Monday, 6th January 2025

ನಿಯಮ ಪಾಲನೆ ಮಾಡಿದ್ದರೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ: ಹೈಕೋರ್ಟ್

ಬೆಂಗಳೂರು: ದೀಪಾವಳಿ ಆರಂಭವಾಗಿರುವುದರಿಂದ ನಿಯಮ ಉಲ್ಲಂಘನೆ ಆರೋಪದಡಿ ಜಪ್ತಿ ಮಾಡಿದ ಅರ್ಜಿದಾರರ ಪಟಾಕಿ ದಾಸ್ತಾನು ಮಳಿಗೆಗಳಿಗೆ ಹಾಕಲಾಗಿರುವ ಬೀಗವನ್ನು ತಕ್ಷಣ ತೆಗೆಯಬೇಕು ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ಬೀಗ ತೆರವುಗೊಳಿಸುವ ಮಳಿಗೆಗಳು ಸ್ಫೋಟಕ ಕಾಯ್ದೆ ಮತ್ತು ಅದಕ್ಕನುಗುಣವಾದ ನಿಯಮಗಳನ್ನು ಪಾಲನೆ ಮಾಡಿದ್ದರೆ ಮಾತ್ರವೇ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಸಂಬಂಧಿಸಿದ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಬಾಗೇಪಲ್ಲಿಯ ಎನ್‌. ಮಹದೇಶನ್‌ ಸೇರಿದಂತೆ ಒಟ್ಟು 22 ಪಟಾಕಿ ಮಾರಾಟ ಪರವಾನಗಿದಾರರು ಜಪ್ತಿ ಮಾಡಲಾಗಿ ರುವ ನಮ್ಮ ಪಟಾಕಿ ದಾಸ್ತಾನು ಮಳಿಗೆಗಳ ತೆರವಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯಪೀಠ ಈ ಮಧ್ಯಂತರ ಆದೇಶ ನೀಡಿತು.

ಕೇಂದ್ರ ಸರ್ಕಾರದ ಡೆಪ್ಯುಟಿ ಸಾಲಿಸಿಟರ್‌ ಜನರಲ್‌, ಪ್ರಕರಣದ ಪ್ರತಿವಾದಿಯಾದ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆ ಮುಖ್ಯ ನಿಯಂತ್ರ ಕರ ಪರವಾಗಿ, ಹಾಜರಾಗಿ, 600 ಕೆಜಿ ತೂಕದವರೆಗೂ ಪಟಾಕಿ ದಾಸ್ತಾನು ಮಾಡಲು ಪರವಾನಗಿ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ.

Leave a Reply

Your email address will not be published. Required fields are marked *