆ, ಅಪಾಯದಲ್ಲಿದ್ದ ಪೋರ್ಟ್‌ಫೋಲಿಯೋ (Portfolio at risk*)  3.7%ನಲ್ಲಿ
• ಜೂನ್ ’23ರಂದು ಇದ್ದ 2.4%ಗೆ ಹೋಲಿಸಿದರೆ, ಸೆಪ್ಟೆಂಬರ್ ’23ದಲ್ಲಿ GNPA* 2.2%ಗೆ ಇಳಿದಿತ್ತು. ಸೆಪ್ಟೆಂಬರ್ ’23ದಲ್ಲಿ ಇದ್ದಂತೆ, 0.09%ನಲ್ಲಿ ನಿಕೃಷ್ಟವಾಗಿಯೇ ಇದೆ
• Q2FY24ದಲ್ಲಿ ಒಟ್ಟೂ ₹ 56 ಕೋಟಿ ವಜಾ; ಸೆಪ್ಟೆಂಬರ್ ’23ರಂದು ಪ್ರಾವಿಶನ್ ಕವರೇಜ್ ಅನುಪಾತ  96%#
ಠೇವಣಿಗಳು
• ಸೆಪ್ಟೆಂಬರ್ ’23ದಲ್ಲಿ ಇದ್ದಂತೆ,  ₹29,139 ಕೋಟಿಯಲ್ಲಿ ಠೇವಣಿಗಳಿದ್ದವು; Y-o-Y/Q-o-Q ಗೆ  43%/9% ಏರಿಕೆ
• ರೀಟೇಲ್  TD^ Y-o-Y/Q-o-Q ಗೆ  56%/8% ಬೆಳೆದಿತ್ತು
• Y-o-Y/Q-o-Q ಗೆ  CASA  28%/7% ಬೆಳೆದಿತ್ತು; ಸೆಪ್ಟೆಂಬರ್ ’23ರಂದು ಇದ್ದಂತೆ CASA ಅನುಪಾತ 24.1%ನಲ್ಲಿ
• ರಾಷ್ಟ್ರವ್ಯಾಪಿ ಬ್ರ್ಯಾಂಡ್ ಪ್ರಚಾರ ಮತ್ತು ಮೌಲ್ಯ-ವರ್ಧನೆ ಉತ್ಪನ್ನಗಳ ಪರಿಚಯ ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ ಹಣಕಾಸು
• ₹823 ಕೋಟಿಯಲ್ಲಿ Q2FY24 NII  Y-o-Y 24% ಏರಿಕೆ; Q2FY24ಗಾಗಿ NIM  8.8%* ನಲ್ಲಿ
• Q2FY23ದಲ್ಲಿ 52.5% ಇದ್ದ ಕಾಸ್ಟ್ ಟು ಇನ್ಕಂ ರೇಶಿಯೊ(ಆದಾಯಕ್ಕೆ ವೆಚ್ಚದ ಅನುಪಾತ) Q2FY24ದಲ್ಲಿ 52.2% ಆಗಿತ್ತು
• ₹483 ಕೋಟಿಯಲ್ಲಿ Q2FY24 PPoP ; Y-o-Y 26% ಏರಿಕೆ;  ₹328 ಕೋಟಿಯಲ್ಲಿ PAT  Y-o-Yಗೆ 11% ಏರಿಕೆ
ಬಂಡವಾಳ ಮತ್ತು ದ್ರವೀಯತೆ
• ಬಂಡವಾಳ ಸಮರ್ಪಕತೆ ಅನುಪಾತ 25.2%ದಲ್ಲಿ. ಸ್ತರ-1 ಬಂಡವಾಳ 22.5%ನಲ್ಲಿ
• ಸೆಪ್ಟೆಂಬರ್ 30, 2023ರಂದು ಇದ್ದಂತೆ, ತಾತ್ಕಾಲಿಕ LCR 158%ನಲ್ಲಿ
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಮ್‌ಡಿ ಮತ್ತು ಸಿಇಒ ಶ್ರೀ ಇತ್ತಿರಾ ಡೇವಿಸ್, “ವ್ಯಾಪಾರ ಕಾರ್ಯಕ್ಷಮತೆಯ ವಿಷಯದಲ್ಲಿ Q2FY24 ಮತ್ತೊಂದು ಪ್ರಭಾವ ಶಾಲಿಯಾದ ತ್ರೈಮಾಸಿಕವಾಗಿತ್ತು. ವ್ಯಾಪಾರ ಚಲನೆಯು, ಹಿಂದಿನ ತ್ರೈಮಾಸಿಕಗಳಲ್ಲಿ ಕಂಡಂತೆ, ತನ್ನ ಪ್ರಬಲವಾದ ಏರುಗತಿ ಯನ್ನು ಮುಂದುವರಿಸಿಕೊಂಡು ಹೋಗಿತ್ತು.
₹ 5,749 ಕೋಟಿಗಳ ವಿತರಣೆ ಪ್ರಬಲವಾಗಿದ್ದು, ವ-ವಕ್ಕೆ 18%ನಲ್ಲೂ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 9%ನಲ್ಲೂ ಪ್ರಬಲ ಬೆಳವಣಿಗೆ ಸಾಧಿಸಿತ್ತು. ಕೈಗೆಟುಕುವ ಗೃಹಸಾಲ(Affordable Housing) ಮತ್ತು FIG ದಲ್ಲಿನ ನಮ್ಮ ಸುಭದ್ರ ಪುಸ್ತಕವು ತನ್ನ ಬಲವಾದ ಕಾರ್ಯಕ್ಷಮತೆಯನ್ನು ಮುಂದುವ ರಿಸಿತ್ತು. ಮೇಲಾಗಿ, ನಮ್ಮ ಗ್ರಾಹಕ ಬೇಸ್‌ನ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಗುರಿಯಿರಿಸಲಾದ ಬಂಗಾರ ಸಾಲ ಮತ್ತು ದ್ವಿಚಕ್ರ ವಾಹನ ಸಾಲ ಮುಂತಾದ ಹೊಸ ಕೊಡುಗೆಗಳು, ನಮ್ಮ ಉತ್ಪನ್ನ ಶ್ರೇಣಿಯನ್ನು ವರ್ಧಿಸಿ ನಿರಂತರವಾಗಿ ಬೆಳವಣಿಗೆಗೆ ನೆರವಾಗಲಿದೆ.
ಬೆಳವಣಿಗೆ ಮತ್ತು ಬ್ರ್ಯಾಂಡ್ ಜಾಗೃತಿಗೆ ಇನ್ನಷ್ಟು  ಶಕ್ತಿ ನೀಡುವ ಸಲುವಾಗಿ ನಾವು ಈ ತ್ರೈಮಾಸಿಕದಲ್ಲಿ, ನಮ್ಮ ಪ್ರಸ್ತುತದ ಹಾಗೂ ಸಂಭಾವ್ಯ ಭಾಗೀ ದಾರರಲ್ಲಿ ಬ್ರ್ಯಾಂಡ್ ಮರುಕಳಿಕೆಯನ್ನು ವರ್ಧಿಸಿ ಆಳಗೊಳಿಸಲು ರಾಷ್ಟ್ರವ್ಯಾಪಿ ಬ್ರ್ಯಾಂಡ್ ಪ್ರಚಾರ ಮತ್ತು ಮೌಲ್ಯ-ವರ್ಧನೆ ಬಾಧ್ಯತೆಯ ಉತ್ಪನ್ನಗಳು ಮುಂತಾದ ಹಲವಾರು ಯೋಜನೆಗಳನ್ನು ಪರಿಚಯಿಸಿದ್ದೇವೆ. ಅಷ್ಟಲ್ಲದೆ, ನಾವು ಇನ್ನೂ 39 ಹೊಸ ಶಾಖೆಗಳನ್ನು ತೆರೆದಿದ್ದು ಇದು ನಮ್ಮ ಒಟ್ಟೂ ಶಾಖಾ ಸಂಖ್ಯೆಯನ್ನು 700ಕ್ಕೆ ಕೊಂಡೊಯ್ದಿದೆ. H2ದಲ್ಲಿ ನಾವು ~45 ಗಿಂತ ಹೆಚ್ಚಿನ ಶಾಖೆಗಳನ್ನು ಸೇರಿಸಲಿದ್ದು ಇದು, ಪ್ರಮಾಣಗಳನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸುವುದಕ್ಕೇ ಕೆಲವು ಶಾಖೆಗಳನ್ನು ವಿಭಜಿಸುವ ಕ್ರಿಯೆಯನ್ನೂ ಒಳಗೊಂಡಿರುತ್ತದೆ.
ಈ ಎಲ್ಲಾ ಪ್ರಯತ್ನಗಳು, ನಮ್ಮ ಬ್ಯಾಂಕ್‍ಗಾಗಿ ಬಾಧ್ಯತೆಗಳ ಆರೋಗ್ಯಕರ ಬೆಳವಣಿಗೆಗೆ ಕಾರಣವಾಗಿವೆ. ನಮ್ಮ CASA  ₹ 7,000 ಕೋಟಿ ಗುರಿಯನ್ನು ದಾಟಿದ್ದು, ವರ್ಷದಿಂದ ವರ್ಷಕ್ಕೆ 28%ನಲ್ಲಿ ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 7%ನಲ್ಲಿ ಬೆಳೆದಿದೆ. ಇದಲ್ಲದೆ, ನಮ್ಮ ರೀಟೇಲ್ TDs + CASA, ₹ 18,818 ಕೋಟಿಗಳಲ್ಲಿ ವರ್ಷದಿಂದ ವರ್ಷಕ್ಕೆ 44% ಬೆಳೆದಿತ್ತು. Q2FY24, ನಾವು ₹300 ಕೋಟಿ+ PAT ಗುರಿ ತಲುಪಿದ ಮತ್ತೊಂದು ತ್ರೈಮಾಸಿಕವಾಗಿತ್ತು. ವರ್ಷದಿಂದ ವರ್ಷಕ್ಕೆ 24%ನಲ್ಲಿ ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 4%ನಲ್ಲಿ ಬೆಳೆಯುವ ಮೂಲಕ ನಮ್ಮ ಆರೋಗ್ಯಕರವಾದ NII ಇದಕ್ಕೆ ಬೆಂಬಲ ಒದಗಿಸಿತ್ತು.  ಆದಾಗ್ಯೂ, ಪ್ರಸ್ತುತದ ತ್ರೈಮಾಸಿಕದಲ್ಲೂ ನಿಧಿಗಳ ವೆಚ್ಚ ಹೆಚ್ಚಳದಲ್ಲೇ ಇದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ, 43 bps ಗಳಷ್ಟು NIM ಸಂಕುಚನಕ್ಕೆ ಕಾರಣವಾಗಿತ್ತು.
ಸಾಲ ಮತ್ತು ಠೇವಣಿ ಪುಸ್ತಕ ಬೆಳವಣಿಗೆಯ ಕುರಿತು ನಮ್ಮ ಮಾರ್ಗಸೂಚಿಗೆ ನಾವು ಅಂಟಿಕೊಂಡೇ ಇರುತ್ತೇವೆ. ಮೇಲಾಗಿ, ನಾವು ಸಾಲ ವೆಚ್ಚವನ್ನು (ಕ್ರೆಡಿಟ್ ಕಾಸ್ಟ್) 100 bps ಗಿಂತ ಕಡಿಮೆಯಲ್ಲಿ ನಿರ್ವಹಿಸುತ್ತೇವೆಂಬ ವಿಶ್ವಾಸ ನಮಗಿದೆ.”ಹಲೋ ಉಜ್ಜೀವನ್”ನಂತಹ ಇತರ ಯೋಜನೆಗಳ ಮೇಲೆ ನಾವು ಪ್ರಬಲವಾಗಿ ಗಮನ ಕೇಂದ್ರೀಕರಿಸಿರಿವುದು, ನಮ್ಮ ಗ್ರಾಹಕರ ಸ್ವೀಕೃತಿಯನ್ನು ಹೆಚ್ಚಿಸಿದೆ. ಇಂದಿನವರೆಗೂ 4.3 ಲಕ್ಷ ಡೌನ್‌ಲೋಡ್‌ಗಳು ಏರ್ಪ ಟ್ಟಿದ್ದು, Q2FY24ದಲ್ಲಿ  ₹ 40 ಕೋಟಿಗಿಂತ ಹೆಚ್ಚಿನ ಒಟ್ಟೂ ಮರುಪಾವತಿಗಳನ್ನು ನಾವು ಕಂಡಿದ್ದೇವೆ. ಇತ್ತೀಚೆಗೆ ಪರಿಚಯಿಸಲಾಗಿದ್ದ ‘Digital FDs’ ಕೂಡ ಮುಂಬರುವ ತ್ರೈಮಾಸಿಕಗಳಲ್ಲಿ ನಮಗ್ ವ್ಯಾಪಾರ ತಂದುಕೊಡುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ.
ನಮ್ಮ ಪ್ರೋತ್ಸಾಹಕರೊಡನೆ ವಿಲೀನಗೊಳ್ಳುವ ವಿಷಯದಲ್ಲಿ, ಸನ್ಮಾನ್ಯ NCLTದಿಂದ ಬಂದಿರುವ ಆದೇಶದ ಪ್ರಕಾರ, ಬ್ಯಾಂಕ್ ಮತ್ತು ಉಜ್ಜೀವನ್ ಫೈನಾನ್ಶಿಯಲ್ ಸರ್ವಿವಸ್, ನವಂಬರ್ 3, 2023ರಂದು ಶೇರುದಾರರ EGMಅನ್ನು ಆಯೋಜಿಸಿದೆ. ಎರಡೂ ಸಂಸ್ಥೆಗಳ ಶೇರುದಾರರು ಒಮ್ಮೆ ಈ ವಿಲೀನವನ್ನು ಅನುಮೋದಿಸಿದ ಬಳಿಕ ನಾವು ಬಾಕಿ ಉಳಿದಿರುವ ಕಾರ್ಯವಿಧಾನ ಮತ್ತು ನಿಯಮಾಂಶಗಳೊಂದಿಗೆ ಮುಂದುವರಿಯುತ್ತೇವೆ. ಈ ವಿಲೀನವು Q4FY24ದಲ್ಲಿ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ.”ಎಂದು ಹೇಳಿದರು.

Leave a Reply

Your email address will not be published. Required fields are marked *