ಕೋಲ್ಕತ್ತಾ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಪರ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ, ತಮ್ಮದೇ ನಾಡಿನ ಸಚಿನ್ ತೆಂಡುಲ್ಕರ್ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿರು. ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಶತಕವನ್ನು ತಪ್ಪಿಸಿಕೊಂಡಿದ್ದರು.
ಇದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಆದರೆ 6ನೇ ಓವರ್ನಲ್ಲಿ ರೋಹಿತ್ ಶರ್ಮಾ ದೊಡ್ಡ ಹಿಟ್ಗೆ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು. ಇನ್ನಿಂಗ್ಸ್ನಲ್ಲಿ 40 ರನ್ ಕಲೆಹಾಕಿದ್ದರು.
ಉತ್ತಮ ಆರಂಭ ಪಡೆದುಕೊಂಡಿದ್ದ ಶುಭಮನ್ ಗಿಲ್ ಪವರ್ ಪ್ಲೇ ಮುಕ್ತಾಯವಾಗಿ ಕೇಶವ್ ಮಹಾರಾಜ್ ಕೈಗೆ ಬಾಲ್ ಸಿಕ್ಕುತ್ತಿದ್ದಂತೆ ಔಟ್ ಆದರು. ಗಿಲ್ 24 ಬಾಲ್ನಲ್ಲಿ 23 ರನ್ ಮಾಡಿ ವಿಕೆಟ್ ಒಪ್ಪಿಸಿದ್ದರು.
ಬಳಿಕ ಉಪನಾಯಕ ಕೆ.ಎಲ್.ರಾಹುಲ್ 8 ರನ್ನಿಗೆ ವಿಕೆಟ್ ಒಪ್ಪಿಸಿ ನಿರಾಶರಾದರು. ಕೊನೆಯಲ್ಲಿ ಆಲ್ರೌಂಟರ್ ರವೀಂದ್ರ ಜಡೇಜಾ 29 ಗಳಿಸಿ, ತಂಡದ ಮೊತ್ತ 326 ತಲುವುವಂತೆ ಮಾಡಿದರು.
ದಕ್ಷಿಣ ಆಫ್ರಿಕಾ ತಂಡದ ಐವರು ಬೌಲರುಗಳು ತಲಾ ಒಂದು ವಿಕೆಟ್ ಕಿತ್ತರು. ಈ ಪೈಕಿ ಕೇಶವ್ ಮಹಾರಾಜ್ ಅವರು ಉತ್ತಮ ದಾಳಿ ಸಂಘಟಿಸಿದರು. ಹತ್ತು ಓವರಿನಲ್ಲಿ 30 ನೀಡಿದರು.