ಸ್ವಿಸ್ ಗ್ರೂಪ್ ಐಕ್ಯೂ ಎಐಆರ್ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ, ಕಲುಷಿತ ನಗರಗಳ ಪೈಕಿ ವಿಶ್ವದ ದೆಹಲಿ ನಂ.೧ ಸ್ಥಾನದಲ್ಲಿದ್ದು, ಕೋಲ್ಕತ್ತಾ ಮತ್ತು ಮುಂಬೈ ಸಹ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ ಭಾರತೀಯ ನಗರಗಳಾಗಿವೆ. ದಿನೇ ದಿನೆ ದಿಲ್ಲಿಯಲ್ಲಿನ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರಿ ಏರುತ್ತಲಿರುವುದರಿಂದ ಕಳೆದೊಂದು ವಾರದಿಂದ ಶಾಲೆಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾರಿಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಟ್ಟಡ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಕಡಿಮೆ ತಾಪಮಾನ, ಗಾಳಿಯ ಕೊರತೆ, ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ, ಕಸ ಸುಡುವುದು ಮುಂತಾದ ಕಾರಣಗಳಿಂದ ಗಾಳಿ ಕಲುಷಿತವಾಗಿದೆ ಎನ್ನಲಾಗಿದೆ. ಸದ್ಯದ ದೀಪಾವಳಿ ಹಬ್ಬ ಬರು ವುದರಿಂದ ಪಟಾಕಿ ಬಳಕೆ ಹೆಚ್ಚಲಿದ್ದು, ಈ ಬಗ್ಗೆಯೂ ಆತಂಕ ಮೂಡಿದೆ. ದಿಲ್ಲಿಯ ಈ ಪರಿಸ್ಥಿತಿ ಇತರ ಮಹಾನಗರಗಳಿಗೂ ಎಚ್ಚರಿಕೆಯ ಗಂಟೆ
ಯಾಗಿದೆ. ದಿಲ್ಲಿಯ ಜನರು ಅಸ್ತಮಾ, ಉಸಿರಾಟ ಸಮಸ್ಯೆ, ಹೃದ್ರೋಗ ಇತ್ಯಾದಿ ಕಾಯಿಲೆಗಳಿಗೆ ತುತ್ತಾಗುತ್ತಿzರೆ. ಮಕ್ಕಳು ಕಣ್ಣಿನ ಸಮಸ್ಯೆಗೆ ಒಳಗಾಗುತ್ತಿzರೆ. ದಿಲ್ಲಿಯಲ್ಲಿ ವಾಸಿಸುವ ಜನರು ವಾಯುಮಾಲಿನ್ಯ ದಿಂದಾಗಿ ತಮ್ಮ ಜೀವನದ ಸುಮಾರು ೧೨ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ದಿಲ್ಲಿಯ ಉಪನಗರಗಳಾದ ನೋಯ್ಡಾ ಹಾಗೂ ಗುರುಗ್ರಾಮಗಳಲ್ಲಿ ವಾಸಿಸುವ ಜನರ ಆಯುಷ್ಯದಲ್ಲಿ ಸುಮಾರು ೧೧ ವರ್ಷಗಳನ್ನು ಕಳೆದು ಕೊಳ್ಳುತ್ತಿದ್ದಾರೆಂದು ಜಾಗತಿಕ ಅಧ್ಯಯನ ವರದಿಯೊಂದು ತಿಳಿಸಿದೆ. ಬೆಂಗಳೂರು ಕೂಡ ವಾಯು ಮಾಲಿನ್ಯಕ್ಕೆ ಹೊರತಲ್ಲ. ವಿಶ್ವ ಆರೋಗ್ಯ ಸಂಸ್ಥೆ
ನೀಡಿರುವ ಮಾರ್ಗಸೂಚಿಗಳಲ್ಲಿ ಇರುವುದಕ್ಕಿಂತಲೂ ಐದು ಪಟ್ಟು ಕೆಟ್ಟದಾದ ಗಾಳಿಯನ್ನು ಬೆಂಗಳೂರಿನವರು ಉಸಿರಾಡುತ್ತಿzರೆ ಎಂದು ಗ್ರೀನ್‌ಪೀಸ್
ಇಂಡಿಯಾ ಸಂಸ್ಥೆ ತನ್ನ ಇತ್ತೀಚಿನ ವಾಯು ಮಾಲಿನ್ಯದ ವರದಿಯಲ್ಲಿ ಹೇಳಿತ್ತು. ಅಂದರೆ ನಿಗದಿತ ಮಾನದಂಡಕ್ಕಿಂತ ಐದು ಪಟ್ಟು ವಿಷ ಗಾಳಿಯನ್ನು
ಜನ ಸೇವಿಸುತ್ತಿzರೆ. ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸದಿದ್ದರೆ, ವಾಹನಗಳು ಉಗುಳುವ ಹೊಗೆಗೆ ಕಡಿವಾಣ ಹಾಕದಿದ್ದರೆ, ಬೆಂಗಳೂರು ಸುತ್ತ ಇರುವ ಕಿರು ಅರಣ್ಯ ಉಳಿಸಿಕೊಳ್ಳದಿದ್ದರೆ, ಗಿಡ ಮರಗಳನ್ನು ಬೆಳೆಸದೆ ಹೋದರೆ ಬೆಂಗಳೂರಿಗೂ ದಿಲ್ಲಿಯ ಗತಿ ಬರುವ ಕಾಲ ದೂರವಿಲ್ಲ.