Friday, 22nd November 2024

ವೈವಾಹಕ ಜೀವನಕ್ಕೆ ಕಾಲಿಟ್ಟ ವಾಸುಕಿ ವೈಭವ್​-ಬೃಂದಾ ವಿಕ್ರಮ್​

ಬೆಂಗಳೂರು: ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಮತ್ತು ಬೃಂದಾ ವಿಕ್ರಮ್​ (ನ.16) ಇವರಿಬ್ಬರ ಮದುವೆ ನೆರವೇರುತ್ತಿದೆ. ‘ಹೊಸ ಪಯಣ ಆರಂಭ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್​ ಅವರು ನ. 16ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಕೇವಲ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಗಳು ನಡೆಯುತ್ತಿವೆ. ಹೆಚ್ಚು ಆಡಂಬರ ಇಲ್ಲದೇ, ಸಂಪ್ರದಾಯ ಬದ್ಧವಾಗಿ ವಾಸುಕಿ ವೈಭವ್​ ಮತ್ತು ಬೃಂದಾ ವಿಕ್ರಮ್​ ಅವರು ಮದುವೆ ಆಗುತ್ತಿದ್ದಾರೆ.

ವಾಸುಕಿ ವೈಭವ್​ ಮತ್ತು ಬೃಂದಾ ವಿಕ್ರಮ್​ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೃಂದಾ ವಿಕ್ರಮ್​ ಅವರು ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಶಿಕ್ಷಕಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ವಾಸುಕಿ ಮತ್ತು ಬೃಂದಾ ಅವರು ತಮ್ಮ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಈಗ ಅವರು ಬದುಕಿನ ಪ್ರಮುಖ ಘಟ್ಟಕ್ಕೆ ಬಂದಿದ್ದಾರೆ.

ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ವಾಸುಕಿ ವೈಭವ್​ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ.

‘ಹೊಸ ಪಯಣ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಬೇಕು’ ಎಂದು ವಾಸುಕಿ ವೈಭವ್​ ಅವರು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದಾರೆ.

ಬೃಂದಾ ವಿಕ್ರಮ್​ ರೀತಿಯೇ ವಾಸುಕಿ ವೈಭವ್​ ಕೂಡ ರಂಗಭೂಮಿಯಲ್ಲಿ ಅನುಭವ ಗಳಿಸಿದ್ದಾರೆ. ನಂತರ ಚಿತ್ರರಂಗದಲ್ಲಿ ವಾಸುಕಿ ವೈಭವ್​ ಅವರಿಗೆ ಅವಕಾಶಗಳು ಸಿಕ್ಕವು. ‘ಬಿಗ್ ಬಾಸ್​ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಗಾಯಕನಾಗಿ, ಸಂಗೀತ ನಿರ್ದೇಶಕ ನಾಗಿ ಮಾತ್ರವಲ್ಲದೇ ನಟನಾಗಿಯೂ ಅವರು ಬೇಡಿಕೆ ಹೆಚ್ಚಿಸಿಕೊಂಡರು. ಇತ್ತೀಚೆಗೆ ರಿಲೀಸ್​ ಆದ ‘ಟಗರು ಪಲ್ಯ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಒಂದು ಮುಖ್ಯವಾದ ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ.